More

    ಗಣಿತಕ್ಕೆ ರಾಮಾನುಜನ್ ಕೊಡುಗೆ ಅಪಾರ


    ಯಾದಗಿರಿ: ಗಣಿತ ಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದ್ದು, ಆರ್ಯಭಟ, ಬ್ರಹ್ಮಗುಪ್ತ, ಮಹಾವೀರ, ಭಾಸ್ಕರ, ಶ್ರೀನಿವಾಸ ರಾಮಾನುಜನ್ ಹಾಗೂ ಇತರ ಹಲವು ಗಣಿತಜ್ಞರ ಕೊಡುಗೆಗಳಿಂದ ಈ ಕ್ಷೇತ್ರ ಅತ್ಯಂತ ಶ್ರೀಮಂತಗೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಶೆಟ್ಟಿ ತಿಳಿಸಿದರು.

    ಶನಿವಾರ ನಗರದ ಆರ್ವಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಗಣಿತದ ಪಿತಾಮಹ ಶ್ರೀನಿವಾಸ ರಾಮಾನುಜನ್ ಜನ್ಮ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಮಿಳುನಾಡಿನ ಈ ರೋಡ್ನಲ್ಲಿ ಡಿಸೆಂಬರ್ 22, 1887 ರಲ್ಲಿ ಜನಿಸಿದ ರಾಮಾನುಜನ್ರಿಗೆ ಗಣಿತ ವಿಷಯದೊಂದಿಗೆ ಇದ್ದ ಒಲವು, ಅಪಾರ ಜ್ಞಾನದಿಂದಾಗಿ ಅವರು 12ನೇ ವಯಸ್ಸಿನಲ್ಲೇ ಟ್ರಿಗನಾಮೆಟ್ರಿ (ತ್ರಿಕೋನಮಿತಿ)ಯಲ್ಲಿ ಅವರು ನಿಪುಣರಾಗಿ, ಯಾರ ಸಹಾಯವೂ ಇಲ್ಲದೆ ಅನೇಕ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುತ್ತಾರೆ ಎಂದರು.

    ಮಾನವೀಯತೆಯ ಬೆಳವಣಿಗೆ, ಗಣಿತದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸಹ ‘ರಾಷ್ಟ್ರೀಯ ಗಣಿತ ದಿನ’ ಆಚರಣೆ ಹಿಂದಿನ ಮುಖ್ಯ ಉದ್ದೇಶವಾಗಿದೆ. ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಇಂದಿನ ವಿದ್ಯಾಥರ್ಿಗಳು ಹೆದರುತ್ತಾರೆ. ಈ ಬಗ್ಗೆ ಶಿಕ್ಷಕರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts