More

    ಕನ್ನಡಿಗನಿಗೆ ರಾಮಮಂದಿರದ ಹೊಣೆ

    ಸಿದ್ದಾಪುರ: ಅಯೋಧ್ಯೆಯಲ್ಲಿ ನಿರ್ವಣವಾಗಲಿರುವ ಶ್ರೀರಾಮ ಮಂದಿರ ನಿರ್ವಣದ ಹೊಣೆ ಹೊಸ್ತೋಟ ನಾಗರಕಟ್ಟೆಯ ಗೋಪಾಲ ಮಹಾಬಲೇಶ್ವರ ಭಟ್ಟ ಅವರ ಹೆಗಲೇರಿದೆ.

    ವಿಶ್ವ ಹಿಂದು ಪರಿಷತ್​ನ ಸಂಘಟನಾ ಮಂತ್ರಿ ಆಗಿರುವ ಇವರಿಗೆ ಶ್ರೀರಾಮ ಮಂದಿರ ನಿರ್ವಣದ ಜವಾಬ್ದಾರಿ ಲಭಿಸಿರುವುದು ಕನ್ನಡಿಗರಿಗೆ ನೀಡಿದ ಗೌರವವಾಗಿದೆ. ಮಂದಿರ ನಿರ್ಮಾಣ ಆಗುವವರೆಗೂ ಅದರ ಮೇಲುಸ್ತುವಾರಿಯನ್ನು ನೋಡಿಕೊಳ್ಳುವಂತೆ ಸಂಘ ಪರಿವಾರ ಮತ್ತು ವಿಶ್ವ ಹಿಂದು ಪರಿಷತ್​ನ ಹಿರಿಯರು ಸೂಚಿಸಿರುವುದರಿಂದ ಗೋಪಾಲ ಭಟ್ಟ ಅವರು ಅಯೋಧ್ಯೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

    ಮಾರ್ಚ್ ಮೊದಲವಾರ ಪೂರ್ಣ ಪ್ರಮಾಣದಲ್ಲಿ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಕೇಂದ್ರ ಸರ್ಕಾರ ನೇಮಿಸಿರುವ ಶ್ರೀರಾಮ ಮಂದಿರ ತೀರ್ಥ ಟ್ರಸ್ಟ್ ನಿರ್ಮಾಣ ಕಾಮಗಾರಿಯನ್ನು ಖಾಸಗಿ ಕಂಪನಿಗೆ ನೀಡಿದ್ದು, ಜಾಗ ಸಮತಟ್ಟು ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಮಂದಿರದ ವಿನ್ಯಾಸ ಸಹ ಸಿದ್ಧಗೊಂಡಿದೆ.

    ಪಿಯುಸಿ ಓದುತ್ತಿರುವಾಗಲೇ ಆರ್​ಎಸ್​ಎಸ್ ಶಾಖೆ ನಡೆಸುತ್ತಿದ್ದ ಗೋಪಾಲ ಅವರು, ಬೆಳಗಾವಿಯ ಆರ್​ಎಲ್​ಎಸ್ ಕಾಲೇಜ್​ನಲ್ಲಿ ಪದವಿ ಪೂರೈಸಿದ್ದಾರೆ. ಎಂಎಸ್​ಸಿಯಲ್ಲಿ ಬಂಗಾರದ ಪದಕ ಪಡೆದು ಉತ್ತೀರ್ಣರಾದ ಅವರಿಗೆ ಅಮೆರಿಕದ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಆಫರ್ ಬಂದಿತ್ತು. ಆದರೆ, ಅಲ್ಲಿಗೆ ತೆರಳದೆ ಸಂಘದ ವಿವಿಧ ಸ್ತರದ ಜವಾಬ್ದಾರಿ ನಿಭಾಯಿಸಿ ಕಳೆದ 37 ವರ್ಷದಿಂದ ಸಂಘ ಮತ್ತು ವಿಶ್ವ ಹಿಂದು ಪರಿಷತ್​ನಲ್ಲಿ ಪೂರ್ಣಾವಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    1984ರಲ್ಲಿ ಮೈಸೂರು ತಾಲೂಕು ಪ್ರಚಾರಕರಾಗಿ ಸೇವೆ ಆರಂಭಿಸಿ ನಂತರ ಬೆಳಗಾವಿ ಜಿಲ್ಲಾ ಪ್ರಚಾರಕರಾಗಿ ಕೆಲಸ ಮಾಡಿದ್ದಾರೆ. ಕಲಬುರಗಿ ವಿಭಾಗ ಪ್ರಚಾರಕರಾಗಿ ಉತ್ತರ ಕರ್ನಾಟಕ ಪ್ರಾಂತ (17ಜಿಲ್ಲೆ) ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ಹುಬ್ಬಳ್ಳಿಯಲ್ಲಿ 20 ಸಾವಿರ ಸ್ವಯಂ ಸೇವಕರನ್ನು ಸೇರಿಸಿ ಹಿಂದು ಶಕ್ತಿ ಸಂಗಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಲ್ಲಿ ಇವರು ಒಬ್ಬ ಸಂಘಟಕರಾಗಿದ್ದರು ಎನ್ನುವುದು ವಿಶೇಷ. 2017ರಲ್ಲಿ ಉಡುಪಿಯಲ್ಲಿ 2,500 ಸಂತರ ಸಮಾವೇಶ, ತುಮಕೂರಿನ ಸಿದ್ಧಗಂಗಾ ಮಠದಲ್ಲಿ 500 ಮಠಾಧೀಶರ ಚಿಂತನ ಸಭೆಗಳನ್ನು ಯಶಸ್ವಿಯಾಗಿ ಸಂಘಟಿಸಿದ ಹಿರಿಮೆ ಗೋಪಾಲ ಭಟ್ ಅವರದ್ದು.

    5 ವರ್ಷದಿಂದ ವಿಶ್ವ ಹಿಂದು ಪರಿಷತ್​ನ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯದ ಸಂಘಟನಾ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು, ಇತ್ತೀಚೆಗೆ ಅವರನ್ನು ಗುಜರಾತ್, ರಾಜಸ್ಥಾನ ರಾಜ್ಯಗಳ ಒಟ್ಟು 6 ಪ್ರಾಂತಗಳ ಸಂಘಟನಾ ಮಂತ್ರಿಯಾಗಿ ನೇಮಕ ಮಾಡಲಾಗಿದೆ. ಗುಜರಾತ್ ರಾಜ್ಯ ಒಂದರಲ್ಲಿಯೇ ರಾಮ ಮಂದಿರ ನಿರ್ವಣಕ್ಕೆ 394 ಕೋಟಿ ರೂ. ನಿಧಿ ಸಂಗ್ರಹಿಸುವ ಮೂಲಕ ಗೋಪಾಲ ಭಟ್ಟ ಅವರು ಎಲ್ಲರ ಗಮನ ಸೆಳೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts