More

    ಗರ್ಭಿಣಿ ಕರೆದೊಯ್ಯಲು ತಾಲೂಕು ಕೇಂದ್ರದಲ್ಲೇ ಆಂಬುಲೆನ್ಸ್‌ಗಾಗಿ ಪರದಾಟ

    ಹೊಸನಗರ: ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್(108) ಸಿಗದೆ ಪರದಾಡಿದ ಘಟನೆ ಹೊಸನಗರ ತಾಲೂಕು ಕೇಂದ್ರ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಕಡೆಗೆ ಖಾಸಗಿ ವಾಹನದಲ್ಲಿ ಶಿವಮೊಗ್ಗಕ್ಕೆ ಕರೆದೊಯ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
    ಇಲ್ಲಿನ ಜಯನಗರದ ತುಂಬು ಗರ್ಭಿಣಿಗೆ ರಕ್ತದೊತ್ತಡದಲ್ಲಿ ಏರುಪೇರಾದ ಕಾರಣ ಸೋಮವಾರ ರಾತ್ರಿ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿಯ ವೈದ್ಯರು ಸಕಾಲಕ್ಕೆ ಸ್ಪಂದಿಸಿ ಚಿಕಿತ್ಸೆ ನೀಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವ ಕಾರಣ ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವುದು ಸೂಕ್ತ ಎಂದು ಸಲಹೆ ಮಾಡಿದ್ದಾರೆ.
    ಶಿವಮೊಗ್ಗಕ್ಕೆ ಕರೆದೊಯ್ಯಲು 108 ವಾಹನಕ್ಕೆ ಕರೆ ಮಾಡಿದರೆ ರಿಪ್ಪನ್‌ಪೇಟೆ, ಹುಂಚಾ, ಇಲ್ಲ ನಗರದಿಂದ ಕಳುಹಿಸುತ್ತೇವೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ ಒಂದೂವರೆ ಗಂಟೆಯಾದರೂ ಯಾವುದೇ ಆಂಬುಲೆನ್ಸ್ ಬರುವುದಿರಲಿ, ಅದರ ಸುಳಿವು ಕೂಡ ಕಂಡು ಬರಲಿಲ್ಲ. ಈ ನಡುವೆ ಗರ್ಭಿಣಿಯ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡು ಬಂದಿದ್ದು ಅಲ್ಲಿದ್ದ ಸ್ಥಳೀಯರೇ ಹಣ ಒಟ್ಟು ಮಾಡಿ ಖಾಸಗಿ ಆಂಬ್ಯುಲೆನ್ಸ್ ತರಿಸಿ ಶಿವಮೊಗ್ಗದ ಮೆಗ್ಗಾನ್ ಕಳುಹಿಸಿಕೊಟ್ಟಿದ್ದು ಅಲ್ಲಿ ಗರ್ಭಿಣಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts