More

    ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಅಪಾರ

    ಕೂಡ್ಲಿಗಿ: ಗೆದ್ದಲಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀನಿವಾಸ ರಾಮಾನುಜನ್ ಗಣಿತ ಪ್ರಯೋಗಾಲಯ, ವಿಜ್ಞಾನ ವಸ್ತು ಪ್ರದರ್ಶನ, ಹೈಟೆಕ್ ಶೌಚಗೃಹ, ಮತ್ತು ಶಾಲೆ ಕಾಂಪೌಂಡನ್ನು ಶಾಸಕ ಎನ್.ಟಿ.ಶ್ರೀನಿವಾಸ್ ಶನಿವಾರ ಉದ್ಘಾಟಿಸಿದರು.

    ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕೀಳಿರಿಮೆ ಇರಬಾರದು. ರಾಷ್ಟ್ರಮಟ್ಟದ ವಿವಿಧ ಕ್ಷೇತ್ರಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚು ಗಮನ ಸೆಳೆದಿದ್ದಾರೆ. ಕ್ಷೇತ್ರದ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳನ್ನು ವಿಶೇಷ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು. ಗ್ರಾಪಂ ಅನುದಾನ ಬಳಸಿಕೊಂಡು ಶಾಲೆಯಲ್ಲಿ ಹೈಟೆಕ್ ಶೌಚಗೃಹ ನಿರ್ಮಿಸಿರುವುದು ಜಿಲ್ಲೆಗೆ ಮಾದರಿಯಾಗಿದೆ ಎಂದರು.

    ಗ್ರಾಪಂ ಅಧ್ಯಕ್ಷೆ ಚನ್ನಮ್ಮ ರಾಮಪ್ಪ, ಉಪಾಧ್ಯಕ್ಷೆ ಪಾಪಕ್ಕ ಬಸವರಾಜ, ಸದಸ್ಯರಾದ ರಾಮಸ್ವಾಮಿ, ಪಂಕಜಾ ತಿಪ್ಪೇಸ್ವಾಮಿ, ಬಸವರಾಜಪ್ಪ, ಜರ್ಮಲಿ ವಿಎಸ್‌ಎಸ್‌ಎನ್ ಅಧ್ಯಕ್ಷ ಹನುಮಂತರಾಯ, ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಬಿ.ಶಿವಾನಂದ, ತಾಲೂಕು ಅಧ್ಯಕ್ಷ ಜಿ.ಕೊಟ್ರೇಶ್, ಕಾರ್ಯದರ್ಶಿ ಟಿ.ಎಚ್.ಎಂ.ಶೇಖರಯ್ಯ, ಉಪಾಧ್ಯಕ್ಷ ಎಚ್.ಜಿ.ಹನುಮಂತಪ್ಪ, ಸಂಘಟನಾ ಕಾರ್ಯದರ್ಶಿ ಎಚ್.ಗೋಣಿಬಸಪ್ಪ, ಮುಖ್ಯ ಶಿಕ್ಷಕ ಜಿ.ಜಗದೀಶ್, ಪ್ರಮುಖರಾದ ಹನುಮೇಶ, ಜಿ.ರಮೇಶ, ಜಿ.ಸಿದ್ದನ ಗೌಡ, ನಾಗಲಿಂಗಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts