More

    ಅರ್ಹರು ಅಧಿಕಾರಕ್ಕೆ ಬರಲಿ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯ

    ತುಮಕೂರು : ಬಡವರು ಹಾಗೂ ಅರ್ಹರಷ್ಟೇ ಅಧಿಕಾರಕ್ಕೆ ಬರುವ ವಾತಾವರಣ ರಾಜಕಾರಣದಲ್ಲಿ ಸೃಷ್ಟಿಯಾದಾಗ ಉತ್ತಮ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷೆ ಮಾಡಬಹುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

    ನಗರದ ಶ್ರೀವಾಲ್ಮೀಕಿ ಕನ್ವೆನ್ಷನ್ ಹಾಲ್‌ನಲ್ಲಿ ಶ್ರೀ ವಾಲ್ಮೀಕಿ ವಿದ್ಯಾವರ್ಧಕ ಸಂದಿಂದ ಭಾನುವಾರ ಹಮ್ಮಿಕೊಂಡಿದ್ದ ತುಮಕೂರು ಮೇಯರ್ ಬಿ.ಜಿ.ಕೃಷ್ಣಪ್ಪ ಅವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಚುನಾವಣೆಯಲ್ಲಿ ದುಡ್ಡಿರುವವರು, ಕಳ್ಳ ದುಡ್ಡಿರುವವರು, ಮುಂದೆ ಕಳ್ಳ ದುಡ್ಡು ಮಾಡುವವರೇ ಅಧಿಕಾರಕ್ಕೆ ಬಂದರೆ ನಾವು ಅವರಿಂದ ಏನೂ ನಿರೀಕ್ಷೆ ಮಾಡುವುದಕ್ಕಾಗುವುದಿಲ್ಲ. ಆದ್ದರಿಂದ ಬಡವರು ಮತ್ತು ಅರ್ಹರನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ ಎಂದರು.

    ಇಂದು ಯಾರೂ ಪ್ರಾಮಾಣಿಕವಾಗಿ ಬದುಕುವುದಕ್ಕೆ ರಾಜಕಾರಣದ ವ್ಯವಸ್ಥೆ ಬಿಡುತ್ತಿಲ್ಲ, ಗ್ರಾಪಂ ಸದಸ್ಯರಾಗಬೇಕೆಂದರೆ ಎರಡು ಎಕರೆ ಹೊಲ ಮಾರಬೇಕಾದ ಪರಿಸ್ಥಿತಿ ಬಂದೊದಗಿದೆ. ಸೋತವರು ವಾರಬೇಕು, ಗೆದ್ದವರು ವಾರಬೇಕು, ಎಲ್ಲಿ ತರುತ್ತಾನೆ ದುಡ್ಡು, ತಾಪಂ, ಜಿಪಂ ಇದಕ್ಕೆ ಹೊರತಾಗಿಲ್ಲ. ವ್ಯವಸ್ಥೆ ಹೀಗಿರಬೇಕಾದರೆ ಬಡವರು ಅಧಿಕಾರಕ್ಕೆ ಬರುವುದಕ್ಕಾಗುತ್ತದೆಯೇ ಎಂದು ಪ್ರಶ್ನಿಸಿದರು.

    ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳು ರಾಜಕೀಯ ಅಧಿಕಾರಕ್ಕೆ ಬರುವುದು ಬಹಳ ಕಷ್ಟ, ಇಷ್ಟೆಲ್ಲಾ ಕಷ್ಟಗಳಿದ್ದರೂ ಹಿರಿಯರ ಆಶೀರ್ವಾದದಿಂದ ಸಮಾಜದಲ್ಲಿ ಸ್ಥಾನಮಾನವನ್ನು ಗಳಿಸಿ ರಾಜಕೀಯ ಸ್ಥಾನವಾನ ಗಳಿಸುವುದು ಪೂರ್ವಜನ್ಮದ ಸುಕೃತ ಎಂದು ಭಾವಿಸುತ್ತೇನೆ ಎಂದರು.
    ತುಮಕೂರು ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ನಮ್ಮ ಸಮುದಾಯವಿದೆ ಎಂಬುದು ಬಹಳಷ್ಟು ಜನಕ್ಕೆ ಅರಿವೇ ಇರಲಿಲ್ಲ, ಬಲಾಢ್ಯ ಕೋಮುಗಳು ಸಣ್ಣಸಮುದಾಯಗಳ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯನ್ನು ಕಂಡು ಇಂತಹ ದಬ್ಬಾಳಿಕೆಗಳಿಗೆ ಅಂತ್ಯ ಕಾಣಿಸಬೇಕು ಎಂಬ ನಿಟ್ಟಿನಲ್ಲಿ ಸುವಾರು 50 ವರ್ಷಗಳಿಂದಲೂ ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ತಪ್ಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೇಯರ್ ಬಿ.ಜಿ.ಕೃಷ್ಣಪ್ಪ, ಮಾಜಿ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರೇ ನನಗೆ ಸ್ಪೂರ್ತಿ, ನನ್ನ ಅಧಿಕಾರಾವಧಿಯಲ್ಲಿ ಸವಾಜಕ್ಕೆ ಮತ್ತು ನನ್ನ ಕ್ಷೇತ್ರದ ಅಭಿವೃದ್ಧಿ ಜತೆಗೆ ತುಮಕೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

    ಅಧಿಕಾರವಿರಲಿ, ಇಲ್ಲದಿರಲಿ ಸಮಾಜದ ಬಡವರಿಗೆ ಸಹಾಯ ಮಾಡುವುದು ನನ್ನ ಆದ್ಯತೆ. ನನಗೆ ಸಿಕ್ಕ ಮೇಯರ್ ಸ್ಥಾನದ ಗೌರವ ಮತ್ತು ಸಮಾಜದ ಗೌರವವನ್ನು ಎಂದಿಗೂ ಕಡೆಗಣಿಸುವುದಿಲ್ಲ, ಆ ಸ್ಥಾನಕ್ಕೆ ಗೌರವ ತಂದುಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು.
    ಸಮಾರಂಭದಲ್ಲಿ ಶ್ರೀ ವಾಲ್ಮೀಕಿ ವಿದ್ಯಾವರ್ಧಕ ಸಂದ ಗೌರವಾಧ್ಯಕ್ಷ ಭೀಮಣ್ಣ, ಅಧ್ಯಕ್ಷ ಪುರುಷೋತ್ತಮ್, ಖಜಾಂಚಿ ರಾಜೇಂದ್ರ ನಾಯಕ್, ನಿರ್ದೇಶಕರಾದ ಶಾಂತಲಾ, ಡಿ.ಎಸ್.ಶಿವಸ್ವಾಮಿ, ಕೆಂಪಹನುಮಯ್ಯ, ಅಂಜನ್‌ಕುವಾರ್, ವಿಜಯ್‌ಕುವಾರ್, ರವಿಕುಮಾರ್, ಜಿ.ತಿಪ್ಪೇಸ್ವಾಮಿ, ಸರಸ್ವತಿ, ಕಸ್ತೂರಿ, ರಾಜಕುವಾರ್, ನಾಗರಾಜಯ್ಯ, ನರಸಿಂಹಕೃಷ್ಣ, ಉಮೇಶ್, ದೇವರಾಜ್ ಮತ್ತಿತರರು ಇದ್ದರು.

    ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ : ಎಲ್ಲ ಜಾತಿಗಳಲ್ಲಿರುವ ಬಡವರನ್ನು ಗುರುತಿಸುವ ಏಕೈಕ ಪಕ್ಷ ಕಾಂಗ್ರೆಸ್. ಪಕ್ಷದ ಸಿದ್ಧಾಂತ, ಜನರಿಗೆ ಅನುಕೂಲ ಮಾಡಿಕೊಡುವಂತ ಮನಸ್ಸುಳ್ಳ ಕಾಂಗ್ರೆಸ್‌ಗೆ ಬೇರೆ ಯಾವ ಪಕ್ಷವೂ ಸಾಟಿಯಿಲ್ಲ, ಅದರಿಂದ ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು.

    ನಾನು ಪ್ರತಿ ಬಾರಿಯೂ ಸಾಮಾನ್ಯ ಕ್ಷೇತ್ರವಾದ ಮಧುಗಿರಿಯಲ್ಲೇ ಸ್ಪರ್ಧಿಸುತ್ತಿದ್ದೇನೆ, ಬೇರೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ, ಅಧಿಕಾರವಿರಲಿ, ಇಲ್ಲದಿರಲಿ ನಮ್ಮ ಜಿಲ್ಲೆಯ ಹಿಡಿತ ಎಂದಿಗೂ ಬಿಡುವುದಿಲ್ಲ, ಮುಂಬರುವ ಚುನಾವಣೆಯಲ್ಲಿ ನಮ್ಮ ಜಿಲ್ಲೆಯಲ್ಲೇ ಸ್ಪರ್ಧಿಸಿ ಅಧಿಕಾರಕ್ಕೆ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts