More

    ಉ.ಕ. ಬರಪೀಡಿತ ಘೋಷಿಸಿ

    ಮುನವಳ್ಳಿ: ಪಟ್ಟಣದ ಕಳಸಾ ಬಂಡೂರಿ ನಾಲಾ ಜೋಡಣಾ ಹೋರಾಟ ಸಮಿತಿ ಹಾಗೂ ರೈತರು ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ 43ನೇ ರೈತ ಹುತಾತ್ಮ ದಿನ ಆಚರಿಸಲಾಯಿತು.

    ರೈತ ಮುಖಂಡರಾದ ಪಂಚನಗೌಡ ದ್ಯಾಮನಗೌಡರ ಹಾಗೂ ಉಮೇಶ ಬಾಳಿ ಮಾತನಾಡಿ, ಉತ್ತರ ಕರ್ನಾಟಕವನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

    ರೈತಪರ ಹೋರಾಟಗಾರ ಶಂಕರಗೌಡ ಪಾಟೀಲ, ಕಳಸಾ ಬಂಡೂರಿ ನಾಲಾ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಮಾತನಾಡಿ, ಮಲಪ್ರಭೆಗೆ ಕಳಸಾ ಬಂಡೂರಿ ಹಾಗೂ ಮಹದಾಯಿ ನದಿಯನ್ನು ಜೋಡಿಸುವ ಕಾಮಗಾರಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮುಂದಾಗಬೇಕು ಎಂದರು.

    ದಿವ್ಯಸಾನ್ನಿಧ್ಯ ವಹಿಸಿದ್ದ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ರೈತರು ಒಗ್ಗಟ್ಟಾಗಿ ಹೋರಾಡಿದಾಗ ಮಾತ್ರ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ರೈತಪರ ಹೋರಾಟಗಾರ ಶಂಕರಗೌಡ ಪಾಟೀಲ ಹಾಗೂ ಪ್ರಗತಿಪರ ರೈತ ಮಹಿಳೆ ಅನುಸೂಯಾ ಹನಸಿ ಅವರಿಗೆ ‘ನೇಗಿಲ ಯೋಗಿ ಕಾಯಕಜೀವಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಬಾಳಪ್ಪ ರಡ್ರಟ್ಟಿ, ಪ್ರಕಾಶ ಕಾಮಣ್ಣವರ, ಅರುಣಗೌಡ ಪಾಟೀಲ, ಎಂ.ಕೆ.ಹಿರೇಮಠ, ಮುತ್ತಣ್ಣ ಘಟವಾಳಿಮಠ, ಬಾಳಪ್ಪ ಮೇಟಿ, ಈರಣ್ಣ ಬಸಲಿಗುಂದಿ, ದೇವರೇಶ ದ್ಯಾಮನಗೌಡ್ರ, ಶಿವಪುತ್ರಪ್ಪ ಕೆಳಗಡೆ, ರಾಮನಗೌಡ ಗೀದಿಗೌಡ್ರ, ಕಲ್ಲಪ್ಪ ನಲವಡೆ, ಬಸವರಾಜ ಚುಳಕಿ, ಹನುಮಂತ ಹಡಪದ, ಗಿರೆಪ್ಪ ಹಂಜಿ, ರವಿ ದ್ಯಾಮನಗೌಡ್ರ, ಮಾರುತಿ ನಲವಡೆ, ರವಿ ಹುರಳಿ, ಸಂಗಮೇಶ ಬಟಕುರ್ಕಿ, ಪ್ರದೀಪ ದಿವಟಗಿ, ಮನೋಹರ ನಾಯ್ಕ, ದ್ಯಾಮನಗೌಡ ಬಕಾಡೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts