More

    ಅನ್ನಭಾಗ್ಯ ಹಣ ಫಲಾನುಭವಿಗೆ ನೇರ ವರ್ಗ

    ಯಾದಗಿರಿ: ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹಣ ವರ್ಗಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್.ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಒಟ್ಟು ಎಎವೈ, ಬಿಪಿಎಲ್ ಪಡಿತರ ಚೀಟಿಗಳ ಸಂಖ್ಯೆ ೨,೬೯,೭೯೩ ಇದ್ದು, ೯,೯೯,೬೪೫ ಜನ ಪಡಿತರ ಚೀಟಿ ಸದಸ್ಯರಿದ್ದಾರೆ. ಬ್ಯಾಂಕ್ ಖಾತೆ ಜೋಡಣೆಯಾಗಿರುವ ಕುಟುಂಬದ ಸದಸ್ಯರ ಸಂಖ್ಯೆ ೭,೬೦,೫೭೮ ಇದ್ದು, ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ನೇರ ನಗದು ಹಣ ವರ್ಗಾವಣೆಗಾಗಿ ಜಿಲ್ಲೆಗೆ ೧೬.೪೬ ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಒಟ್ಟು ೨,೬೯,೭೯೩ ಚಾಲ್ತಿಯಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳಿವೆ ಎಂದು ತಿಳಿಸಿದ್ದಾರೆ.

    ಅವುಗಳಲ್ಲಿ ೧,೭೪,೦೯೬ ಪಡಿತರ ಚೀಟಿಗಳು ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿ ಸಕ್ರೀಯವಾಗಿರುತ್ತವೆ. ಪ್ರತಿ Àಲಾನುಭವಿ ಖಾತೆಗೆ ೧೭೦ ರೂ. ರಂತೆ ನೇರ ನಗದು ವರ್ಗಾವಣೆ ಮೂಲಕ ಹಣ ಸಂದಾಯ ಮಾಡಲಾಗಿದೆ. ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳುಗಳಲ್ಲಿ ಪಡಿತರ ಆಹಾರ ಧಾನ್ಯವನ್ನು ಪಡೆದುಕೊಂಡಿರುವ ೧,೭೪,೦೯೬ ಪಡಿತರ ಚೀಟಿದಾರರು ನಗದು ವರ್ಗಾವಣೆ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
    ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬವು ಈಗಾಗಲೇ ಪ್ರತಿ ತಿಂಗಳು ೩೫ ಕೆಜಿ ಆಹಾರ ಧಾನ್ಯವನ್ನು ಪಡೆಯುತ್ತಿರುವ ಕಾರಣ ಅವರಿಗೆ ನಗದು ವರ್ಗಾವಣೆ ಸೌಲಭ್ಯ ನೀಡಲಾಗುವುದಿಲ್ಲ. ಆದರೆ ಅಂತ್ಯೋದಯ ಚೀಟಿಯ ಕುಟುಂಬದಲ್ಲಿ ನಾಲ್ಕು ಸದಸ್ಯರಿದ್ದರೆ ೧೭೦ ರೂ. ಪಡೆಯಬಹುದಾಗಿದೆ. ಬ್ಯಾಂಕ್ ಖಾತೆ ಹೊಂದಿರದ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಗೊಳ್ಳದೇ ಇರುವ ಪಡಿತರ ಚೀಡಿದಾರರ ವಿವರಗಳನ್ನು ಈಗಾಗಲೇ ಆಯಾ ಸಂಬAಧಪಟ್ಟ ನ್ಯಾಯಬೆಲೆ ಅಂಗಡಿ ಹಾಗೂ ತಹಸಿಲ್ ಕಚೇರಿಯಲ್ಲಿ ಲಭ್ಯವಿದ್ದು ಪರಿಶೀಲಿಸಿಕೊಳ್ಳಬಹುದು.

    ಅಲ್ಲದೆ, ಜು.೨೦ರೊಳಗಾಗಿ ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ನೀಡಿದ ಪಡಿತರ ಸಕ್ರಿಯಗೊಳಿಸಿ ಮಾಹಿತಿ ನೀಡಿದವರು ಮಾತ್ರ ನಂತರ ನಗದು ವರ್ಗಾವಣೆ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಕೂಡಲೇ ರಾಷ್ಟಿçÃಕೃತ ಬ್ಯಾಂಕ್‌ನಲ್ಲಿ ಅಥವಾ ಅಂಚೆ ಕಚೆÉÃರಿಯಲ್ಲಿ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ತೆರೆದು ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts