More

    ಗ್ರಾಮಗಳ ಅಭಿವೃದ್ಧಿಯಲ್ಲಿ ರಾಜಕೀಯ ಹಸ್ತಕ್ಷೇಪ ಬೇಡ

    ಆಳಂದ: ಗ್ರಾಮಗಳ ಅಭಿವೃದ್ಧಿಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೇ ಸರ್ಕಾರದ ಪ್ರತಿ ಒಂದು ಯೋಜನೆಯ ಲಾಭ ಪಡೆದು ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದು ಶಾಸಕ ಸುಭಾಷ ಗುತ್ತೇದಾರ್ ಹೇಳಿದರು.
    ಧಂಗಾಪುರ ಗ್ರಾಮದಲ್ಲಿ ಎಸ್.ಡಿ.ಪಿ ಯೋಜನೆ ಅಡಿ 2.50 ಕೋಟಿ ರೂ. ವೆಚ್ಚದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹಾಗೂ ಜಿಪಂ ಯೋಜನೆಯಲ್ಲಿ 18 ಲಕ್ಷ ರೂ ವೆಚ್ಚದ ಯೋಗಾ ಕ್ಯಾಂಪ್ ಕಟ್ಟಡದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು, ಆಳಂದ-ಗಾಣಗಾಪುರ ರಸ್ತೆ 10 ಕಿಮೀ ಕಾಮಗಾರಿ ಪೂರ್ಣಗೊಂಡಿದೆ. ಗಾಣಗಾಪುರ , ಧಂಗಾಪುರ, ಸಹಕಾರಿ ಸಕ್ಕರೆ ಕಾರ್ಖಾನೆ , ಕಿತ್ತೂರ ರಾಣಿ ಚನ್ನಮ್ಮ ವಸತಿ ನಿಲಯದಿಂದ ನೂತನ ಆರ್​ಟಿಒ ಕಚೇರಿ ಮುಖ್ಯರಸ್ತೆಗಾಗಿ 13 ಕೋಟಿ ರೂ. ಇಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿ ಇದೆ. ಈ ಭಾಗದ ಸಾರ್ವಜನಿಕರು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
    ಮುಖಂಡ ಜಗನ್ನಾಥ ಶೇಗಜಿ ಮಾತನಾಡಿ, ಮಾಜಿ ಶಾಸಕ ದಿ. ಶರಣಬಸಪ್ಪ ಮಾಲಿಪಾಟೀಲ್ ಅವಧಿಯಲ್ಲಿ ಸರ್ಕಾರದಿಂದ ಖರೀದಿ ಮಾಡಿದ 10 ಎಕರೆ ಭೂಮಿ ಗ್ರಾಮದ ಜನರು ಅಕ್ರಮವಾಗಿ ಕಬಳಿಸಿಕೊಳ್ಳುತ್ತಿದ್ದಾರೆ. ಆ ಸ್ಥಳಗಳನ್ನು ಸರ್ವೆ ಮಾಡಿಸಿ ಕಬ್ಜಾ ಮಾಡಿ ಕೊಳ್ಳಬೇಕು. ಗ್ರಾಮಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡಿಸಬೇಕು ಎಂಬ ಇತ್ಯಾದಿ ಬೇಡಿಕೆಗಳ ಒಳಗೊಂಡ ಮನವಿ ಪತ್ರ ಶಾಸಕರಿಗೆ ಸಲ್ಲಿಸಿದರು.
    ಟಿಎಚ್ಒ ಡಾ. ಅಭಯಕುಮಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಕೇಶ ಚವ್ಹಾಣ ಮಾತನಾಡಿದರು. ಗ್ರಾಮದ ಮುಖಂಡರಾದ ಸಿದ್ಧಣ್ಣಾ ಮಾಸ್ತರ ಶೇಗಜಿ , ಶಿವಶರಣಪ್ಪ ನಾಗೋಜಿ, ಶರಣಬಸಪ್ಪ ಕುಂಬಾರ ಲಕ್ಷ್ಮಣ ಕರುಣಾಕರ, ದೇವಿಂದ್ರ ನಾಟೀಕರ, ನಾಗರಾಜ ಶೇಗಜಿ, ನಾಗಪ್ಪ ಮುತ್ಯಾ, ಮಲ್ಲಣ್ಣಾಗೌಡ ಪಾಟೀಲ್, ಹಣಮಂತ ನಾಟೀಕರ, ಸಾತಲಿಂಗಪ್ಪ ಆಳಂದ, ನಾಗಣ್ಣಾ ಕಲಶಟ್ಟಿ , ವಿಠ್ಠಲ ಕೋರೆ, ಬಾಬು ರೆಡ್ಡಿ ಇಇ, ಪಾಲಾದಿ ಎಇಇ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts