More

    ಗಿರಿ ಜಿಲ್ಲೆ ಕೆರೆಗಳ ಅರಣ್ಯೀಕರಣಕ್ಕೆ ಕ್ರಮ ಕೈಗೊಳ್ಳಿ

    ಯಾದಗಿರಿ: ಜಿಲ್ಲೆಯ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳನ್ನು ಅರಣ್ಯೀಕರಣ ಮಾಡಿ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್. ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಶುಕ್ರವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆ 71 ಹಾಗೂ ಜಿಪಂ ವ್ಯಾಪ್ತಿಯ 268 ಸೇರಿ 339 ಕೆರೆಗಳಿವೆ. ಇವುಗಳ ಸುತ್ತ ಬೇಲಿ ಹಾಕುವುದರ ಜತೆಗೆ ಅಭಿವೃದ್ಧಿಗೆ ಕೂಡಲೇ ಮುಂದಾಗಬೇಕು ಎಂದರು.

    ಪ್ರಾಧಿಕಾರದ ಕಾನೂನು ಮತ್ತು ಅಧಿನಿಯಮಗಳನ್ವಯ ಸದಸ್ಯರು ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಎಲ್ಲ ಕೆರೆಗಳ ಸಮೀಕ್ಷೆ ನಡೆಸಿ ಹದ್ದುಬಸ್ತು ಮಾಡಬೇಕು. ಇನ್ನು ಜಿಲ್ಲೆಯ ಕೆರೆಗಳಿಗೆ ಬೇಲಿ ಅಳವಡಿಸಲು ಸುಮಾರು 14 ಕೋಟಿ ರೂ. ಅಗತ್ಯವಿದ್ದು, ಬಿಡುಗಡೆಗೊಳಿಸುವಂತೆ ಸಕರ್ಾರಕ್ಕೆ ಕೋರಲಾಗಿದೆ ಎಂದು ತಿಳಿಸಿದರು.

    ಯಾವ ಕೆರೆಯಲ್ಲಿ ಅನಧಿಕೃತವಾಗಿ ಕಟ್ಟಡಗಳು ತಲೆ ಎತ್ತಿವೆ ಎಂದು ಪರಿಶೀಲಿಸಿ ವರದಿ ನೀಡಬೇಕು. 2018-19 ಹಾಗೂ 2019-20ರಲ್ಲಿ ಜಿಲ್ಲಾಡಳಿತ ಹಾಗೂ ಭಾರತೀಯ ಜೈನ ಸಂಘದ ಸಹಯೋಗದಡಿ ಜಿಲ್ಲೆಯ 25 ಕೆರೆಗಳಿಂದ ಸುಮಾರು 16,95,582 ಕ್ಯೂ.ಮೀಟರ್ ಹೂಳು ತೆಗೆಯಲಾಗಿದ್ದು, 2019-20ರಲ್ಲಿ ಕೆರೆ ಸಂಜೀವಿನಿ ಕಾರ್ಯಕ್ರಮದಡಿ 31ರಲ್ಲಿ ಹೂಳೆತ್ತಲಾಗಿದೆ. ಅಲ್ಲದೆ 1.05 ಕೋಟಿ ರೂ. ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.

    2020-21ರಲ್ಲಿ ಜಿಲ್ಲೆಯ 169 ಮತ್ತು 2021-22ರಲ್ಲಿ 133 ಕೆರೆ ಹೂಳು ತೆಗೆಯಲಾಗಿದೆ. 2021-21ರಲ್ಲಿ ಸುಮಾರು 742 ಹಳ್ಳಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
    ಜಿಪಂ ಸಿಇಒ ಅಮರೇಶ ನಾಯ್ಕ, ಅಪರ ಡಿಸಿ ಶಂಕರಗೌಡ ಸೋಮನಾಳ, ಎಸಿ ಶಾ ಆಲಂ ಹುಸೇನ್, ನಗರಸಭೆ ಪೌರಾಯುಕ್ತ ಬಕ್ಕಪ್ಪ, ತಹಸೀಲ್ದಾರರಾದ ಚನ್ನಮಲ್ಲಪ್ಪ ಘಂಟಿ, ಸುರೇಶ ಅಂಕಲಗಿ, ಶರಣಬಸವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts