More

    ಕೈಜೋಡಿಸಿದ ಕಲಬುರಗಿ ಮಂದಿ

    ಜಯತೀರ್ಥ ಪಾಟೀಲ ಕಲಬುರಗಿ: ಕರೊನಾ ಮಹಾಮಾರಿ ಅಟ್ಟಹಾಸಕ್ಕೆ ಸಿಲುಕಿ ನಗರದ ಜನತೆ ಬೆಚ್ಚಿದ್ದಾರೆ. ಸೋಂಕು ಪ್ರಕರಣಗಳೂ ಏರಿಕೆಯಾಗಿವೆ. ಈ ಮಧ್ಯೆ ಲಾಕ್ಡೌನ್ ಬಿಸಿ. ಹೀಗಾಗಿ ಸಾವಿರಾರು ಜನರಿಗೆ ಉದರ ಪೋಷಣೆ ದುಸ್ತರವಾಗಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರದ ಜತೆ ಅನೇಕ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಪ್ರತಿಷ್ಠಾನಗಳು ಖಾಸಗಿಯಾಗಿ ಬಡವರು, ನಿರ್ಗತಿಕರ ಹಸಿವು ತಣಿಸುವಲ್ಲಿ ಸಕ್ರೀಯವಾಗಿ ಬಡವರ ಹೊಟ್ಟೆ ತುಂಬಿಸುವ ಕೆಲಸದಲ್ಲಿ ತೊಡಗಿವೆ.
    ಸರ್ಕಾರ ಬಡವರಿಗೆ ರೇಷನ್ ಜತೆಗೆ ದೇಣಿಗೆ ರೂಪದಲ್ಲಿ ಬಂದಿರುವ ಆಹಾರ ಧಾನ್ಯವನ್ನು ನೀಡುತ್ತಿದ್ದರೆ ಈ ತುರ್ತು ಪರಿಸ್ಥಿತಿಯನ್ನು ಅರಿತ ಖಾಸಗಿ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಊಟ, ಆಹಾರ ಧಾನ್ಯ ವಿತರಿಸಿ ಮಾನವೀಯತೆ ಮೆರೆಯುತ್ತಿವೆ.
    ಬಿ.ಜಿ. ಪಾಟೀಲ್: ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮತ್ತು ಅವರ ಪುತ್ರ ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಸಾಕಷ್ಟು ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಪ್ಯಾಕೆಟ್ ವಿತರಿಸಿದ್ದಾರೆ. ಜತೆಗೆ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅವರು ಗ್ರಾಮೀಣ ಪ್ರದೇಶಗಳಲ್ಲಿ, ಮಹಾಗಾಂವ್, ಕಮಲಾಪುರ ಮತ್ತು ಶಹಾಬಾದಗಳಲ್ಲಿ ಆಹಾರ ಸಾಮಗ್ರಿ ಪ್ಯಾಕೆಟ್ಗಳನ್ನು ವಿತರಿಸಿದ್ದಾರೆ.
    ಧರ್ಮಸಿಂಗ್ ಫೌಂಡೇಶನ್
    ದಿ.ಎನ್.ಧರ್ಮಸಿಂಗ್ ಫೌಂಡೇಶನ್ ಅಡಿ ಶಾಸಕ ಡಾ.ಅಜಯಸಿಂಗ್ ಅವರು ಜೇವಗರ್ಿಯಲ್ಲಿ ನಿತ್ಯ ಸಾವಿರಾರು ಜನರಿಗೆ ಅನ್ನ ದಾಸೋಹ ಆಯೋಜಿಸಿದ್ದು, ಲಾಕ್ಡೌನ್ ಪೂರ್ಣಗೊಳ್ಳುವರೆಗೂ ಈ ದಾಸೋಹ ನಿರಂತರ ನಡೆಯಲಿದೆ ಎಂದು ಹೇಳಿದ್ದಾರೆ. ಜತೆಗೆ ಸಾವಿರಾರು ಜನರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸುತ್ತಿದ್ದಾರೆ. ಕೇವಲ ಜೇವಗರ್ಿ ಅಷ್ಟೇ ಅಲ್ಲದೇ ಕಲಬುರಗಿ ಮತ್ತು ಬೆಂಗಳೂರಿನಲ್ಲಿರುವ ಕಾಮರ್ಿಕರ ಕುಟುಂಬಗಳಿಗೆ ಸಾಮಗ್ರಿ ವಿತರಿಸುವ ಕೆಲಸದಲ್ಲಿ ತೊಡಗಿದ್ದಾರೆ.
    ಕಲಬುರಗಿ ಜಿ-99 ಗೆಳೆಯರ ಬಳಗ
    ಜಿ-99 ಮತ್ತು ಜಿ-55 ಗೆಳೆಯರ ಬಳಗದಿಂದ ನಗರದಲ್ಲಿ ಮಾಚರ್್ 29ರಿಂದ ಆಹಾರ ಧಾನ್ಯ ವತರಿಸುತ್ತಿದ್ದು, ಈವರೆಗೆ ಸುಮಾರು 60 ಕ್ವಿಂಟಾಲ್ ಅಕ್ಕಿ, 15 ಕ್ವಿಂಟಾಲ್ ಬೇಳೆ, 15 ಕ್ವಿಂಟಾಲ್ ರವಾ, 15 ಕ್ವಿಂಟಾಲ್ ಅವಲಕ್ಕಿ, ಊಟದ ಎಣ್ಣೆ, ಸಕ್ಕರೆ ಇತರೆ ದಿನ ವಸ್ತುಗಳನ್ನು ವಿತರಿಸುತ್ತಿದೆ. ಜತೆಗೆ ನಿತ್ಯ 200 ಜನ ನಿರ್ಗತಿಕರು, ಬಡವರಿಗೆ ಊಟದ ವ್ಯವಸ್ಥ ಮಾಡಿದೆ. ಗೆಳೆಯರ ಬಳಗದ ಮುಖ್ಯಸ್ಥ ಶರಣು ಪಪ್ಪಾ ನೇತೃತ್ವದಲ್ಲಿ ಈ ಕಾರ್ಯ ಲಾಕ್ಡೌನ್ ಮುಗಿಯವವರೆಗೂ ಮುಂದುವರಿಸಲು ನಿರ್ಧರಿಸಿದ್ದಾರೆ.
    ಶ್ರೀಗುರು ವಿದ್ಯಾಪೀಠ
    ಕಲಬುರಗಿ ಖಣದಾಳದ ಶ್ರೀಗುರು ವಿದ್ಯಾಪೀಠದ ಅಧ್ಯಕ್ಷ ಬಸವರಾಜ ದಿಗ್ಗಾವಿ, ಕಾರ್ಯದಶರ್ಿ ಶಿವರಾಜ ದಿಗ್ಗಾವಿ ನೇತೃತ್ವದಲ್ಲಿ ಕಳೆದ ಎಂಟು ದಿನಗಳಿಂದ ಊಟ ಮತ್ತು ತಿಂಡಿ ವಿತರಣೆ ನಡೆದಿದೆ. ನಿತ್ಯ ಊಟ ಮತ್ತು ಉಪಹಾರ ಸೇರಿ ಸುಮಾರು 1500 ಪ್ಯಾಕೆಟ್ಗಳನ್ನು ವಿತರಿಸಲಾಗುತ್ತಿದೆ.
    ಕಲಬುರಗಿ ಬಿಜೆಪಿ
    ಎನ್ಜಿಒ, ವಿವಿಧ ಸಂಘ-ಸಂಸ್ಥೆಗಳ ನೆರವಿನೊಂದಿಗೆ ನಿತ್ಯ 1500 ಜನರಿಗೆ ಊಟ ಒದಗಿಸಲಾಗುತ್ತಿದ್ದು, ಬಿಜೆಪಿ ಯುವ ಮುಖಂಡ ಚಂದು ಪಾಟೀಲರು ಈಗಾಗಲೇ 10 ಸಾವಿರ ಆಹಾರ ಸಾಮಗ್ರಿ ಕಿಟ್ ವಿತರಣೆ ಮಾಡಿದ್ದಾರೆ. ಪೊಲೀಸರು, ಪೌರಕಾಮರ್ಿಕರಿಗೆ ಬಿಜೆಪಿ ಯುವ ಮೋಚರ್ಾ ವತಿಯಿಂದ 7 ಟನ್ ಕಲ್ಲಂಗಡಿ ಹಣ್ಣು ವಿತರಣೆ ಮಾಡಲಾಗಿದೆ.
    ಕಲಬುರಗಿ ಕಾಂಗ್ರೆಸ್
    ಕಾಂಗ್ರೆಸ್ ವತಿಯಿಂದ ನೂರಾರು ಜನರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಲಾಗಿದ್ದು, ಬ್ಲಾಕ್ವಾರು ನಿತ್ಯ ವಿತರಣೆ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ತಿಳಿಸಿದ್ದಾರೆ.
    ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲರು ತಮ್ಮ ಸ್ನೇಹಿತರೊಡಗೂಡಿ ಆಹಾರ ಸಾಮಗ್ರಿಯ 400 ಕಿಟ್ ವಿತರಣೆ ಮಾಡಿದ್ದಾರೆ. ಮಾಜಿ ಮೇಯರ್ ಶರಣಕುಮಾರ ಮೋದಿಯವರು ಸುಮಾರು ಆಹಾರ ಸಾಮಗ್ರಿಯ 500 ಕಿಟ್, ಆನಂದ ದಂಡೋತಿ, ಸಂತೋಷ ವಮರ್ಾ, ಬಸವರಾಜ ಕಮರಡಗಿಯವರೂ ನೂರಾರು ಜನರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.
    ನಾಲ್ಕು ಚಕ್ರ ಸಂಸ್ಥೆಯವರೂ ಒಂದು ತಂಡ ರಚಿಸಿಕೊಂಡು ನಿತ್ಯ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ, ತಾಲೂಕು ಪಂಚಾಯಿತಿ ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಹಾನಗರವೂ ಸೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಅನೇಕರು ಸಂಕಷ್ಟದಲ್ಲಿದ್ದ ಜನರಿಗೆ ನೆರವು ನೀಡುತ್ತಿದ್ದಾರೆ.

    ಕರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಾಗಿ ಬಡವರು, ನಿರ್ಗತಿಕರು, ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಾನವೀಯತೆ ಆಧಾರದ ಮೇಲೆ ಈ ಜನಕ್ಕೆ ಅನುಕೂಲ ಒದಗಿಸಲು ಈಗಾಗಲೇ ಆಹಾರ ಸಾಮಗ್ರಿಯ ಹತ್ತು ಸಾವಿರ ಕಿಟ್ಗಳನ್ನು ವಿತರಿಸಲಾಗಿದೆ. ಅಗತ್ಯ ಎನಿಸಿದಲ್ಲಿ ಈ ಕಾರ್ಯ ಲಾಕ್ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ನಿರಂತರ ಮುಂದುವರಿಯಲಿದೆ. ಉಳ್ಳವರೂ ಸಹ ಈ ಸಂದರ್ಭದಲ್ಲಿ ನೆರವಿಗೆ ಮುಂದಾಗುವುದು ಅಗತ್ಯ.
    ಚಂದು ಪಾಟೀಲ್,
    ಬಿಜೆಪಿ ಯುವ ಮುಖಂಡ, ಕಲಬುರಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts