More

    ಗುಂಡಿಮಯವಾಗಿದೆ ರಾಜ್ಯ ಹೆದ್ದಾರಿ

    ಉಪ್ಪಿನಬೆಟಗೇರಿ: ನಿತ್ಯ ನೂರಾರು ವಾಹನಗಳು ಸಂಚರಿಸುವ ಚಿಕಲ್​ಗುಡ್ಡ ಪಡಗುದ್ರಿ ನಂ.1 ರಾಜ್ಯ ಹೆದ್ದಾರಿ ಅಕ್ಷರಶಃ ಹಾಳಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

    ಗ್ರಾಮದ ಹಳೆಯ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ತೆರಳುವ ಸುಮಾರು ಅರ್ಧ ಕಿಮೀವರೆಗಿನ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಸ್ವಲ್ಪ ಮಳೆಯಾದರೆ ಸಾಕು ರಸ್ತೆಯಲ್ಲಿ ನೀರು ನಿಲ್ಲುತ್ತದೆ. ರಸ್ತೆಯಲ್ಲಿ ನೀರು ತುಂಬಿದ ಗುಂಡಿಗಳು ಗೊತ್ತಾಗದೇ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು, ಆಸ್ಪತ್ರೆ ಸೇರುತ್ತಿರುವುದು ಸಾಮಾನ್ಯವಾಗಿದೆ.

    ಕಳೆದ ವರ್ಷ ಆಗಸ್ಟ್​ನಲ್ಲಿ ಪ್ರವಾಹ ಬಂದು ಸವದತ್ತಿ-ಧಾರವಾಡ ಮಾರ್ಗ ಮಧ್ಯೆ ಇರುವ ಇನಾಂಹೊಂಗಲ ಬಳಿಯ ಸೇತುವೆ ಕುಸಿದು ಬಿದ್ದಿದೆ. ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಅದು ಸಂಚಾರಕ್ಕೆ ಮುಕ್ತವಾಗುವವರೆಗೆ ಅಲ್ಲಿ ತಾತ್ಕಾಲಿಕವಾಗಿ ಚಿಕ್ಕದೊಂದು ಸೇತುವೆ ನಿರ್ವಿುಸಲಾಗಿದೆ. ಆದರೆ, ಜೋರಾಗಿ ಮಳೆ ಬಂದರೆ ತಾತ್ಕಾಲಿಕ ಸೇತುವೆಯೂ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಆಗ ವಾಹನಗಳು ಉಪ್ಪಿನಬೆಟಗೇರಿ ಮೂಲಕ ತೆರಳುತ್ತವೆ. ಹೀಗಾಗಿ ವಾಹನಗಳ ದಟ್ಟಣೆಯಿಂದ ರಸ್ತೆ ಹದಗೆಟ್ಟಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಒಂದು ವರ್ಷದಿಂದ ಈ ರಸ್ತೆಯಲ್ಲಿ ಗುಂಡಿಗಳು ಬಿದ್ದು, ವಾಹನ ಚಾಲಕರು ಪರದಾಡುತ್ತಿದ್ದಾರೆ. ಈಗಾಗಲೆ ಮೂರ್ನಾಲ್ಕು ದ್ವಿಚಕ್ರ ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಆದ್ದರಿಂದ ಲೋಕೋಪಯೋಗಿ ಇಲಾಖೆಯವರು ಆದಷ್ಟು ಬೇಗನೆ ರಸ್ತೆ ದುರಸ್ತಿಗೊಳಿಸಬೇಕು.

    | ಬಸೀರ್ ಅಹ್ಮದ್ ಮಾಳಗಿಮನಿ, ಗ್ರಾಮಸ್ಥ

    ಉಪ್ಪಿನಬೆಟಗೇರಿ ಗ್ರಾಮದ ಮುಖ್ಯರಸ್ತೆ ಹಾಳಾದ ಬಗ್ಗೆ ಮಾಹಿತಿ ಇದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆ ದುರಸ್ತಿ ಮಾಡಿದರೂ ಪ್ರಯೋಜನವಿಲ್ಲ. ಹೀಗಾಗಿ ಮಳೆ ಬಿಡುವು ನೋಡಿಕೊಂಡು ದುರಸ್ತಿ ಮಾಡಲಾಗುವುದು.

    | ಎನ್.ವಿ. ಪಾಟೀಲ ಎಇಇ ಪಿಡಬ್ಲ್ಯುಡಿ ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts