More

    ಆರೋಗ್ಯಕರ ಆಹಾರ ಸೇವಿಸಿ ದೇಹ ಸದೃಢವಾಗಿಡಿ

    ಕುಂದಗೋಳ: ಭಗವಂತ ಮನá-ಷ್ಯನಿಗೆ ಸದೃಢ ದೇಹ ಕೊಟ್ಟಿದ್ದಾನೆ. ಆರೋಗ್ಯಕರ ಆಹಾರ ಸೇವಿಸಿ ಸದೃಢವಾಗಿರಬೇಕು. ಅದರ ಬದಲು ಮದ್ಯ ಗುಟ್ಖಾ ಸೇವನೆಯಂಥ ದುಶ್ಚಟಗಳನ್ನು ರೂಢಿಸಿಕೊಂಡರೆ ಆ ದೇಹವು ಬಹಳ ದಿನ ಬದುಕುವುದಿಲ್ಲ ಎಂದು ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರು ಹೇಳಿದರು.

    ಪಟ್ಟಣದ ಕಲ್ಯಾಣಪುರದ ಬಸವಣ್ಣಜ್ಜನವರ ಸಮುದಾಯ ಭವನದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

    ಪಟ್ಟಣ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಕಿರೆಸೂರ ಮಾತನಾಡಿ, ‘ಮಹಿಳೆಯರು ಸ್ವಾಲಂಬಿಯಾಗಿ ಬದುಕಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸ್ವ-ಸಹಾಯ ಸಂಘಗಳನ್ನು ಕಟ್ಟಿಕೊಟ್ಟಿದ್ದಾರೆ. ಅದೇ ರೀತಿ ಪುರುಷರು ಹಾಗೂ ಯುವ ಪೀಳಿಗೆ ದುಶ್ಚಟಗಳಿಂದ ಮುಕ್ತರಾಗಬೇಕು ಎಂಬ ಉದ್ದೇಶದಿಂದ ಉಚಿತ ಮದ್ಯವರ್ಜನ ಶಿಬಿರ ಏರ್ಪಡಿಸುತ್ತಿದ್ದಾರೆ. ಈಗಾಗಲೇ 14,165 ಮದ್ಯವರ್ಜನ ಶಿಬಿರಗಳು ಯಶಸ್ವಿಯಾಗಿವೆ ಎಂದರು.

    ಪಟ್ಟಣದ ಕಲ್ಯಾಣಪುರದ ಬಸವಣ್ಣಜ್ಜನವರು ಈ ಶಿಬಿರಕ್ಕೆ ಎಂಟು ದಿನಗಳ ಕಾಲ ಸಮುದಾಯ ಭವನ ಹಾಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದರು. ಅಲ್ಲದೆ, ಕಾರ್ಯಕ್ರಮವನ್ನು ಶಿಬಿರಾರ್ಥಿಗಳಿಂದ ಉದ್ಘಾಟಿಸುವ ಮೂಲಕ ಅವರಲ್ಲಿ ಹೊಸ ಹುಮ್ಮಸ್ಸು ತುಂಬಿದರು. ಶಿಬಿರದಲ್ಲಿ 60 ಜನ ಭಾಗವಹಿಸಿದ್ದರು. ಜಿಪಂ ಸದಸ್ಯ ಉಮೇಶ ಹೆಬಸೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಸಂಚಾಲಕ ಕುಸುಮಾಧರ ಕೆ., ಸುರೇಶ ಮೂಲೆ, ಬಸವರಾಜ ಶಿರಸಂಗಿ, ಕಲ್ಲಪ್ಪ ಹರಕುಣಿ, ನಿಂಗಪ್ಪ ಅಕ್ಕಿ, ಸಂಗಮೇಶ್ವರ ಪವಾಡಶೆಟ್ಟರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts