More

    ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶೇ.73.32 ಮತದಾನ

    ಕಲಬುರಗಿ: ತೀವ್ರ ಜಿದ್ದಾಜಿದ್ದಿನ ಮತ್ತು ಪ್ರತಿಷ್ಠೆ ಕಣವಾಗಿರುವ ವಿಧಾನ ಪರಿಷತ್ನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಶಿಕ್ಷಕರು ಕಲಬುರಗಿ ನಗರ ಸೇರಿ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ 147 ಮತಗಟ್ಟೆಗಳಲ್ಲಿ ಹುರುಪಿನಿಂದ ಮತದಾನ ಮಾಡಿದರು. ಪ್ರಕ್ರಿಯೆ ಬಹುತೇಕ ಶಾಂತಿಯುತ ನಡೆದಿದ್ದು, ಸರಾಸರಿ ಶೇ.73.32 ಮತದಾನವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಶೇ.67.72 ಹಕ್ಕು ಚಲಾವಣೆ ಆಗಿದೆ.
    ಬೀದರ್, ಕಲಬುರಗಿ, ಯಾದಗಿರಿ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆ ಸೇರಿ 29,236 ಮತದಾರ ಶಿಕ್ಷಕರ ಪೈಕಿ 21,456 ಶಿಕ್ಷಕರು ಹಕ್ಕು ಚಲಾಯಿಸುವ ಮೂಲಕ ಕಣದಲ್ಲಿರುವ ಕಾಂಗ್ರೆಸ್ನ ಶರಣಪ್ಪ ಮಟ್ಟೂರ, ಬಿಜೆಪಿಯ ಶಶೀಲ್ ನಮೋಶಿ, ಜೆಡಿಎಸ್ನ ತಿಮ್ಮಯ್ಯ ಪುಲರ್ೆ, ವಾಟಾಳ್ ನಾಗರಾಜ್ ಇತರ ಅಭ್ಯಥರ್ಿಗಳ ಹಣೆಬರಹವನ್ನು ಮತಪೆಟ್ಟಿಗೆಯಲ್ಲಿ ಭದ್ರಗೊಳಿಸಿದರು. ನ.2ರಂದು ಕಲಬುರಗಿಯಲ್ಲಿ ಮತ ಎಣಿಕೆ ನಡೆಯಲಿದೆ.
    ಕ್ಷೇತ್ರ ವ್ಯಾಪ್ತಿಯ ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.81.59 ಮತ್ತು ಕಲಬುರಗಿ ಜಿಲ್ಲೆಯಲ್ಲಿ ಅತಿ ಕಮ್ಮಿ ಶೇ.67.72 ಮತದಾನ ಆಗಿದೆ. ಶಿಕ್ಷಕಿಯರಲ್ಲಿ ಹೆಚ್ಚಿನ ಹುರುಪು ಕಂಡು ಬಂದಿತು. ಮತದಾರ ಶಿಕ್ಷಕರು ಬುಧವಾರ ಬೆಳಗ್ಗೆಯಿಂದಲೇ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸುತ್ತಿದ್ದರು.

    ಬಾಕ್ಸ್
    ಮತಕೇಂದ್ರಗಳಿಗೆ ಮಟ್ಟೂರ, ನಮೋಶಿ ಭೇಟಿ
    ಅಭ್ಯಥರ್ಿಗಳಾದ ಕಾಂಗ್ರೆಸ್ನ ಶರಣಪ್ಪ ಮಟ್ಟೂರ, ಬಿಜೆಪಿಯ ಶಶೀಲ್ ನಮೋಶಿ, ಜೆಡಿಎಸ್ನ ತಿಮ್ಮಯ್ಯ ಪುಲರ್ೆ, ಪಕ್ಷೇತರ ಡಾ.ಚಂದ್ರಕಾಂತ ಸಿಂಗೆ ಕಲಬುರಗಿ ನಗರದ ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನದ ಹಲ್ಚಲ್ ನೋಡಿದರು. ಕೆಲವೆಡೆ ಕ್ಷಣ ಹೊತ್ತು ನಿಂತು ಮತದಾರರಿಗೆ ಕೈಮುಗಿದರು. ಟೆಂಟ್ಗೆ ತೆರಳಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಚಚರ್ಿಸಿ ಸರಿಯಾಗಿ ಮತ ಚಲಾಯಿಸಲು ಶಿಕ್ಷಕರಿಗೆ ತಿಳಿಸಿಕೊಡಿ ಎಂದು ಹೇಳಿ ತೆರಳಿದರು. ಕೆಲವೆಡೆ ಶಿಕ್ಷಕರ ಕುಶಲೋಪರಿಯನ್ನೂ ವಿಚಾರಿಸಿದರು.

    === ಬಾಕ್ಸ್==
    ಈಶಾನ್ಯ ಜಿಲ್ಲಾವಾರು ಮತದಾನ ವಿವರ
    ಬೀದರ್ ಶೇ. 74.40
    ಕಲಬುರಗಿ ಶೇ. 67.72
    ಯಾದಗಿರಿ ಶೇ. 81.59
    ರಾಯಚೂರು ಶೇ.74.97
    ಕೊಪ್ಪಳ ಶೇ. 80.86
    ಬಳ್ಳಾರಿ ಶೇ.74,34

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts