More

    ಕುರಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ

    ರಾಣೆಬೆನ್ನೂರ: ಸ್ಥಳೀಯವಾಗಿ ಕುರಿಗಳ ಮಾರಾಟಕ್ಕೆ ಮಾರುಕಟ್ಟೆ ಕಲ್ಪಿಸಬೇಕು ಎಂದು ಒತ್ತಾಯಿಸಿ ತಾಲೂಕು ಕುರುಬರ ಸಂಘದ ವತಿಯಿಂದ ಬುಧವಾರ ತಹಸೀಲ್ದಾರ್ ಬಸನಗೌಡ ಕೋಟೂರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಸಂಘದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ ಮಾತನಾಡಿ, ಲಾಕ್​ಡೌನ್​ನಿಂದ ಸ್ಥಳೀಯ ಜಾನುವಾರು ಮಾರುಕಟ್ಟೆ ಬಂದ್ ಮಾಡಿದ್ದರಿಂದ ಕುರಿಗಳ ಮಾರಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ. ನಗರ ಸೇರಿ ತಾಲೂಕಿನಲ್ಲಿ ಸಾವಿರಕ್ಕೂ ಅಧಿಕ ಕುಟುಂಬಗಳು ಕುರಿ ಸಾಕಾಣಿಕೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಆದರೀಗ ಸಾಕಿದ ಕುರಿಗಳನ್ನು ಮಾರಾಟ ಮಾಡಲಾಗದೇ ಹಾಗೂ ಅವುಗಳನ್ನು ಸಾಕಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಕ್ತ ಕ್ರಮ ಕೈಗೊಂಡು ಸ್ಥಳೀಯವಾಗಿಯೇ ಕುರಿಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಕಲ್ಪಿಸಬೇಕು. ಜತೆಗೆ ಕುರಿ ಉಣ್ಣೆ (ಕಂಬಳಿ) ನೇಕಾರರಿಗೆ ರಾಜ್ಯ ಸರ್ಕಾರದಿಂದ ಪ್ಯಾಕೇಜ್ ಘೊಷಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಮೃತ್ಯುಂಜಯ ಗುದಿಗೇರ, ಶಿವಪ್ಪ ಮೇಡ್ಲೇರಿ, ಹನುಮಂತಪ್ಪ ದೇವರಗುಡ್ಡ, ಆನಂದ ಹುಲಬನ್ನಿ, ಯಮನಪ್ಪ ಕಾಟಿ, ಚಂದ್ರಪ್ಪ ಕಂಬಳಿ, ಮಂಜು ಕಾಟಿ, ಕಿರಣ ಗುಳೇದ, ಭರಮಪ್ಪ ಪೂಜಾರ, ಗುಡ್ಡಪ್ಪ ತಹಸೀಲ್ದಾರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts