More

    7,03,430 ಮೆ.ಟನ್ ಕಬ್ಬು ನುರಿಕೆ

    ಹುಕ್ಕೇರಿ: ತಾಲೂಕಿನ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಹಿರಿಯ ನಿರ್ದೇಶಕ ಅಪ್ಪಾಸಾಹೇಬ ಶಿರಕೋಳಿ ಧ್ವಜಾರೋಹಣ ನೆರವೇರಿಸಿದರು.

    ಕಾರ್ಖಾನೆ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ ಮಾತನಾಡಿ, ಕಾರ್ಖಾನೆ 91 ದಿನಗಳಲ್ಲಿ 7,03,430 ಮೆ.ಟನ್ ಕಬ್ಬು ನುರಿಸಿ 6,01,200 ಕ್ವಿಂಟಾಲ್ ಸಕ್ಕರೆ, 38 ಲಕ್ಷ ಲೀಟರ್ ಎಥೆನಾಲ್ ಉತ್ಪಾದಿಸಿ ದಾಖಲೆ ನಿರ್ಮಿಸಿದೆ ಎಂದರು. ಗಣರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಕಾರ್ಖಾನೆ ನೌಕರರ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

    ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು. ಈಚಗೆ ಕಾರ್ಖಾನೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ರಾಜು ವಾಳಕಿ ನಿಧನರಾಗಿದ್ದು, ಅವರ ಪತ್ನಿ ಸುನೀತಾ ವಾಳಕಿಗೆ 5 ಲಕ್ಷ ರೂ. ವಿಮೆ ಪರಿಹಾರ ಹಾಗೂ 1.23 ಲಕ್ಷ ರೂ. ಚೆಕ್ ವಿತರಿಸಲಾಯಿತು.

    ನಿರ್ದೇಶಕರಾದ ಪ್ರಭುದೇವ ಪಾಟೀಲ, ಬಸಪ್ಪ ಮರಡಿ, ಬಸವರಾಜ ಕಲ್ಲಟ್ಟಿ, ಸುರೇಂದ್ರ ದೊಡ್ಡಲಿಂಗನವರ, ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಕರ್ಕಿನಾಯಿಕ, ಕಾರ್ಯಾಲಯ ಅಧೀಕ್ಷಕ ಸುಭಾಷ ನಾಶಿಪುಡಿ, ಎಂ.ಆರ್.ಪಾಟೀಲ, ವಿ.ಎಸ್.ಕತ್ತಿ, ಕೆ.ಆರ್.ಬೆಟಗೇರಿ, ಎ.ಆರ್.ಚಾಟೆ, ಎಂ.ವೈ.ಪಾಟೀಲ, ಆನಂದ ಪೂಜೇರಿ, ಬಿ.ಎಸ್.ವರ್ಜಿ, ಬಾಬಾಸಾಹೇಬ ನಾಗನೂರಿ, ಲಕ್ಷ್ಮಣ ಹಂಚಿನಮನಿ, ಸುಭಾಷ ನಾಶಿಪುಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts