More

    ಐಜಿಜಿ ಆ್ಯಂಟಿಬಾಡಿ ಟೆಸ್ಟ್

    ಕಲಬುರಗಿ: ಸದಾ ಒಂದಿಲ್ಲೊಂದು ಹೊಸ ಪ್ರಯೋಗಗಳ ಮೂಲಕ ಜನಾರೋಗ್ಯ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ಯುನೈಟೆಡ್ ಆಸ್ಪತ್ರೆ ಕೋವಿಡ್-19ಗೆ ಸಂಬಂಧಿಸಿದಂತೆ ಜನರಲ್ಲಿನ ರೋಗ ನಿರೋಧಕ ಶಕ್ತಿ ಅರಿಯಲು ಅಭಿಯಾನ ಶುರು ಮಾಡಿದೆ.
    ಕರೊನಾ ವಿರುದ್ಧ ನಿರಂತರ ಹೋರಾಟದ ಭಾಗವಾಗಿ ಯುನೈಟೆಡ್ ಡಯಾಗ್ನೋಸ್ಟಿಕ್ಸ್ ಮತ್ತೊಂದು ಪ್ರಮುಖ ಹೆಜ್ಜೆ ಇರಿಸಿದೆ. ಇಮ್ಯುನೋ ಆಸ್ಸೆ ವಿಧಾನದಿಂದ ಐಜಿಜಿ ಆ್ಯಂಟಿಬಾಡಿ ಸಿರೊ ಟೈಟ್ರೆ ಪರೀಕ್ಷೆ ಮೂಲಕ ರೋಗ ನಿರೋಧಕ ಶಕ್ತಿ ಪ್ರಮಾಣ ಅರಿಯಬಹುದಾಗಿದೆ ಎಂದು ಆಸ್ಪತ್ರೆ ಅಧ್ಯಕ್ಷ ಡಾ.ವಿಕ್ರಮ ಸಿದ್ದಾರಡ್ಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಐಜಿಜಿ ಪ್ರತಿಕಾಯ ಮಾನವನ ದೇಹದಲ್ಲಿನ ಕೋವಿಡ್-19 ವೈರಸ್ ನಾಶ ಮಾಡುವ ಸಾಮಥ್ರ್ಯ ಹೊಂದಿದೆ. ಉತ್ತಮ ಮಟ್ಟದ ಐಜಿಜಿ ಪ್ರತಿಕಾಯಗಳ ಉಪಸ್ಥಿತಿಯು ಕರೊನಾ ವಿರುದ್ಧದ ಪ್ರತಿರಕ್ಷೆ ಸೂಚಿಸುತ್ತದೆ. ಒಮ್ಮೆ ಅಭಿವೃದ್ಧಿಪಡಿಸಿದ ನಂತರ ಈ ಐಜಿಜಿ ಪ್ರತಿಕಾಯಗಳು ದೀರ್ಘಕಾಲದವರೆಗೆ ರಕ್ತ ಪರಿಚಲನೆಯಲ್ಲಿ ಉಳಿಯುತ್ತವೆ. ಇದರಿಂದಾಗಿ ವ್ಯಕ್ತಿ ಭವಿಷ್ಯದಲ್ಲಿ ಸೋಂಕಿನಿಂದ ಸಂಪೂರ್ಣ ರೋಗನಿರೋಧಕ ಶಕ್ತಿ ಹೊಂದಿರುತ್ತಾನೆ. ಇನ್ನೊಂದು ತರಹ ವಿವರಿಸುವುದಾದರೆ, ಉತ್ತಮ ಮಟ್ಟದ ಐಜಿಜಿ ಆಂಟಿಬಾಡಿ ಸಿರೊ ಟೈಟ್ರೆ ಹೊಂದಿರುವ ವ್ಯಕ್ತಿ ಇತರರಿಗೆ ಸೋಂಕು ತಗುಲಿಸುವುದಿಲ್ಲ. ಭವಿಷ್ಯದಲ್ಲಿ ಇತರರಿಂದ ಸೋಂಕಿಗೆ ಒಳಗಾಗುವುದಿಲ್ಲ ಎಂದು ವಿವರಿಸಿದರು.
    ಐಜಿಜಿ ಆಂಟಿಬಾಡಿ ಸಿರೊ ಪರೀಕ್ಷೆ ಐಜಿಜಿ ಪ್ರತಿಕಾಯಗಳ ಉಪಸ್ಥಿತಿಯನ್ನು ಪ್ರಮಾಣೀಕರಿಸುತ್ತದೆ ಮತ್ತು ಕೋವಿಡ್-19ನಿಂದ ಶೇ.100 ಯಾರು ಸುರಕ್ಷಿತರಾಗಿದ್ದಾರೆ ಎಂಬ ನಿಖರ ಮಾಹಿತಿ ನೀಡುತ್ತದೆ. ಜತೆಗೆ ಕೋವಿಡ್-19 ವಿರುದ್ಧದ ಪ್ರತಿರಕ್ಷೆಯನ್ನು ಈ ಪರೀಕ್ಷೆ ಖಚಿತಪಡಿಸುತ್ತದೆ. ಆಸ್ಪತ್ರೆ ಯುನೈಟೆಡ್ ಡಯಾಗ್ನೋಸ್ಟಿಕ್ಸ್ ಕೋವಿಡ್-19 ಪತ್ತೆ ಹಚ್ಚಲು ಆರ್ಟಿಪಿಸಿಆರ್ ಪರೀಕ್ಷೆ ಪ್ರಾರಂಭಿಸಿದ ಬೆಂಗಳೂರು ಹೊರಗಿನ ಮೊದಲ ಖಾಸಗಿ ಪ್ರಯೋಗಾಲಯ ಇದಾಗಿದೆ. ಸಕರ್ಾರಿ ಮತ್ತು ಖಾಸಗಿ ಮಾದರಿ ಒಳಗೊಂಡ 12,000ಕ್ಕೂ ಅಧಿಕ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಸೌಮ್ಯ ರೋಗ ಲಕ್ಷಣದವರಿಗೆ ಚಿಕಿತ್ಸೆ ನೀಡಲು ಕಲಬುರಗಿಯ ಪ್ರಸಿದ್ಧ ಹೋಟೆಲ್ನಲ್ಲಿ ವಿಶೇಷವಾದ ಕೋವಿಡ್-19 ಆರೈಕೆ ಕೇಂದ್ರ ಸ್ಥಾಪಿಸುವುದರ ಹೊರತಾಗಿ ರೋಗ ಲಕ್ಷಣದವರಿಗೆ ಚಿಕಿತ್ಸೆ ನೀಡಲು ಯುನೈಟೆಡ್ ಆಸ್ಪತ್ರೆ ಐಸಿಯು, ಎಚ್ಡಿಯು ಸೇರಿ ಪ್ರತ್ಯೇಕ 24 ಹಾಸಿಗೆ ಸೌಲಭ್ಯ ಹೊಂದಿದೆ ಎಂದು ತಿಳಿಸಿದರು.
    ಯುನೈಟೆಡ್ ಹಾಸ್ಪಿಟಲ್ ಮತ್ತು ಯುನೈಟೆಡ್ ಡಯಾಗ್ನೋಸ್ಟಿಕ್ಸ್ ಕೋವಿಡ್-19 ವಿರುದ್ಧದ ಅಭಿಯಾನದ ಅಂಗವಾಗಿ ಮೈ ಇಮ್ಯೂನಿಟಿ ಟೆಸ್ಟ್ (ಎಂಐಟಿ) ಪ್ರಾರಂಭಿಸಿದೆ. ಪ್ರತಿ ವ್ಯಕ್ತಿಗೆ ಕೇವಲ 1200 ರೂ. ದರದಲ್ಲಿ ಈ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

    ರಕ್ತ ಮಾದರಿ ಸಂಗ್ರಹ ಕೇಂದ್ರ
    ಪರೀಕ್ಷೆಗೆ ಅನುಕೂಲವಾಗುವಂತೆ ಜಿಲ್ಲಾದ್ಯಂತ ಅನೇಕ ರಕ್ತ ಮಾದರಿ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೋಟನೂರ ಮಠ ಹತ್ತಿದ ಓಂ ಸಾಯಿ ಕ್ಲಿನಿಕ್, ಆಳಂದ ಚೆಕ್ಪೋಸ್ಟ್ ಬಳಿಯ ಶ್ರೀ ಶರಣ ಬಸವೇಶ್ವರ ಡಯಾಗ್ನೋಸ್ಟಿಕ್ಸ್, ಮಹಾತ್ಮ ಬಸವೇಶ್ವರ ಕಾಲನಿಯ ನ್ಯಾಷನಲ್ ಡೈಯಾಗ್ನೋಸ್ಟಿಕ್ಸ್, ಎಂಎಸ್ಕೆ ಮಿಲ್ ರಸ್ತೆಯ ಅಮನ್ ಕೇರ್ ಹೆರಿಗೆ ಮತ್ತು ಶಸ್ತ್ರಚಿಕಿತ್ಸಾ ಆಸ್ಪತ್ರೆಗಳಲ್ಲಿ ರಕ್ತ ಮಾದರಿ ಸಂಗ್ರಹ ಕೇಂದ್ರಗಳಿವೆ. ಜಿಲ್ಲೆಯ ಜನತೆ ವಿಶೇಷವಾಗಿ ಕೈಗಾರಿಕಾ ಮತ್ತು ವ್ಯಾಪಾರ ಘಟಕ, ಶಿಕ್ಷಣ ಸಂಸ್ಥೆ, ಬ್ಯಾಂಕು ಇತರ ಸಂಸ್ಥೆಗಳು ಈ ಸದಾವಕಾಶ ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ.95356 01919 ಮತ್ತು 93433 82517ಗೆ ಸಂಪಕರ್ಿಸಲು ಡಾ.ವಿಕ್ರಮ ಸಿದ್ದಾರಡ್ಡಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts