More

    ಕೋವಿಡ್ ಕಾಲದ ಪೋತ್ಸಾಹಾಂಕಕ್ಕೆ ಆಗ್ರಹ, ಜಿಲ್ಲಾಡಳಿತ ಭವನದ ಆವರಣದಲ್ಲಿ ದಸಂಸ, ರೈತ ಸಂಘ ಪ್ರತಿಭಟನೆ

    ಬೆಂಗಳೂರು ಗ್ರಾಮಾಂತರ: ಗ್ರಾಮೀಣ ಪ್ರದೇಶಗಳಲ್ಲಿನ ಬಡ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಾವಧಿಯ ವಿಶೇಷ ಪ್ರೋತ್ಸಾಹಾಂಕ ನೀಡಬೇಕು ಎಂದು ಆಗ್ರಹಿಸಿ ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗ ಬುಧವಾರ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಒಕ್ಕೂಟ ಮತ್ತು ರಾಜ್ಯ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.

    ದೇಶದಲ್ಲಿ 10ನೇ ತರಗತಿ ಪರೀಕ್ಷೆಗಳು ರದ್ದಾಗಿದ್ದರೂ ಕರ್ನಾಟಕ ಸರ್ಕಾರ, ಸಾರ್ವಜನಿಕರ ವಿರೋಧದ ನಡುವೆಯೂ ಪರೀಕ್ಷೆ ನಡೆಸಿ ಗ್ರಾಮೀಣ ಭಾಗದ ಲಕ್ಷಾಂತರ ವಿಧ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಿದೆ. ಆದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿನ ದಲಿತ, ಹಿಂದುಳಿದ ವಿದ್ಯಾರ್ಥಿಗಳಿಗೆ ಕೋವಿಡ್ ಅವಧಿಯ ಪೋತ್ಸಾಹಾಂಕ ನೀಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.

    ಮಕ್ಕಳ ನಡುವೆ ಅಸಮಾನತೆ: ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಬಹಳಷ್ಟು ತೊಂದರೆ ಉಂಟಾಗಿದೆ. ಆನ್‌ಲೈನ್ ತರಗತಿಗಳು ಬಡ ಮತ್ತು ಶ್ರೀಮಂತರ ಮಕ್ಕಳ ನಡುವೆ ಅಸಮಾನತೆಗೆ ಕಾರಣವಾಗಿದೆ. ಬಡ ಮಕ್ಕಳ ಪಾಲಕರು ಮಕ್ಕಳಿಗೆ ಮೊಬೈಲ್ ಕೊಡಿಸಲಾಗದ ಸಂಕಷ್ಟ ಒಂದೆಡೆಯಾದರೆ ಮೊಬೈಲ್ ಹೊಂದಿರುವ ಗ್ರಾಮೀಣ ಭಾಗದ ಮಕ್ಕಳಿಗೆ ಮೊಬೈಲ್ ನೆಟ್‌ವರ್ಕ್ ಸಿಗದೆ ಉಂಟಾಗುವ ಸಮಸ್ಯೆಯಿಂದ ಕಲಿಕೆಯಲ್ಲಿ ಮಕ್ಕಳು ಹಿಂದುಳಿದಿವೆ ಎಂದು ಹೋರಾಟಗಾರರು ತಿಳಿಸಿದರು.

    ಇದರಿಂದಾಗಿ ಕಲಿಕೆ ಸಾಧ್ಯವಾಗದ ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಸಾಂಕ್ರಾಮಿಕ ರೋಗ ಕಾಲದ ವಿಶೇಷ ಪೋತ್ಸಾಹಾಂಕಗಳನ್ನು ನೀಡಬೇಕು ಎಂದು ಸಮಿತಿ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಆಗ್ರಹಿಸಿದರು.

    ಮವಿ ಪತ್ರವನ್ನು ಅಪ ಜಿಲ್ಲಾಧಿಕಾರಿ ವಿಜಯಾ ಇ ರವಿಕುಮಾರ್ ಅವರಿಗೆ ಸಲ್ಲಿಸಿದರು. ಮುಖಂಡರಾದ ಕೊರಳೂರು ಶ್ರೀನಿವಾಸ್, ರಾಜು ಸಣ್ಣಕ್ಕಿ , ಮುನಿಸ್ವಾಮಿ, ವೆಂಕಟೇಶಪ್ಪ, ಎಂ ನಾರಾಯಣ ಸ್ವಾಮಿ, ನಾಗರಾಜು ಗಂಗಾವರ, ಡಿಕೆ ವೇಲು, ಪಿ ನರಸಪ್ಪ, ಸಿ ಮುನಿರಾಜು, ವಿ ರಮೇಶ್, ಸಿ ಬಿ ಮೋಹನ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts