More

    ಇನ್ನೂ ಪಕ್ಕಾ ಇಲ್ಲ ದರ… ಆತಂಕದಲ್ಲಿ ಕಬ್ಬು ಬೆಳೆಗಾರ!

    ಬೆಳಗಾವಿ: ಕಾರ್ಮಿಕರ ಕೂಲಿ ಹಾಗೂ ಕೃಷಿ ಸಲಕರಣೆಗಳ ಬಾಡಿಗೆ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಇದೀಗ ಸಕ್ಕರೆ ಕಾರ್ಖಾನೆಗಳು ದರ ಘೋಷಣೆ ಮಾಡದೆ ಕಬ್ಬು ನುರಿಸಲು ಆರಂಭಿಸುತ್ತಿರುವುದು ಮತ್ತಷ್ಟು ಆತಂಕ ಹುಟ್ಟಿಸಿದೆ.

    ಕಳೆದ ವರ್ಷ ವಿವಿಧ ಕಾರಣ ಮುಂದಿಟ್ಟುಕೊಂಡು ಕಾರ್ಖಾನೆಗಳು ಟನ್ ಕಬ್ಬಿಗೆ 2,500 ರೂ. ಮಾತ್ರ ನೀಡಿವೆ. 2021-22ನೇ ಸಾಲಿನ ಹಂಗಾಮಿನಲ್ಲಿ ಎಫ್‌ಆರ್‌ಪಿ ಪ್ರಕಾರ 2,900ರೂ.ನಿಂದ 3,500 ರೂ.ವರೆಗೆ ದರ ನೀಡಬೇಕಿತ್ತು. ಆದರೆ, ಕಾರ್ಖಾ ನೆಗಳು ಅಧಿಕೃತವಾಗಿ ಇನ್ನೂ ಟನ್ ಕಬ್ಬಿನ ದರ ಘೋಷಿಸಿಲ್ಲ. ಬದಲಾಗಿ ಅಂದಾಜು ದರ ಹೇಳುತ್ತಿದ್ದು, ಬೆಳೆಗಾರರಿಗೆ ನಷ್ಟದ ಭೀತಿ ಕಾಡುತ್ತಿದೆ.

    ಟನ್‌ಗೆ 600ರೂ. ನಷ್ಟ: ರಾಜ್ಯದಲ್ಲಿ ಪ್ರಸ್ತುತ 67 ಸಕ್ಕರೆ ಕಾರ್ಖಾನೆಗಳಿದ್ದು, 61 ಕಾರ್ಖಾ ನೆಗಳು ಕಾರ್ಯ ನಿರ್ವಹಿ ಸುತ್ತಿವೆ. 5.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕವಾಗಿ 509.45 ಲಕ್ಷ ಮೆ.ಟನ್ ಕಬ್ಬು ಉತ್ಪಾದನೆಯಾ ಗುತ್ತಿದೆ. ವಾರ್ಷಿಕ ಸರಾಸರಿ 44.01 ಲಕ್ಷ ಟನ್ ಸಕ್ಕರೆ ಉತ್ಪಾದಿಸಿ, ಕಬ್ಬಿನ ಇಳುವರಿಯನ್ನು ಶೇ.10.75ರಿಂದ 11ರಷ್ಟು ದಾಖಲಿಸಿವೆ. ಆದರೆ, ಅಂದಾಜು ಆಧಾರದ ಮೇಲೆ ಟನ್ ಕಬ್ಬಿಗೆ 2,450ರೂ.ನಿಂದ 2,700 ರೂ.ವರೆಗೆ ದರ ನಿಗದಿ ಪಡಿಸುತ್ತಿದೆ. ಇದರಿಂದ ರೈತರಿಗೆ ಪ್ರತಿ ಟನ್‌ಗೆ 350ರೂ.ನಿಂದ 600 ರೂ.ವರಗೆ ನಷ್ಟವಾಗಲಿದೆ.

    ಎಫ್‌ಆರ್‌ಪಿ ೋಷಿಸಿಲ್ಲ: ಈಗಾಗಲೇ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ಕಬ್ಬಿಗೆ 285 ರೂ. ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ (ಎಫ್ ಆರ್‌ಪಿ) ನಿಗದಿ ಮಾಡಿತ್ತು. ಕಬ್ಬಿನಿಂದ ಉತ್ಪಾದನೆ ಆಗುವ ಸಕ್ಕರೆ ಪ್ರಮಾಣವು ಶೇ.10ರಷ್ಟಿದ್ದರೆ ಪ್ರತಿ ಕ್ವಿಂಟಾಲ್ ಕಬ್ಬಿಗೆ 290 ರೂ. ಎಫ್‌ಆರ್‌ಪಿ ಸಿಗಲಿದೆ.

    ಸಕ್ಕರೆ ಉತ್ಪಾದನೆ ಪ್ರಮಾಣವು ಶೇ.10ಕ್ಕಿಂತ ಜಾಸ್ತಿ ಇದ್ದರೆ, ಶೇ. 0.1ರಷ್ಟು ಪ್ರತಿ ಕ್ವಿಂಟಾಲ್‌ಗೆ ಹೆಚ್ಚುವರಿಯಾಗಿ 2.90 ರೂ.ಗಳನ್ನು ಕಾರ್ಖಾನೆಗಳು ಪಾವತಿಸಬೇಕಿದೆ. ಸಕ್ಕರೆ ಸಿಗುವ ಪ್ರಮಾಣ ಶೇ.10ಕ್ಕಿಂತ ಕಡಿಮೆ ಇದ್ದರೆ ಕಡಿತ ಕೂಡ ಆಗಲಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ಇಳುವರಿ ಆಧಾರದ ಮೇಲೆ ಎಫ್‌ಆರ್‌ಪಿ ಘೋಷಣೆ ಮಾಡುತ್ತಿಲ್ಲ ಎಂದು ಕಬ್ಬು ಬೆಳೆಗಾರರು ದೂರಿದ್ದಾರೆ.

    ರೈತರಿಂದಲೇ ಕಟಾವು ವೆಚ್ಚ ವಸೂಲಿ: ರಾಜ್ಯ ಸರ್ಕಾರವು 2019-20ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನ ಇಳುವರಿ ಆಧಾರ ಮೇಲೆ ಟನ್ ಕಬ್ಬಿಗೆ ಗರಿಷ್ಠ 3,477 ರೂ.ನಿಂದ ಕನಿಷ್ಠ 2,779 ರೂ.ವರೆಗೆ ದರ ಘೋಷಿಸಿತ್ತು. ಆದರೆ, ಬಹುತೇಕ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ 2500 ರೂ. ಮಾತ್ರ ನೀಡಿವೆ. ಇದೀಗ ಪ್ರಸಕ್ತ ಹಂಗಾಮಿನಲ್ಲೂ ಟನ್ ಕಬ್ಬಿಗೆ ಎಷ್ಟು ದರ ನೀಡುತ್ತೇವೆ ಎಂದು ಯಾವ ಕಾರ್ಖಾನೆಯವರೂ ಅಧಿಕೃತವಾಗಿ ಹೇಳುತ್ತಿಲ್ಲ. ಅಂದಾಜು ದರ ನೀಡತೊಡಗಿವೆ. ಕಟಾವು ಮತ್ತು ಸಾರಿಗೆ ವೆಚ್ಚವನ್ನೂ ರೈತರಿಂದಲೇ ವಸೂಲಿ ಮಾಡುತ್ತಿದ್ದಾರೆ. ಇದು ಕಾರ್ಖಾನೆಗಳಿಗೇ ಲಾಭ ಆಗುತ್ತಿದೆಯೇ ವಿನಃ ಬೆಳೆಗಾರರಿಗೆ ಅಲ್ಲ. ಹೀಗಾಗಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಟನ್ ಕಬ್ಬಿಗೆ ದರ ಘೋಷಣೆ ಮಾಡಬೇಕು ಎಂದು ಕಬ್ಬು ಬೆಳೆಗಾರರಾದ ಶ್ರೀಕಾಂತ ದೇಸಾಯಿ, ಪರಶುರಾಮ ವಾಲಿ, ಶಂಕರಗೌಡ ಪಾಟೀಲ ಒತ್ತಾಯಿಸಿದ್ದಾರೆ.

    ಕಳೆದ ವರ್ಷ ಕಬ್ಬು ನುರಿಸಿದ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿದ್ದ 2ನೇ ಕಂತಿನ ಕಬ್ಬಿನ ಬಾಕಿ ಬಿಲ್ ಇನ್ನೂ ನೀಡಿಲ್ಲ. ಎಫ್‌ಆರ್‌ಪಿ ಪ್ರಕಾರ ಶೇ. 10ರಷ್ಟು ಇಳುವರಿಗೆ 2,900ರೂ. ನೀಡಬೇಕು. ನೆರೆಯ ಮಹಾರಾಷ್ಟ್ರದಲ್ಲಿ ಕಟಾವು, ಸಾಗಣೆ ವೆಚ್ಚ ಬಿಟ್ಟು ಟನ್ ಕಬ್ಬಿಗೆ 2,900ರೂ.ನಿಂದ 3,000 ರೂ.ವರೆಗೆ ನೀಡುತ್ತಿವೆ. ಆದರೆ, ನಮ್ಮ ರಾಜ್ಯದಲ್ಲಿ ಇಳುವರಿ ಹೆಚ್ಚಾಗಿದ್ದರೂ ಸಹ ದರ ನೀಡುತ್ತಿಲ್ಲ.
    | ಚೂನಪ್ಪ ಪೂಜೇರಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ

    2021-22ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾಗಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರವು ಕಬ್ಬಿನ ದರ ಘೋಷಣೆ ಮಾಡಲಿದೆ. ಈಗಾಗಲೇ ಕೇಂದ್ರ ಸರ್ಕಾರವು ಶೆ.10 ಇಳುವರಿ ಇರುವ ಟನ್ ಕಬ್ಬಿಗೆ 2,900 ರೂ. ಎಫ್‌ಆರ್‌ಪಿ ಘೋಷಣೆ ಮಾಡಿದೆ.
    | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts