More

    ಕೆಕೆಆರ್​ಡಿಬಿ ಅನುದಾನಕ್ಕೂ ಕತ್ತರಿ?

    ಬಾಬುರಾವ ಯಡ್ರಮಿ ಕಲಬುರಗಿ
    ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿಗೆ ಬ್ರೇಕ್ ಹಾಕಿದ ಬೆನ್ನಲ್ಲೇ ಈ ಭಾಗದ ಅಭಿವೃದ್ಧಿಗೆ ಸಂವಿಧಾನ ಬದ್ಧವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಅನುದಾನಕ್ಕೂ ಸರ್ಕಾರ ಕತ್ತರಿ ಪ್ರಯೋಗ ಮಾಡಲು ಮುಂದಾಗಿದೆ. ಇದರಿಂದಾಗಿ ಮಂಡಳಿಗೆ ಅಂದಾಜು 500 ಕೋಟಿ ರೂ. ಖೋತಾ ಆಗುವ ಸಾಧ್ಯತೆ ಇದೆ.
    ಕರೊನಾದಿಂದಾಗಿ ಸರ್ಕಾರ ಆರ್ಥಿಕ ಮಿತವ್ಯಯ ಮಂತ್ರ ಜಪಿಸಲು ಆರಂಭಿಸಿದ್ದರಿಂದ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದಿರಲು ತೀರ್ಮಾನಿಸಿ ಆದೇಶ ಹೊರಡಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮಂಡಳಿ ಸಭೆಯಲ್ಲಿ ಸಿಎಂ ಹಾಗೂ ಡಿಸಿಎಂ ಕೆಕೆಆರ್ಡಿಬಿಗೆ ಅನುದಾನ ಕಡಿತಗೊಳಿಸುವ ಮುನ್ಸೂಚನೆ ನೀಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
    ಲಭ್ಯ ಮಾಹಿತಿ ಪ್ರಕಾರ, ಪ್ರಸಕ್ತ ಸಾಲಿಗೆ ಕೇವಲ 1136 ಕೋಟಿ ರೂ. ಕ್ರಿಯಾಯೋಜನೆ ರೂಪಿಸುವಂತೆ ಸರ್ಕಾರ ಯೋಜನಾ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದೆ. ಆದರೆ ಇಷ್ಟೊಂದು ಹಣ ನೀಡಲು ಆರ್ಥಿಕ ಇಲಾಖೆ ಸಹಮತಿಸಿಲ್ಲ. ಇದು ಇನ್ನಷ್ಟು ಕಡಿತಗೊಳ್ಳುತ್ತದೆ. ಈಚೆಗೆ ಕಲಬುರಗಿ ಜಿಲ್ಲೆ ಶಾಸಕರ ಸಭೆ ನಡೆಸಿದ ವೇಳೆ 1136 ಕೋಟಿ ರೂ. ಕ್ರಿಯಾಯೋಜನೆ ರೂಪಿಸೋಣ ಎಂಬ ಪ್ರಸ್ತಾಪವನ್ನು ಡಿಸಿಎಂ ಗೋವಿಂದ ಕಾರಜೋಳ ಮಾಡಿದ್ದರು. ಕರೊನಾ ಹಾವಳಿಯಿದೆ, ಹಣಕಾಸು ಸ್ಥಿತಿ ಸರಿಯಿಲ್ಲ. ಹೀಗಾಗಿ ಅಷ್ಟು ಬೇಡ ಎಂಬ ಮಾತು ಸಿಎಂ ಅಡಿರುವುದು ಕಲ್ಯಾಣ ಕರ್ನಾಟಕದ ಬಿಜೆಪಿ ಶಾಸಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
    ಹಿಂದಿನ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸರ್ಕಾರಗಳು ಘೋಷಿಸಿದಂತೆ ಹಾಗೂ ಹಾಲಿ ಸಿಎಂ ಬಿ.ಎಸ್. ಯಡಿಯೂರಪ್ಪ ನೀಡಿರುವ ಭರವಸೆಯಂತೆ ಕನಿಷ್ಠ 1500 ಕೋಟಿ ರೂ. ಮಂಡಳಿಗೆ ಸಿಗಬೇಕು. ಬಜೆಟ್ನಲ್ಲೂ ಘೋಷಣೆ ಮಾಡಲಾಗಿದೆ. ಕಳೆದ ಸೆ.17ರಂದು ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಳಿಗೆ ಘೋಷಿಸಿರುವ 1500 ಕೋಟಿ ರೂ. ಹೆಚ್ಚಿಸುವ ಭರವಸೆ ನೀಡಿದ್ದರು. ಆದರೀಗ ಕರೊನಾ ಪ್ರವಾಹದಲ್ಲಿ ಅದು ಕೊಚ್ಚಿ ಹೋಗಿರುವಂತಿದೆ.
    ಕೋವಿಡ್-19 ನೆಪವೊಡ್ಡಿ ಅನುದಾನ ಕಡಿತಗೊಳಿಸಿದರೆ ಕಲಬುರಗಿ ವಿಭಾಗದ ಆರು ಜಿಲ್ಲೆಗಳ ಪ್ರಗತಿಗೆ ಹಿನ್ನಡೆ ಆಗಲಿದೆ. ಹೀಗಾಗಿ ಸರ್ಕಾ ಹಿಂದುಳಿದ ಪ್ರದೇಶದ ಬಗ್ಗೆ ಅನಾದರ ಮಾಡದೆ ಘೋಷಿಸಿದಷ್ಟು ಅನುದಾನ ನೀಡಬೇಕು. ಆಗಲೇ ಸಿಎಂ ಹೇಳಿದಂತೆ ಒಂದಿಷ್ಟು ನಿಜ ಕಲ್ಯಾಣ ಕರ್ನಾಟಕ ಆಗಲು ಸಾಧ್ಯವಾಗಬಹುದು.

    ಹುದ್ದೆಗಳ ನೇಮಕಾತಿ ನಿಲ್ಲಿಸಿ ಉದ್ಯೋಗಕಾಂಕ್ಷಿಗಳಿಗೆ ಬಿಜೆಪಿ ಸಕರ್ಾರ ಶಾಕ್ ನೀಡಿದೆ. ಸಂವಿಧಾನ ಬದ್ಧವಾಗಿರುವ ಕೆಕೆಆರ್ಡಿಬಿಗೆ 2500 ಕೋಟಿ ಅನುದಾನ ನೀಡುವಂತೆ ಕಲ್ಯಾಣ ಕನರ್ಾಟಕ ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವು. ಕರೊನಾ ನೆಪ ಹೇಳಿ ಹೆಚ್ಚಿಸುವುದು ಬೇಡ. ಆದರೆ ಘೋಷಿಸಿದಂತೆ 1500 ಕೋಟಿ ರೂ. ನೀಡಬೇಕು. ಈಚೆಗೆ ಸಭೆಯೊಂದರಲ್ಲಿ 1136 ಕೋಟಿ ರೂ. ಕ್ರಿಯಾಯೋಜನೆ ರೂಪಿಸುವಂತೆ ಹೇಳಿದ್ದನ್ನು ಗಮನಿಸಿದರೆ ಈ ಭಾಘದ 41 ಕ್ಷೇತ್ರಗಳ ಅಭಿವೃದ್ಧಿಗೆ ಭಾರಿ ಹೊಡೆತ ಬೀಳಲಿದೆ. ಯಾವುದೇ ಕಾರಣಕ್ಕೂ ಅನುದಾನ ಕಡಿತ ಮಾಡಬಾರದು.
    | ಡಾ.ಅಜಯಸಿಂಗ್
    ಸರ್ಕಾರದ ಮುಖ್ಯ ಸಚೇತಕ

    ಸರ್ಕಾರ ಮೊದಲೇ ಹೇಳಿದಂತೆ 1500 ಕೋಟಿ ರೂ. ಕ್ರಿಯಾಯೋಜನೆ ರೂಪಿಸುತ್ತಿದ್ದೇವೆ. ಇದನ್ನು ಇಲಾಖೆಗೆ ಸಲ್ಲಿಸಿದ ಬಳಿಕ ಸರ್ಕಾರ ಎಷ್ಟು ಮೊತ್ತಕ್ಕೆ ಅನುಮೋದನೆ ನೀಡಲಿದೆ ಎಂಬುದು ಗೊತ್ತಾಗಲಿದೆ. ಅನುದಾನ ಕಡಿತದ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಈಗ ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ.
    | ಡಾ.ಎನ್.ವಿ.ಪ್ರಸಾದ್
    ಕೆಕೆಆರ್ಡಿಬಿ ಕಾರ್ಯದಶರ್ಿ ಹಾಗೂ ಆರ್ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts