More

  ಮರಿತಿಬ್ಬೇಗೌಡರಿಂದ ಶಿಕ್ಷಕರ ಪರ ನಿರಂತರ ಹೋರಾಟ

  ತಿ.ನರಸೀಪುರ : ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಪರವಾಗಿ ತಾ.ಪಂ.ಮಾಜಿ ಅಧ್ಯಕ್ಷ ನೆರಗ್ಯಾತನಹಳ್ಳಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಟ್ಟಣದ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ ಮುಖಂಡರು ಮತಯಾಚನೆ ಮಾಡಿದರು.
  ಪಟ್ಟಣದ ವಿದ್ಯೋದಯ ಪ್ರಥಮ ದರ್ಜೆ ಕಾಲೇಜು, ಬಾಲಕ ಮತ್ತು ಬಾಲಕಿಯರ ಶಾಲೆ, ಪಿ.ಆರ್.ಎಂ. ಪ್ರಥಮ ದರ್ಜೆ ಕಾಲೇಜು, ಐಟಿಐ ಕಾಲೇಜು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೆರಳಿದ ಕಾಂಗ್ರೆಸ್ ಪಕ್ಷದ ಮುಖಂಡರು ಮರಿ ತಿಬ್ಬೇಗೌಡರ ಪರವಾಗಿ ಶಿಕ್ಷಕರ ಮತಯಾಚನೆ ಮಾಡಿದರು. ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹಾದೇವಸ್ವಾಮಿ ಅವರನ್ನು ಭೇಟಿ ಮಾಡಿದ ಮುಖಂಡರು ಮರಿತಿಬ್ಬೇಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
  ತಾ.ಪಂ.ಮಾಜಿ ಅಧ್ಯಕ್ಷ ನೆರಗ್ಯಾತನಹಳ್ಳಿ ಕುಮಾರಸ್ವಾಮಿ ಶಿಕ್ಷಕರ ಶ್ರೇಯೋಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಶಿಕ್ಷಕರ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ಮರಿತಿಬ್ಬೇಗೌಡರು ಮತ್ತೊಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಯಾಗಬೇಕಿದೆ. ಶಿಕ್ಷಣ ರಂಗವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಪರಿಭಾವಿಸಿರುವ ಅವರು, ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾಗಿ ಶೈಕ್ಷಣಿಕ ರಂಗದ ಪ್ರಗತಿಗಾಗಿ ದುಡಿಯುತ್ತಿದ್ದಾರೆ. ಹಾಗಾಗಿ ಮತ್ತೊಂದು ಅವಧಿಗೆ ಅವಕಾಶ ಸಿಕ್ಕಲ್ಲಿ ನನೆಗುದಿಗೆ ಬಿದ್ದಿರುವ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ನೀಡಲು ಮುಂದಾಗಿದ್ದಾರೆ ಎಂದರು.

  ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ, ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಬಸವಣ್ಣಸ್ವಾಮಿ, ಎಂ.ಸುರೇಶ್, ಮಾನಸಾ, ಎನ್.ಕಲ್ಪನಾ, ಉಪನ್ಯಾಸಕರಾದ ಮೂಗೂರು ಕುಮಾರಸ್ವಾಮಿ, ರವಿ, ನಾಗೇಂದ್ರ, ರವೀಶ್ ಕುಮಾರ್, ಶಿವ ಶಂಕರ್, ಕೆ.ಜಿ.ಸವಿತಾ, ಆರ್.ಎಸ್.ಮಹದೇವಸ್ವಾಮಿ, ಆಡಳಿತ ಸಹಾಯಕ ಶಿವನಂಜಪ್ಪ, ತಿಬ್ಬೇಗೌಡರ ಆಪ್ತ ಸಹಾಯಕ ಕಂಚುಗನಹಳ್ಳಿ ಷಡಕ್ಷರಿ ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts