More

    ಗಣರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ನಿರ್ಧಾರ

    ಕುಶಾಲನಗರ: ತಾಲೂಕು ಆಡಳಿತದ ವತಿಯಿಂದ ಜ.26 ರಂದು ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.

    ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿರುವ ರಾಷ್ಟ್ರೀಯ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ವಿವಿಧ ಸಮಿತಿಗಳ ಪ್ರಮುಖರೊಂದಿಗೆ ತಹಸೀಲ್ದಾರ್ ಪ್ರಕಾಶ್ ಚರ್ಚೆ ನಡೆಸಿದರು.

    ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ, ವಿವಿಧ ಸಮಿತಿಗಳ ಪ್ರಮುಖರಾದ ಬಿ.ಎನ್.ಪುಷ್ಪಾ, ವೆಂಕಟೇಶ ಪೂಜಾರಿ, ಎಂ.ಕೃಷ್ಣ, ಚಂದ್ರಮೋಹನ್, ಉತ್ತಪ್ಪ, ಕೆ.ಎಸ್.ಭಾರತಿ, ಗಣೇಶ್,ಟಿ.ಜಿ.ಪ್ರೇಮಕುಮಾರ್, ಪ್ರಮೀಳಾ, ಕೂಡ ಅಧ್ಯಕ್ಷ ಎಂ.ಎಂ.ಚರಣ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts