More

    ಕೆಳಹಂತದ 30 ಸೇತುವೆ ಮುಳುಗಡೆ

    ಬೆಳಗಾವಿ: ನಿರಂತರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು ಕೆಳಹಂತದ ಒಟ್ಟು 30 ಸೇತುವೆ ಮುಳುಗಡೆಯಾಗಿವೆ. ಕಷ್ಣಾ ನದಿಯಲ್ಲಿ 1 ಲಕ್ಕೂ ಅ-ಧಿಕ ಕ್ಯೂಸೆಕ್​ ನೀರು ಒಳಹರಿವು ಇದೆ. ಆದರೆ ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದರು.

    ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ಜರುಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿಡಿಯೋ ಸಂವಾದಲ್ಲಿ ಮಾತನಾಡಿ, ಕೃಷ್ಣಾ, ಟಪ್ರಭಾ ನೀರಿನಮಟ್ಟ ಏರಿಕೆಯಾಗುತ್ತಿದೆ. ಕೆಳಹಂತದ ಸೇತುವೆ ಮುಳುಗಡೆಯಾಗಿದ್ದರೂ ಪರ್ಯಾಯ ಮಾರ್ಗ ಇರುವುದರಿಂದ ಸಂಚಾರಕ್ಕೆ ತೊಂದರೆಯಾಗಿಲ್ಲ ಎಂದರು.

    ಮನೆ ಕುಸಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ವದ್ಧೆಯೊಬ್ಬರು ಮತಪಟ್ಟಿದ್ದು, ಕುಟುಂಬದ ವಾರಸುದಾರರಿಗೆ ಐದು ಲ ರೂ.ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 5 ಮನೆ ಪೂರ್ಣವಾಗಿ ಕುಸಿದಿವೆ. 102 ಮನೆಗಳು ಭಾಗಶ@ ಹಾನಿಯಾಗಿರುತ್ತವೆ. ಸಂಪೂರ್ಣ ಕುಸಿದಿರುವ ಮನೆಗಳಿಗೆ ಎನ್​.ಡಿ.ಆರ್​.ಎ್​. ಮಾರ್ಗಸೂಚಿ ಪ್ರಕಾರ ತಲಾ 1.20 ಲ ರೂ.ಪರಿಹಾರ ನೀಡಲಾಗಿದೆ. ಕೆ.ಆರ್​.ಐ.ಡಿ.ಸಿ.ಎಲ್​. ವತಿಯಿಂದ ಐದು ದೊಡ್ಡ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇವು ಪೂರ್ಣಗೊಂಡರೆ ಸಮಸ್ಯೆ ಬಗೆಹರಿಯಲಿದೆ ಎಂದರು.
    ನಿಪ್ಪಾಣಿಯಲ್ಲಿ ವೇದಗಂಗಾ&ದೂಧಗಂಗಾ ನದಿಯ ಒಳಹರಿವು ಹೆಚ್ಚಾಗಿರುವುದರಿಂದ ಅಗತ್ಯವಿರುವ ಎರಡು ಕಡೆಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಕುಟುಂಬಗಳನ್ನು ಕೂಡ ಸ್ಥಳಾಂತರಿಸಲಾಗಿದೆ ಎಂದು ವಿವರಿಸಿದರು.

    ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಬೆಳಗಾವಿ ನಗರ ಪೊಲೀಸ್​ ಆಯುಕ್ತ ಎಸ್​.ಎನ್​.ಸಿದ್ದರಾಮಪ್ಪ, ಜಿಪಂ ಸಿಇಒ ಹರ್ಷಲ್​ ಭೋಯರ್​, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಪ್ರೊಬೇಷನರಿ ಐಎಎಸ್​ ಅಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್​ ಹೊನಕೇರಿ, ಉಪ ವಿಭಾಗಾಧಿಕಾರಿಗಳಾದ ರಾಜೇಶ್​ ನಾಯಕ, ಪ್ರಭಾವತಿ ಕೀರಪೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts