More

    ಕೆವಿಜಿ ಬ್ಯಾಂಕ್​ನಿಂದ 50 ಲಕ್ಷ ರೂ. ದೇಣಿಗೆ

    ಧಾರವಾಡ: ಕೋವಿಡ್​ 9 ನಿಧಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ 50 ಲಕ್ಷ ರೂ. ದೇಣಿಗೆ ನೀಡಿದರು. ಬ್ಯಾಂಕ್ ಅಧ್ಯಕ್ಷ ಪಿ. ಗೋಪಿಕೃಷ್ಣ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಚೆಕ್ ಮೂಲಕ ಸೋಮವಾರ ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಗೋಪಿಕೃಷ್ಣ, ಕರೊನಾ ವೈರಸ್ ಒಂದೆಡೆ ಜನತೆಯ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದರೆ ಇನ್ನೊಂದಡೆ ದೇಶದ ಆರ್ಥಿಕತೆಗೂ ಹೊಡೆತ ನೀಡಿದೆ. ಈ ಸಂದರ್ಭದಲ್ಲಿ ಸರ್ಕಾರದ ಆದೇಶ ಪಾಲಿಸಿ ನಿರಾತಂಕ ಬ್ಯಾಂಕ್ ವ್ಯವಹಾರಕ್ಕೆ ಅನುವು ಮಾಡಿಕೊಡಲಾಗಿದೆ. ಸಂಗ್ರಹಗೊಂಡ 50 ಲಕ್ಷ ರೂ.ಗಳಲ್ಲಿ 22.50 ಲಕ್ಷ ಪ್ರಧಾನಂತ್ರಿ ಕೇರ್ ಫಂಡ್, 20 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು 7.50 ಲಕ್ಷ ರೂ. ಕರೊನಾ ವೈರಸ್ ಪೀಡಿತರ ಚಿಕಿತ್ಸೆಗೆ ಸಂಬಂಧಿಸಿ ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ನೇತೃತ್ವದಲ್ಲಿ ಕಟ್ಟಲು ಉದ್ದೇಶಿಸಿರುವ ಸುಸಜ್ಜಿತ ಚಿಕಿತ್ಸಾ ಕೊಠಡಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಬ್ಯಾಂಕ್​ನ ಮಹಾಪ್ರಬಂಧಕ ಪಿ. ನಾಗೇಶ್ವರ ರಾವ್, ಸಹಾಯಕ ಮಹಾಪ್ರಬಂಧಕ ಶ್ರೀಕಾಂತ ಹೆಗಡೆ, ಮುಖ್ಯ ಪ್ರಬಂಧಕ ತಿರುಮಲೇಶ್ವರ ಭಟ್, ಹಿರಿಯ ಪ್ರಬಂಧಕ ಉಲ್ಲಾಸ ಗುನಗಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts