More

    ಕರೊನಾ ನಿಯಂತ್ರಣಕ್ಕೆ ಮಾಸ್ಕ ಧರಿಸುವುದು ಕಡ್ಡಾಯ

    ರಾಣೆಬೆನ್ನೂರ: ಕರೊನಾ ವೈರಸ್ ಹರಡದಂತೆ ತಡೆಗಟ್ಟುವ ಸಲುವಾಗಿ ಸರ್ಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸುವ ಉದ್ದೇಶದಿಂದ ಶಹರ ಪೊಲೀಸ್ ಠಾಣೆ ವತಿಯಿಂದ ಗುರುವಾರ ನಗರದಲ್ಲಿ ಜಾಗೃತಿ ಜಾಥಾ ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಅಭಿಯಾನ ಹಮ್ಮಿಕೊಳ್ಳಲಾಯಿತು.

    ಜಾಥಾ ನೇತೃತ್ವ ವಹಿಸಿದ್ದ ಸಿಪಿಐ ಎಚ್.ಬಿ. ಗೌಡಪ್ಪಳವರ ಮಾತನಾಡಿ, ಕರೊನಾ ಎಲ್ಲ ಕಡೆ ತೀವ್ರವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದೆ. ಅದರಂತೆ ಪ್ರತಿಯೊಬ್ಬರೂ ಸರ್ಕಾರದ ಆದೇಶವನ್ನು ಪಾಲಿಸಬೇಕಿದೆ. ನಗರದಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಆದೇಶ ನಿರ್ಲಕ್ಷಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.

    ಶಹರ ಪೊಲೀಸ್ ಠಾಣೆಯಿಂದ ಹೊರಟ ಜಾಗೃತಿ ಜಾಥಾ ಪೋಸ್ಟ್ ಸರ್ಕಲ್, ಮೇಡ್ಲೇರಿ ಕ್ರಾಸ್, ಬಸ್​ನಿಲ್ದಾಣದವರೆಗೆ ಬಂದು ಸೇರಿತು. ದಾರಿಯುದ್ದಕ್ಕೂ ಪೊಲೀಸರು ಮಾಸ್ಕ್ ಧರಿಸಿದೇ ಸಂಚರಿಸುತ್ತಿರುವ ಬೈಕ್ ಸವಾರರು, ಪಾದಯಾತ್ರಿಗಳಿಗೆ ಸ್ಥಳದಲ್ಲಿಯೇ 100 ರೂ. ದಂಡ ವಿಧಿಸಿ ರಸೀದಿ ನೀಡಿದರು. ಸಂಜೆಯವರೆಗೂ ಒಟ್ಟು 120 ಜನರಿಗೆ ದಂಡ ವಿಧಿಸಿ 12 ಸಾವಿರ ರೂ. ದಂಡ ವಸೂಲಿ ಮಾಡಿದರು.

    ಪಿಎಸ್​ಐಗಳಾದ ಪ್ರಭು ಕೆಳಗಿನಮನಿ, ಎನ್.ಎನ್. ಉದಗಟ್ಟಿ, ಪ್ರಕಾಶ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts