More

    ಗಡಿ ವಿಚಾರದಲ್ಲಿ ಕೇಂದ್ರದ ಮಧ್ಯಪ್ರವೇಶ ಅನವಶ್ಯಕ – ಎಚ್​.ಕೆ. ಪಾಟೀಲ

    ಬೆಳಗಾವಿ: ಕರ್ನಾಟಕ&ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್​ ವರದಿ ಸಂಪೂರ್ಣ ಅನುಷ್ಠಾನ ಇಲ್ಲವೇ ಯಥಾ ಸ್ಥಿತಿಯಲ್ಲಿ ಮುಂದುವರಿಯುವುದು ಕರ್ನಾಟಕದ ನಿಲುವಾಗಿದೆ. ಆದರೆ, ಅನವಶ್ಯಕವಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವುದನ್ನು ಕಾಂಗ್ರೆಸ್​ ಸಹಿಸು ವುದಿಲ್ಲ ಎಂದು ಮಾಜಿ ಸಚಿವ ಎಚ್​.ಕೆ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

    ನಗರದ ಕಾಂಗ್ರೆಸ್​ ಭವನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಚಾರದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಸದನದಲ್ಲಿ ಠರಾವು ಪಾಸು ಮಾಡಿ, ತನ್ನ ನಿಲುವು ತಿಳಿಸಿತ್ತು. ಹೀಗಿದ್ದಾಗಲೂ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು, ಗಡಿಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದಕ್ಕೆ ಸಮಿತಿ ರಚಿಸುವುದು ಅಗತ್ಯವಿರಲಿಲ್ಲ. ಗಡಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯದ ಗೃಹ ಇಲಾಖೆ ವಿಫಲವಾಗಿತ್ತೇ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.

    ರಾಜ್ಯದ ಮುಖ್ಯಮಂತ್ರಿ ಮಹಾರಾಷ್ಟ್ರದ ಮಂತ್ರಿಗಳ ಜತೆ ಚರ್ಚಿಸುವ ಬದಲು, ಕರ್ನಾಟಕದ ವಿರೋಧ ಪ ಸೇರಿ ಸರ್ವ ಪಗಳ ಸಭೆ ನಡೆಸಿ ಚರ್ಚಿಸಬೇಕಿತ್ತು. ಹಿಂದಿನಂತೆಯೇ ಈ ಭಾರಿ ಸದನದಲ್ಲಿ ಸರ್ವಾನುಮತದಿಂದ ರ್ನಿಣಯ ಕೈಗೊಂಡು ಗಡಿ ವಿಚಾರದಲ್ಲಿ ಯಥಾಸ್ಥಿತಿ ಇಲ್ಲವೆ ಮಹಾಜನ ವರದಿ ಅನುಷ್ಠಾನಕ್ಕೆ ಬದ್ಧ ಎಂಬ ಸ್ಪಷ್ಟ ಸಂದೇಶ ರವಾನಿಸಬೇಕಿದೆ. ಅಲ್ಲದೆ, ಗಡಿ ವಿವಾದದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಈಗಾಗಲೇ ಸಾಕಷ್ಟು ಪ್ರಮಾದ ಮಾಡಿದೆ.

    ಈ ಬಗ್ಗೆ ವಿಚಾರಣೆ ಸುಪ್ರಿಂಕೋರ್ಟ್​ನಲ್ಲಿ ವಿಚಾರಣೆ ಇರುವುದರಿಂದ ರಾಜ್ಯ ಸರ್ಕಾರ ತಪ್ಪು ಹೆಜ್ಜೆ ಇಡಬಾರದು. ಭವಿಷ್ಯದಲ್ಲಿ ಅವುಗಳೇ ಮಹಾರಾಷ್ಟ್ರಕ್ಕೆ ದಾಖಲೆಗಳಾಗಬಾರದು. ಅಧಿವೇಶನದಲ್ಲಿ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಎಲ್ಲವನ್ನೂ ಚರ್ಚಿಸುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts