More

    ಅಯೋಧ್ಯೆ ತೀರ್ಪಿನ ವಿರುದ್ಧ ಅರ್ಜಿ

    ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ವಿವಾದ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮರುಪರಿಶೀಲಿಸಿ ಎಂದು ಕೇರಳ ಮೂಲದ ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಶುಕ್ರವಾರ ಕ್ಯುರೇಟಿವ್ ಅರ್ಜಿ ಸಲ್ಲಿಕೆ ಮಾಡಿದೆ.

    ಅರ್ಜಿಯನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಹಾಗೂ ಕಳೆದ ವರ್ಷ ನವೆಂಬರ್​ನಲ್ಲಿ ಅಯೋಧ್ಯೆ ಕುರಿತು ನೀಡಿದ ಐತಿಹಾಸಿಕ ತೀರ್ಪಿಗೆ ತಡೆ ನೀಡಬೇಕು ಎಂದು ಪಿಎಫ್​ಐ ಮನವಿ ಮಾಡಿದೆ. ಜ. 21ರಂದು ಉತ್ತರ ಪ್ರದೇಶದ ಪೀಸ್ ಪಕ್ಷದ ಡಾ. ಅಯೂಬ್ ತೀರ್ಪು ಪ್ರಶ್ನಿಸಿ ಮೊದಲ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು. ಅಯೋಧ್ಯೆ ಪ್ರಕರಣದಲ್ಲಿ ನಂಬಿಕೆಯ ಆಧಾರದ ಮೇಲೆ ತೀರ್ಪು ನೀಡಲಾಗಿದೆ. ಹೀಗಾಗಿ ತೀರ್ಪಿನ ಬಗ್ಗೆ ಮತ್ತೆ ವಿಚಾರಣೆ ಮಾಡಬೇಕು ಎಂದು ಅಯೂಬ್ ಮನವಿ ಮಾಡಿದ್ದರು.

    ಆದರೆ ಕ್ಯುರೇಟಿವ್ ಅರ್ಜಿಗಳನ್ನು ಸಲ್ಲಿಸಿರುವ ಪೀಸ್ ಪಕ್ಷ ಮತ್ತು ಪಿಎಫ್​ಐ ಅಯೋಧ್ಯೆ ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ ಪ್ರಕರಣದಲ್ಲಿ ಎಂದಿಗೂ ಪಾರ್ಟಿಗಳಾಗಿರಲಿಲ್ಲ. ಕಳೆದ ವರ್ಷ ನ. 9ರಂದು ಅಯೋಧ್ಯೆ ಪ್ರಕರಣ ಕುರಿತು ಐತಿಹಾಸಿಕ ತೀರ್ಪು ನೀಡಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ, ವಿವಾದಿತ 2.77 ಎಕರೆ ಭೂಮಿಯನ್ನು ಸಂಪೂರ್ಣವಾಗಿ ರಾಮಲಲ್ಲಾಗೆ ನೀಡಿ, ಮಸೀದಿ ನಿರ್ವಣಕ್ಕಾಗಿ ಮುಸ್ಲಿಮರಿಗೆ ಅಯೋಧ್ಯೆ ಹೊರಗೆ ಐದು ಎಕರೆ ಭೂಮಿ ನೀಡುವಂತೆ ಆದೇಶಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts