More

    ಈಶಾನ್ಯದಲ್ಲಿ ಮೋದಿ ಆಡಳಿತಕ್ಕೆ ಮನ್ನಣೆ

    ತೀರ್ಥಹಳ್ಳಿ: ಕೈ ತಪ್ಪುವ ಆತಂಕವಿದ್ದ ಈಶಾನ್ಯದ ಮೂರು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ತ್ರಿಪುರ ಮತ್ತು ನಾಗಾಲ್ಯಾಂಡ್ ಬಿಜೆಪಿ ಬಹುಮತ ಗಳಿಸುವ ಮೂಲಕ ಅ„ಕಾರಕ್ಕೆ ಬಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ತ್ರಿಪುರ ಮತ್ತು ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಕುವೆಂಪು ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಈಶಾನ್ಯದ ಎರಡು ರಾಜ್ಯಗಳಲ್ಲಿ ಪುನಃ ಅ„ಕಾರವನ್ನು ಹಿಡಿಯುವ ಮೂಲಕ ಬಿಜೆಪಿ ರಾಷ್ಟ್ರದ ಉದ್ದಗಲಕ್ಕೂ ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದೆ. ಒಂದು ಕಾಲದಲ್ಲಿ ಈ ಭಾಗದ ರಾಜ್ಯಗಳು ದೇಶದಿಂದ ಕೈ ತಪ್ಪುವ ಆತಂಕವಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಜನಮನ್ನಣೆ ದೊರೆತಿದ್ದು ಅಲ್ಲಿನ ಜನರಲ್ಲಿ ತಾವು ಭಾರತೀಯರು ಎಂಬ ಮನಃಸ್ಥಿತಿ ನಿರ್ಮಾಣವಾಗಿದೆ ಎಂದರು.
    ಬಿಜೆಪಿ ತಾಲೂಕು ಅಧÀ್ಯಕ್ಷ ರಾಘವೇಂದ್ರ ನಾಯಕ್ ಮಾತನಾಡಿ, ತ್ರಿಪುರಾದಲ್ಲಿ 60 ಸ್ಥಾನಗಳಲ್ಲಿ 33 ಸ್ಥಾನ ದೊರೆತಿದ್ದು ಸ್ಪಷ್ಟ ಬಹುಮತ ಬಂದಿದೆ. ನಾಗಾಲ್ಯಾಂಡಿನಲ್ಲಿ ಮಿತ್ರ ಪಕ್ಷಗಳ ಜತೆ 60ರಲ್ಲಿ 37 ಶಾಸಕರು ಚುನಾಯಿತರಾಗಿದ್ದಾರೆ ಎಂದರು.
    ಮುಖಂಡರಾದ ನವೀನ್ ಹೆದ್ದೂರು, ಸಂದೇಶ್ ಜವಳಿ, ಕಾಸರವಳ್ಳಿ ಶ್ರೀನಿವಾಸ್, ಚಂದವಳ್ಳಿ ಸೋಮಶೇಖರ್, ಕುಕ್ಕೆ ಪ್ರಶಾಂತ್, ಮಧುರಾಜ ಹೆಗ್ಡೆ, ರಕ್ಷಿತ್ ಮೇಗರವಳ್ಳಿ, ಜೆ.ಮಂಜುನಾಥ ಶೆಟ್ಟಿ, ಎಸಿಸಿ ಕೃಷ್ಣಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts