More

    ಫಯಾಜ್‌ಗೆ ಗಲ್ಲು ಶಿಕ್ಷೆಯಾಗಲಿ

    ನಾಗಮಂಗಲ: ಹುಬ್ಬಳ್ಳಿಯ ನೇಹಾ ಹಿರೇಮಠರನ್ನು ಕೊಂದ ಫಯಾಜ್‌ಗೆ ಗಲ್ಲುಶಿಕ್ಷೆ ವಿಧಿಸಬೇಕು. ಈ ಮೂಲಕ ಲವ್ ಜಿಹಾದ್‌ಗೆ ಅಂತ್ಯ ಹಾಡಬೇಕು ಎಂದು ಮಂಡ್ಯ ವಿಶ್ವ ಹಿಂದು ಪರಿಷತ್ ದುರ್ಗಾವಾಹಿನಿ ಮಾತೃಶಕ್ತಿ ಸಂಘಟನೆಯ ಕಾರ್ಯದರ್ಶಿ ಉಷಾ ಜಗದೀಶ್ ಹೇಳಿದರು.

    ಪಟ್ಟಣದಲ್ಲಿ ಮಂಗಳವಾರ ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಹಾಗೂ ರಾಮನವಮಿ ದಿನ ಹಿಂದು ಯುವಕರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

    ಲವ್ ಜಿಹಾದ್‌ಗೆ ಪ್ರಚೋದಿಸುವ ಮತ್ತು ಹಿಂದು ಹೆಣ್ಣು ಮಕ್ಕಳನ್ನು ಕಾಮದಾಹದ ಸಾಧನಗಳಂತೆ ಬಳಸಿಕೊಳ್ಳುವ ಮತಾಂಧ ಮನಸ್ಸುಗಳಿಗೆ ಭಯ ಹುಟ್ಟುವಂತಹ ಕಾನೂನು ಜಾರಿಯಾಗಬೇಕು. ಕೆಲ ವಿಕೃತ ಮನಸ್ಸುಗಳು ಲವ್ ಜಿಹಾದ್ ಪ್ರೇರೇಪಿಸಿ ಪೋಷಿಸುತ್ತಿವೆ. ಹೆಣ್ಣು ಮಕ್ಕಳ ಭದ್ರತೆ ಹಾಗೂ ರಕ್ಷಣೆ ಆಗಬೇಕೆಂದರೆ ಇಂತಹ ಕೃತ್ಯ ಎಸಗುವವರಿಗೆ ಗಲ್ಲುಶಿಕ್ಷೆ ಆಗಬೇಕು ಎಂದರು.

    ಹಿಂದು ಹೆಣ್ಣು ಮಕ್ಕಳು ಆಮಿಷಗಳಿಗೆ, ಉಡುಗೊರೆ, ನಯವಾದ ಮಾತಿನ ಮೋಡಿಗೆ ಸಿಲುಕಬಾರದು. ಸನಾತನ ಧರ್ಮದ ಹಿಂದು ನಾರಿ ಶಕ್ತಿ ಒಂದಾಗಬೇಕು ಎಂದರು. ತಾಯಂದಿರು ತಮ್ಮ ಹೆಣ್ಣುಮಕ್ಕಳ ಮೇಲಿನ ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕು ಎಂದರು.

    ಪ್ರತಿಭಟನಾ ಮೆರವಣಿಗೆ ಟಿ.ಬಿ. ಬಡಾವಣೆಯ ಬಿಜಿಎಸ್ ವೃತ್ತದಿಂದ ಆರಂಭಗೊಂಡು ಟಿ.ಮರಿಯಪ್ಪ ವೃತ್ತದವರೆಗೂ ಸಾಗಿತು. ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಲಾಯಿತು. ತಹಸೀಲ್ದಾರ್ ನಯೀಂ ಉನ್ನಿಸಾ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಲಾಯಿತು.

    ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಬಸವರಾಜು, ಬಜರಂಗದಳ ವಿಭಾಗ ಸಂಯೋಜಕ ಚಿಕ್ಕಬಳ್ಳಿಬಾಲು, ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಪುಣ್ಯಕೋಟಿ ರಾಘವೇಂದ್ರ, ಜಿಲ್ಲಾ ಸಂಯೋಜಕ ಶಶಿಕಿರಣ್, ತಾಲೂಕು ಸಂಯೋಜಕ ಕಾರ್ತಿಕ್, ಪುರಸಭಾ ಸದಸ್ಯ ವಿಜಯ್‌ಕುಮಾರ್ (ಪುಂಗ) ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts