More

    ಎಲ್ಲರಲ್ಲೂ ಮೂಡಲಿ ಕನ್ನಡದ ಅಭಿಮಾನ


    ಯಾದಗಿರಿ: ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದೆ ಇಂಥ ಸಂದರ್ಭದಲ್ಲಿ ಕನ್ನಡಿಗರು ಜಾಗೃತರಾಗುವ ಅವಶ್ಯಕತೆ ಇದೆ ಎಂದು ಹಿರಿಯ ವಕೀಲ ಬಸವರಾಜಪ್ಪ ಗೌಡ ಕ್ಯಾತನಾಳ ತಿಳಿಸಿದರು.

    ಇಲ್ಲಿನ ಜಿಲ್ಲಾ ಕಸಾಪ ಭವನದಲ್ಲಿ ಭಾನುವಾರ ಕಸಾಪದಿಂದ ಆಯೋಜಿಸಿದ್ದ ದಿ.ಸಿದ್ದಲಿಂಗಮ್ಮ ಸಿದ್ದಣ್ಣ ಗೌಡ ಕ್ಯಾತ್ನಾಳ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಜಾಮನ ಕಾಲದಲ್ಲಿ ಹೊರಗೆ ಉರ್ದು ನಾಮಫಲಕ ಹಾಕಿ ತರಗತಿಯಲ್ಲಿ ನಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಲಾಗುತ್ತಿತ್ತು. ಈಗ ದೇಶ ಸ್ವತಂತ್ರಗೊಂಡರೂ ಕನ್ನಡಿಗರಲ್ಲಿ ಭಾಷಾಭಿಮಾನ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಎಲ್ಲರಲ್ಲಿಯೂ ಕನ್ನಡ ಅಭಿಮಾನ ಮೂಡಬೇಕು ,ಅಖಂಡ ಕರ್ನಾಟಕದ ಸಮಗ್ರತೆ ಮತ್ತು ಏಕತೆಯಿಂದ ಭಾಷೆ, ನೆಲ, ಸಂಸ್ಕೃತಿ, ಉಳಿಯುವಂಥ ಚಿಂತನ-ಮಂಥನ ಕಾರ್ಯಕ್ರಮಗಳು ಹೆಚ್ಚಾಗಿ ಪರಿಷತ್ತು ಹಮ್ಮಿಕೊಳ್ಳಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

    ಪ್ರಚಾರ್ಯ ಸುರೇಶ ತಡಬಿಡಿ ಉಪನ್ಯಾಸ ನೀಡಿ, ಕಾವೇರಿಯಿಂದ ಗೋದಾವರಿವರಗೆ ಕನ್ನಡದ ಭೌಗೋಳಿಕ ನೆಲೆಯನ್ನ ಹೊಂದಿದ್ದ ಕರುನಾಡು ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದೆ. ಭಾಷೆಯ ಉಗಮ ಗೌಪ್ಯವಾದದ್ದು ಹಲ್ಮಿಡಿ ಶಾಸನ ಹಾಗೂ ಕವಿರಾಜಮಾರ್ಗ ಕನ್ನಡದ ಮೊಟ್ಟಮೊದಲ ಶಾಸನ ಮತ್ತು ಕೃತಿಯಾಗಿದೆ 2 ಸಾವೀರ ವರ್ಷಗಳ ಇತಿಹಾಸವಿರುವ ಭಾಷೆ ನಮ್ಮದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts