More

    ಒಳ್ಳೆಯ ಕೆಲಸ, ಕಾರ್ಯಕ್ಕಿದೆ ಗೌರವ – ರಮೇಶ ಕತ್ತಿ

    ಹಿಡಕಲ್ ಡ್ಯಾಂ: ಮನುಷ್ಯ ಜೀವಿತಾವಧಿಯಲ್ಲಿ ಮಾಡಿದ ಕೆಲಸ ಕಾರ್ಯ ನೋಡಿ ಸಮಾಜ ಗೌರವಿಸುತ್ತದೇ ಹೊರತು ಆತ ಎಷ್ಟು ದಿನ ಬದುಕಿದ್ದ ಎಂಬುದು ಮುಖ್ಯವಲ್ಲ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ಸಮೀಪದ ಘೋಡಗೇರಿ ಗ್ರಾಮದಲ್ಲಿ ಬುಧವಾರ 2019-20ನೇ ಸಾಲಿನ ಆರ್‌ಐಡಿಎ್ 25 ಯೋಜನೆಯಡಿ 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ಗ್ರಾಮಸ್ಥರು ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಮದುವೆಗಳಿಗೆ ದುಂದು ವೆಚ್ಚ ಮಾಡದೇ ಸರಳವಾಗಿ ಮಾಡಬೇಕು. ಗುರು-ಹಿರಿಯರನ್ನು ತಂದೆ-ತಾಯಿಯನ್ನು ಗೌರವಿಸಬೇಕು. ವ್ಯಕ್ತಿಯು ಪರಿವರ್ತನೆಗೊಂಡು ಒಳ್ಳೆಯ ಸಂಸ್ಕಾರ ಅಳವಡಿಸಿಕೊಂಡು ನಡೆಯಬೇಕು ಎಂದರು.

    ಘೋಡಗೇರಿ ಗ್ರಾಮದಲ್ಲಿ ಸರ್ಕಾರದ ಪ್ರತಿಯೊಂದು ಜನಪರ ಯೋಜನೆ ಮಂಜೂರು ಮಾಡಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಗುಣಮಟ್ಟದಿಂದ ಕೂಡಿರುವಂತೆ ಗ್ರಾಮಸ್ಥರು ನಿಗಾವಹಿಸಬೇಕು ಎಂದು ಸಲಹೆ ನೀಡಿದರು. ಬಿಜೆಪಿ ಹುಕ್ಕೇರಿ ಮಂಡಳ ಅಧ್ಯಕ್ಷ ರಾಚಯ್ಯ ಹಿರೇಮಠ ಮಾತನಾಡಿ, ಸಚಿವ ಉಮೇಶ ಕತ್ತಿ ಮತ್ತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ಘೋಡಗೇರಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ ಎಂದರು.

    ಗ್ರಾಪಂ ಅಧ್ಯಕ್ಷ ಶ್ರೀಶೈಲ ಮಗದುಮ್ಮ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ಬಸವರಾಜ ಮಟಗಾರ, ಜಿಪಂ ಮಾಜಿ ಸದಸ್ಯ ಅರ್ಜುನನಾಯಿಕ ಪಾಟೀಲ, ಕೆಪಿಎಸ್ ಅಧ್ಯಕ್ಷ ಅಪ್ಪುನಾಯಿಕ ಪಾಟೀಲ, ಸಿದ್ದರಾಮ ಮುಗಳಿ, ಸಂಕೇಶ್ವರ ಹಿರಾ ಶುಗರ್ ನಿರ್ದೇಶಕರಾದ ಬಸವರಾಜ ಪಟ್ಟಣಶೆಟ್ಟಿ, ಬಸವರಾಜ ಕಲ್ಲಟ್ಟಿ, ಹೊಳೆಪ್ಪ ಕಡೇಲಿ, ಗುರುನಾಥ ಕಡೇಲಿ, ಚನ್ನಪ್ಪ ಸೊಂಟನವರ, ಪಿಡಬ್ಲುೃಡಿ ಸ.ಕಾ.ನಿ. ಅಭಿಯಂತ ಜಿ.ಬಿ.ದೇಸಾಯಿ, ಸಹಾಯಕ ಅಭಿಯಂತ ಸಂದೀಪ ಬಿ.ಆರ್., ಹುಕ್ಕೇರಿ ಸಿಡಿಪಿಒ ಮಂಜುನಾಥ ಪರಸಣ್ಣವರ, ಅಂಗನವಾಡಿ ಮೇಲ್ವಿಚಾರಕಿ ಡಿ.ಎ.ಮರೆಪ್ಪಗೋಳ, ಪಿಡಿಒ ಕೆ.ಎಸ್.ಒಡೆಯರ, ಗ್ರಾಮಲೆಕ್ಕಾಧಿಕಾರಿ ಉಮೇಶ ನಾಗರಾಳಿ, ಗ್ರಾಮಸ್ಥರಾದ ಶ್ರೀಶೈಲ ಹರಿಜನ, ಬಸವರಾಜ ಹರಿಜನ, ಮಲ್ಲಪ್ಪ ಸಣ್ಣಕ್ಕಿ, ಕಲ್ಲಪ್ಪ ಸಣ್ಣಕ್ಕಿ, ಕುಮಾರ ಸಣ್ಣಕ್ಕಿ, ತುಕಾರಾಮ ಬಸ್ತವಾಡ, ಇಬ್ರಾಹಿಂ ಮೊಕಾಶಿ, ಮಲೀಕ್ ಮೊಕಾಶಿ ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts