More

    ಕಬ್ಬು, ತೆಂಗು ಬೆಂಕಿಗಾಹುತಿ

    ಕಿಕ್ಕೇರಿ: ಹೋಬಳಿಯ ಈಚಲುಗುಡ್ಡೆ ಕಾವಲು ಹಾಗೂ ಗೋವಿಂದನಹಳ್ಳಿ ಕೊಪ್ಪಲು ಬಳಿ ಮಂಗಳವಾರ ಸಂಜೆ ಬಿದ್ದ ಬೆಂಕಿಗೆ ಕುರುಚಲು ಗಿಡ, ರೈತರ ಜಮೀನಿನಲ್ಲಿದ್ದ ಕಬ್ಬು, ತೆಂಗು ಸುಟ್ಟು ಕರಕಲಾಗಿದೆ.

    ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಒಣಗಿದ್ದ ಕುರುಚಲು ಗಿಡಕ್ಕೆ ಬೆಂಕಿ ಬಿದ್ದಿದೆ. ಕ್ಷಣಮಾತ್ರದಲ್ಲಿ ಅಕ್ಕಪಕ್ಕದಲ್ಲಿದ್ದ ಕಬ್ಬಿನ ಗದ್ದೆ, ತೆಂಗಿನ ತೋಟಕ್ಕೆ ಬೆಂಕಿ ಆವರಿಸಿದೆ. ಗೋವಿಂದನಹಳ್ಳಿ ಕೊಪ್ಪಲು ಶಾಮಣ್ಣ ಅವರ 13 ಎಕರೆಯಲ್ಲಿದ್ದ 400 ತೆಂಗಿನ ಸಸಿ, ಕಬ್ಬು, ಜಮೀನುನಲ್ಲಿ ಅಳವಡಿಸಿದ್ದ ಹನಿ ನೀರಾವರಿ ಪೈಪುಗಳು ಸುಟ್ಟುಹೋಗಿವೆ. ತಮ್ಮಣ್ಣ ಅವರ ಹತ್ತು ಎಕರೆಯಲ್ಲಿ ಬೆಳೆದಿದ್ದ 600ಕ್ಕೂ ಹೆಚ್ಚು ತೆಂಗು, ನಂಜೇಗೌಡ ಅವರ 2 ಎಕರೆಯಲ್ಲಿ ಬೆಳೆದಿದ್ದ ಕಬ್ಬು, ಕುರಚಲು ಗಿಡ ಸುಟ್ಟು ಭಸ್ಮವಾಗಿದೆ.

    ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕದಳ ಅಧಿಕಾರಿ ಶಿವಣ್ಣ, ದಿನೇಶ್, ಯಮುನಪ್ಪ, ಶ್ರೀಧರ ಅವಟಿ, ಶ್ರೀಕಾಂತ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts