More

    ಇಕೋ ಸ್ಮಾರ್ಟ್ ಕೋಸ್ಟಲ್ ವಿಲೇಜ್ ಯೋಜನೆಗೆ ಅಪ್ಸರಕೊಂಡ ಆಯ್ಕೆ

    ಕಾರವಾರ: ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಪಂ ವ್ಯಾಪ್ತಿಯ ಅಪ್ಸರಕೊಂಡ ಊರನ್ನು ಕೇಂದ್ರ ಸರ್ಕಾರದ ಇಕೋ ಸ್ಮಾರ್ಟ್ ಕೋಸ್ಟಲ್ ವಿಲೇಜ್ ಯೋಜನೆಗೆ ಆಯ್ಕೆ ಮಾಡಲಾಗಿದೆ.

    ಈ ಯೋಜನೆಗೆ ಆಯ್ಕೆಯಾದ ರಾಜ್ಯದ ಮೊದಲ ಗ್ರಾಮ ಇದಾಗಿದೆ. ಪರಿಸರ, ಅರಣ್ಯ ಹಾಗೂ ವಾತಾವರಣ ಬದಲಾವಣೆ ಸಚಿವಾಲಯ ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ (ಐಸಿಝುಡ್​ಎಂಪಿ) ಅಡಿ ಈ ಆಯ್ಕೆ ಮಾಡಿದ್ದು, ಗ್ರಾಮದ ಸುಸ್ಥಿರ ಅಭಿವೃದ್ಧಿಗೆ ಯೋಜನೆ ನೆರವಾಗಲಿದೆ.

    ಕೆಳಗಿನೂರು ಗ್ರಾಪಂ ವ್ಯಾಪ್ತಿಗೆ ಸೇರಿದ ಅಪ್ಸರಕೊಂಡ 436 ಜನಸಂಖ್ಯೆ ಹೊಂದಿರುವ ಕಡಲ ತೀರದ ಸುಂದರ ಊರು. ಮೀನುಗಾರಿಕೆ ಹಾಗೂ ಕೃಷಿ ಇಲ್ಲಿನ ಪ್ರಮುಖ ಉದ್ಯೋಗವಾಗಿದೆ. ಗ್ರಾಮದಲ್ಲಿರುವ ಸಣ್ಣ ಜಲಪಾತ ಹಾಗೂ ಸುಂದರ ಕಡಲ ತೀರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿದ ಉದ್ಯಾನವನ್ನು ಗ್ರಾಮ ಅರಣ್ಯ ಸಮಿತಿ ರಚಿಸಿಕೊಂಡು ನಿರ್ವಹಿಸಲಾಗುತ್ತದೆ.

    ಏನು ಮಾಡಲಾಗುತ್ತದೆ?: ಈಗಾಗಲೇ ಗುಜರಾತ್ ಹಾಗೂ ಒರಿಸ್ಸಾದಲ್ಲಿ ಈ ರೀತಿ ಕೆಲ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಪ್ಸರಕೊಂಡ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮದ ಜನರಿಗೆ ಮೀನುಗಾರಿಕೆ, ಕೃಷಿ ಕೌಶಲ ಅಭಿವೃದ್ಧಿಗೆ ಪರಿಸರ ಸ್ನೇಹಿ ತರಬೇತಿ ನೀಡಲಾಗುತ್ತದೆ. ಸ್ವಸಹಾಯ ಸಂಘಗಳನ್ನು ಅಭಿವೃದ್ಧಿ ಮಾಡಿ ಜನರ ಆರ್ಥಿಕ ಪರಿಸ್ಥಿತಿ ವೃದ್ಧಿಸಲು ಕ್ರಮ ವಹಿಸಲಾಗುತ್ತದೆ. ಸೌರ ಶಕ್ತಿ ಬಳಕೆ ಹೆಚ್ಚಿಸುವುದು, ಗಿಡಗಳ ನಾಟಿ ಮುಂತಾದ ವಿಧಾನಗಳಿಗೆ ಒತ್ತು ನೀಡಲಾಗುತ್ತದೆ. ಸಮೀಪದಲ್ಲೇ ಕಾಸರಕೋಡಿನ ಪ್ರಸಿದ್ಧ ಬ್ಲೂ ಫ್ಲ್ಯಾಗ್ ಬೀಚ್ ಕೂಡ ಇರುವುದರಿಂದ ಪ್ರವಾಸೋದ್ಯಮಕ್ಕೆ ಅತಿ ಹೆಚ್ಚು ಅನುಕೂಲವಾಗಲಿದೆ ಎಂಬ ಅಭಿಪ್ರಾಯವಿದೆ.

    ಕೋಸ್ಟಲ್ ಸ್ಮಾರ್ಟ್ ವಿಲೇಜ್ ಯೋಜನೆಗೆ ಅಪ್ಸರಕೊಂಡ ಗ್ರಾಮವನ್ನು ಆಯ್ಕೆ ಮಾಡಿ ವಿಸõತ ಯೋಜನಾ ವರದಿ ಕೂಡ ಸಿದ್ಧವಾಗಿದೆ. ಆದರೆ, ಕೋವಿಡ್ ಕಾರಣದಿಂದ ಯಾವುದೇ ಕಾರ್ಯಚಟುವಟಿಕೆ ಪ್ರಾರಂಭವಾಗಿಲ್ಲ. ಮೀನುಗಾರಿಕೆ, ಕೃಷಿ, ತೋಟಗಾರಿಕೆ, ಅರಣ್ಯ ಹೀಗೆ ವಿವಿಧ ಇಲಾಖೆ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿ ಇಲ್ಲಿ ಯೋಜನೆ ಜಾರಿಗೆ ತರಲಾಗುತ್ತದೆ.

    | ಪ್ರಸನ್ನ ಪಟಗಾರ, ಕರಾವಳಿ ನಿಯಂತ್ರಣ ವಲಯ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts