More

    ಎರಡೇ ದಿನಕ್ಕೆ ಎಲೆಚುಕ್ಕೆ ಔಷಧ ಖಾಲಿ; ತೋಟಗಾರಿಕಾ ಕಚೇರಿಗೆ ಬೆಳೆಗಾರರ ಮುತ್ತಿಗೆ

    ತೀರ್ಥಹಳ್ಳಿ: ಅಡಕೆ ಮರಗಳಿಗೆ ತಗುಲಿರುವ ಎಲೆ ಚುಕ್ಕೆರೋಗದ ನಿಯಂತ್ರಣಕ್ಕೆ ಪ್ರಥಮ ಸಿಂಪಡಣೆಗೆ ಬಿಡುಗಡೆ ಮಾಡಿದ್ದ ಶಿಲೀಂಧ್ರನಾಶಕ ಔಷಧ ಎರಡೇ ದಿನಕ್ಕೆ ಖಾಲಿಯಾದ ಹಿನ್ನೆಲೆಯಲ್ಲಿ ಅಡಕೆ ಬೆಳೆಗಾರರು ಶುಕ್ರವಾರ ಪಟ್ಟಣದ ತೋಟಗಾರಿಕಾ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಔಷಧಕ್ಕಾಗಿ ಶುಕ್ರವಾರ ಇಲ್ಲಿಗೆ ಆಗಮಿಸಿದ್ದ ಆಗುಂಬೆ ಭಾಗದ ಕೆಲವು ರೈತರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ಕಳೆದ ಮೂರು ವರ್ಷಗಳಿಂದ ಪರಿಹಾರಕ್ಕಾಗಿ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಕೊಳೆರೋಗ ಮುಂತಾದ ಸಮಸ್ಯೆಗಳಷ್ಟೇ ಅಲ್ಲ ಕಾಡು ಪ್ರಾಣಿಗಳ ಬಾಧೆಯಿಂದ ನಲುಗಿ ಹೋಗಿದ್ದೇವೆ. ನಮ್ಮ ಗೋಳನ್ನು ಕೇಳುವವರೇ ಇಲ್ಲ. ಎಲೆಚುಕ್ಕಿ ರೋಗಕ್ಕೆ ಪರಿಹಾರ ರೂಪಿಸುತ್ತಿರುವುದಾಗಿ ಹೇಳುತ್ತಿರುವ ತೋಟಗಾರಿಕೆ ಇಲಾಖೆ ನಮ್ಮ ಮೇಲೆ ಪ್ರಯೋಗ ಮಾಡುತ್ತಿದೆ. ರೈತರ ಕಣ್ಣೊರೆಸುವ ತಂತ್ರಗಾರಿಕೆಯಲ್ಲಿ ತೊಡಗಿದೆ. ಅಡಕೆ ಸಂಶೋಧನಾ ಕೇಂದ್ರ ಇದ್ದೂ ಇಲ್ಲದಂತಾಗಿದ್ದು ಅಡಕೆ ಬೆಳೆಗಾರರಿಗೆ ಈ ಕೇಂದ್ರದಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ ಎಂದು ಆರೋಪಿಸಿದರು.
    ಸರ್ಕಾರದ ಸಹಾಯಧನ ಪಡೆಯಲು ಪಹಣಿಗಾಗಿ ಕೆಲಸ, ಕಾರ್ಯ ಬಿಟ್ಟು ದಿನಗಟ್ಟಲೆ ಕಾದಿದ್ದೇವೆ. ಇಲ್ಲಿಗೆ ಬಂದರೆ ಔಷಧ ಖಾಲಿಯಾಗಿದೆ ಅಂತಾರೆ. ದೊಡ್ಡದಾಗಿ ಪ್ರಚಾರ ಕೊಟ್ಟ ಇಲಾಖೆ ಎರಡೇ ದಿನದಲ್ಲಿ ಖಾಲಿಯಾಗಿದೆ ಅಂತಿದೆ. ನಮ್ಮ ಗೋಳನ್ನು ಯಾರಿಗೆ ಹೇಳೋದು? ಈ ಔಷಧಿಯ ಬಗ್ಗೆ ನಮಗೆ ಪೂರ್ಣ ನಂಬಿಕೆಯೂ ಇಲ್ಲ ಎಂದು ಆಲಗೇರಿಯ ರೈತ ಸುಬ್ಬಯ್ಯ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts