More

    ಎಲ್.ಸುರೇಶ್ ರೈತ ಸಂಘದ ನಾಗಮಂಗಲ ತಾಲೂಕು ಅಧ್ಯಕ್ಷ

    ನಾಗಮಂಗಲ: ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ )ನಾಗಮಂಗಲ ತಾಲೂಕು ಘಟಕದ ಅಧ್ಯಕ್ಷರಾಗಿ ಎಲ್.ಸುರೇಶ್ ನೇಮಕಗೊಂಡರು.

    ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮೈಸೂರು ವಿಭಾಗದ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣಗೌಡ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

    ರೈತ ಸಂಘಟನೆ ಒಂದು ರೈಲು ಇದ್ದಂತೆ. ಇಲ್ಲಿ ಬರುವವರು ಶಾಶ್ವತವಾಗಿ ಉಳಿಯುವುದಿಲ್ಲ. ಅವರವರ ಕೆಲಸ ಮುಗಿದ ನಂತರ ಬಿಟ್ಟು ಹೋಗುತ್ತಾರೆ. ಸಭೆಯಲ್ಲಿ ಹೆಚ್ಚಿನ ಯುವಕರು ಭಾಗವಹಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಬನ್ನೂರು ನಾರಾಯಣಗೌಡ ಹೇಳಿದರು.

    ಸಂಘದ ತಾಲೂಕು ಗೌರವ ಅಧ್ಯಕ್ಷರಾಗಿ ಕೆ.ಎಸ್.ರಾಜು, ಕಾರ್ಯಧ್ಯಕ್ಷರಾಗಿ ಹರೀಶ್, ಉಪಾಧ್ಯಕ್ಷರಾಗಿ ಯೋಗೇಶ್ ಅವರನ್ನು ನೇಮಕ ಮಾಡಲಾಯಿತು. ಜಿಲ್ಲಾ ಗೌರವಾಧ್ಯಕ್ಷ ಶಂಕರೇಗೌಡ, ಮಂಡ್ಯ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಗೌಡ, ರೈತ ಮುಖಂಡರಾದ ಪ್ರಭುಲಿಂಗ, ರಾಮಲಿಂಗೇಗೌಡ, ಉಮೇಶ್, ಸುರೇಶ್, ವೆಂಕಟೇಶ್, ರಾಮೇಗೌಡ, ಯಶೋಧರ್, ಬೋರೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts