More

    ಉತ್ತಮ ಪಾಟೀಲ ಸೇವೆ ಸ್ಮರಣೀಯ

    ಬೋರಗಾಂವ, ಬೆಳಗಾವಿ: ಯಾವ ರಾಜಕೀಯ ಪದವಿ ಇಲ್ಲದೆ ನಿಪ್ಪಾಣಿ ತಾಲೂಕಿನ ನಾಗರಿಕರ ಅಭಿವೃದ್ಧಿಗೆ ಶ್ರಮಿಸುತ್ತಿದ್ದ ಮುಖಂಡ ಉತ್ತಮ ಪಾಟೀಲ ಅವರ ಸಾಮಾಜಿಕ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಮಹಾರಾಷ್ಟ್ರದ ಶಿರೂರ ಸಂಸದ ಡಾ.ಅಮೋಲ ಕೋಲ್ಹೆ ಹೇಳಿದರು.

    ಉತ್ತಮ ಪಾಟೀಲ ಅವರಿಗೆ ಪುಣೆಯ ಸಕ್ಕರೆ ಮಂಡಳಿ ವತಿಯಿಂದ ಯೂಥ್ ಐಕಾನ್ ಪುರಸ್ಕಾರ ನೀಡಿ ಗೌರವಿಸಿರುವ ಹಿನ್ನೆಲೆಯಲ್ಲಿ ಸಮೀಪದ ಸ್ತವನೀಧಿ ಗ್ರಾಮದ ಬ್ರಹ್ಮನಾಥ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ನಾಗರಿಕ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2023ರಲ್ಲಿ ಉತ್ತಮ ಪಾಟೀಲ ಅವರಿಗೆ ಜನರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಉತ್ತಮ ಪಾಟೀಲ ಮಾತನಾಡಿ, ತಂದೆ ರಾವಸಾಹೇಬ ಪಾಟೀಲ ಹಾಗೂ ಸಹೋದರ ಅಭಿನಂದನ ಪಾಟೀಲ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿರುವೆ. 2018ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತರು. ಹೀಗಾಗಿ ಕಾರ್ಯಕರ್ತರಿಗೆ ಬೇಸರವಾಗಿತ್ತು.

    ಕಾರ್ಯಕರ್ತರನ್ನು ಒಂದುಗೂಡಿಸಿ 4 ವರ್ಷಗಳಿಂದ ಧೈರ್ಯ ತುಂಬುವ ಕಾರ್ಯ ಮಾಡಲಾಗುತ್ತಿದೆ. ಅರಿಹಂತ ಉದ್ಯೋಗ ಸಮೂಹ ವತಿಯಿಂದ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ಮಾಡುತ್ತಿದ್ದು, ಬೆಳಗಾವಿಯಲ್ಲಿ 100 ಹಾಸಿಗೆಯುಳ್ಳ ಅರಿಹಂತ ಆಸ್ಪತ್ರೆ ಕೂಡ ಪ್ರಾರಂಭಿಸಲಾಗಿದೆ. ಸಕ್ಕರೆ ಕಾರ್ಖಾನೆ ವತಿಯಿಂದ ಕಬ್ಬಿಗೆ ಸರ್ಕಾರ ನಿಗದಿಪಡಿಸಿದ ದರ ನೀಡಿ ರೈತರ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗಿದೆ. ಶಾಶ್ವತ ಅಭಿವೃದ್ಧಿ ಗುರಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಜನರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು. ಗೌರವ ಸಮಿತಿ ವತಿಯಿಂದ ಉತ್ತಮ ಪಾಟೀಲ ಅವರನ್ನು ಸಮಸ್ತ ನಿಪ್ಪಾಣಿ ತಾಲೂಕಿನ ಜನರ ಪರವಾಗಿ ಸತ್ಕರಿಸಲಾಯಿತು. ಮಾಜಿ ಶಾಸಕ ಸುಭಾಷ ಜೋಶಿ, ಉದ್ಯಮಿ ಅಭಿನಂದನ ಪಾಟೀಲ, ಮೀನಾಕ್ಷಿ ಪಾಟೀಲ, ನಗರಸಭೆ ಸದಸ್ಯ ವಿಲಾಸ ಗಾಡಿವಡ್ಡರ, ರವೀಂದ್ರ ಶಿಂಧೆ, ಸುನೀತಾ ಪಾಟೀಲ, ಸುನೀಲ ಪಾಟೀಲ, ಇಂದ್ರಜಿತ ಪಾಟೀಲ, ನಿರಂಜನ ಪಾಟೀಲ, ರಾಜು ಪಾಟೀಲ, ಅನಿತಾ ಪಠಾಡೆ, ಶಾಂತಾ ಸಾವಂತ, ಜಸರಾಜ ಗಿರಿ, ಶೌಕತ್ ಮನೇರ, ಶುಭಾಂಗಿ ಜೋಶಿ, ನಮ್ರತಾ ಕಮತೆ, ರಾಜು ಪವಾರ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಶಾಮ ರೇವಡೆ, ಜಯವಂತ ಕಾಂಬಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts