More

    ಕರಾವಳಿಯಲ್ಲಿ 647 ಮಂದಿಗೆ ಕರೊನಾ ಪಾಸಿಟಿವ್

    ಮಂಗಳೂರು/ಉಡುಪಿ: ದ.ಕ ಜಿಲ್ಲೆಯಲ್ಲಿ ಶನಿವಾರ 5 ಸಾವು ಸಹಿತ 432 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ.

    ಇದರಲ್ಲಿ 226 ಲಕ್ಷಣ ಸಹಿತ ಹಾಗೂ 206 ಲಕ್ಷಣ ರಹಿತ ಪ್ರಕರಣಗಳು. ಇದರಲ್ಲಿ 194 ಮಂದಿ ಮಂಗಳೂರು, 68 ಬಂಟ್ವಾಳ, 71 ಪುತ್ತೂರು, 13 ಸುಳ್ಯ, ಬೆಳ್ತಂಗಡಿ 47, ಇತರ ಜಿಲ್ಲೆ 39 ಸೇರಿದ್ದಾರೆ. ಆಸ್ಪತ್ರೆಯಲ್ಲಿದ್ದ 312 ಮಂದಿ ಹಾಗೂ ಮನೆಗಳಲ್ಲಿ ಐಸೊಲೇಶನ್‌ನಲ್ಲಿದ್ದ 92 ಸೇರಿದಂತೆ 404 ಮಂದಿ ಸೋಂಕುಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣ 19,754 ತಲಪಿದ್ದರೆ ಸಕ್ರಿಯ ಪ್ರಕರಣಗಳು 4,529ಕ್ಕೇರಿವೆ. ಡಿಸ್‌ಚಾರ್ಜ್ ಆದವರ ಸಂಖ್ಯೆ 14,748 ತಲಪಿರುವುದಾಗಿ ಜಿಲ್ಲಾಡಳಿತದ ಬುಲೆಟಿನ್ ತಿಳಿಸಿದೆ.

    ಉಡುಪಿ ಜಿಲ್ಲೆಯಲ್ಲಿ ಶನಿವಾರ 215 ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಒಬ್ಬರು ಹಿರಿಯ ನಾಗರಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸಾವಿನ ಸಂಖ್ಯೆ 140ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 15,091ಕ್ಕೆೆ ಏರಿಕೆಯಾಗಿದೆ. 1054 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 190 ಮಂದಿಯ ವರದಿ ಬರಲು ಬಾಕಿ ಇದೆ. 1337 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕಾಸರಗೋಡಿನಲ್ಲಿ 191 ಪ್ರಕರಣ: ಜಿಲ್ಲೆಯ 191 ಮಂದಿ ಸಹಿತ ಕೇರಳದಲ್ಲಿ ಶನಿವಾರ 4,644 ಮಂದಿಗೆ ಕೋವಿಡ್-19 ರೋಗ ಬಾಧಿಸಿದೆ. ಕಾಸರಗೋಡಿನ ಇಬ್ಬರು ಸೇರಿ ರಾಜ್ಯದಲ್ಲಿ ಶನಿವಾರ 18 ಮಂದಿ ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts