ಸಾಹಿತ್ಯಕ್ಕೆ ಉಭಾಳೆ ಸೇವೆ ಅಪಾರ

1 Min Read
ಸಾಹಿತ್ಯಕ್ಕೆ ಉಭಾಳೆ ಸೇವೆ ಅಪಾರ

ದೇವದುರ್ಗ: ತಾಲೂಕು ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಶಂಕರ್ ರಾವ್ ಉಭಾಳೆ ಅವರನ್ನು ಗೌತಮ್ ಓಣಿಯ ಅಂಬಾಭವಾನಿ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಮತ್ತು ಕನ್ನಡ ಪರ ಸಂಘ-ಸಂಸ್ಥೆಗಳಿಂದ ಭಾನುವಾರ ಸನ್ಮಾನಿಸಲಾಯಿತು.

ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಮಾತನಾಡಿ, ಕಥೆ, ಕವನ, ಕಾದಂಬರಿ, ಚುಟುಕು ಸಾಹಿತ್ಯದ ಮೂಲಕ ಶಂಕರ್ ರಾವ್ ತಾಲೂಕಿನ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರ ಸಾಹಿತ್ಯಕ್ಕೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಕಸಾಪ ಸದಸ್ಯರಾದ ಕ್ರಾಂತಿಕುಮಾರ್, ಗುಂಡೂರಾವ್ ನಾಯಕ್, ಬಲಭೀಮ ಹೂಗಾರ್, ಆಕಾಶ್, ಪ್ರಾಣೇಶ್ ಶೆಟ್ಟಿ, ಕೆ.ನಾಗರಾಜ್, ಲಿಂಗಪ್ಪ ಗೌಡೂರು, ಕೃಷ್ಣ, ಶ್ರೀನಿವಾಸ, ಬಸವರಾಜ್ ಕೊಪ್ಪರ್, ಮಲ್ಲೇಶ ಇತರರಿದ್ದರು

See also  ಇನ್‌ಸ್ಟಾಗ್ರಾಮ್‌ನಲ್ಲಿ 1 ಲಕ್ಷ ಫಾಲೋವರ್ಸ್ ಹೊಂದಿದ್ದ ಪತ್ನಿಯನ್ನು ಗುಂಡು ಹಾರಿಸಿ ಕೊಂದ ಪತಿ!
Share This Article