More

    ಆಯುಷ್ಮಾನ್ ಯೋಜನೆಯಿಂದ ಅನುಕೂಲ

    ಎಚ್.ಡಿ.ಕೋಟೆ: ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಿಂದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.

    ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಗ್ರಾಮ ಒನ್ ಮತ್ತು ಆರೋಗ್ಯ ಇಲಾಖೆಯ ವಿಶೇಷ ಆಂದೋಲನದಡಿ ಸಾರ್ವಜನಿಕರಿಗೆ ಆಯುಷ್ಮಾನ್ ಕಾರ್ಡ್ ಅನ್ನು ಉಚಿತವಾಗಿ ವಿತರಿಸಿ ಮಾತನಾಡಿದರು. ಭಾರತದ ಎಲ್ಲ ರಾಜ್ಯಗಳ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಆರೋಗ್ಯ ಸೌಲಭ್ಯ ದೊರೆಯಲಿದೆ. ರೋಗಿಯ ಎಲ್ಲ ಮಾಹಿತಿಯೂ ಇದರಲ್ಲಿ ಅಡಕವಾಗಿರುತ್ತದೆ. ಕುಟುಂಬದ ಪ್ರತಿ ಸದಸ್ಯ ಹೆಸರನ್ನು ನೋಂದಾಯಿಸತಕ್ಕದ್ದು. ಬಿಪಿಎಲ್ ಕಾರ್ಡ್ ಹೊಂದಿದವರಿಗೆ 5 ಲಕ್ಷ ರೂ., ಎಪಿಎಲ್ ಕಾರ್ಡ್‌ದಾರರಿಗೆ 1.5 ಲಕ್ಷ ರೂ.ವರೆಗೆ ಅಥವಾ ಚಿಕಿತ್ಸೆ ವೆಚ್ಚದಲ್ಲಿ ಶೇ.30ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದರು.

    ಇದೇ ವೇಳೆ ಹೆಬ್ಬಲಗುಪ್ಪೆ, ತುಂಬಸೋಗೆ, ಚಕ್ಕೊಡನಹಳ್ಳಿ ಗ್ರಾಮಕ್ಕೆ ಟಿಎಚ್‌ಒ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts