More

    ಅಧ್ಯಕ್ಷರಾಗಿ ಎ.ಸಿ.ರವಿಕುಮಾರ್ ಆಯ್ಕೆ

    ಮದ್ದೂರು: ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎ.ಸಿ.ರವಿಕುಮಾರ್ ಆಯ್ಕೆಗೊಂಡರು.
    ಅಧ್ಯಕ್ಷ ಲಿಂಗರಾಜು ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಎ.ಸಿ.ರವಿಕುಮಾರ್ ಹಾಗೂ ಶ್ರೀನಿವಾಸ್ ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಎ.ಸಿ.ರವಿಕುಮಾರ್ 13 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಶ್ರೀನಿವಾಸ್ ಅವರು 6 ಮತಗಳನ್ನು ಪಡೆದು ಪರಾಭವಗೊಂಡರು.
    ಚುನಾವಣಾಧಿಕಾರಿಯಾಗಿ ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘದ ದೇವರಾಜು, ನಾಗರಾಜು, ಗೋಪಾಲ್ ಕಾರ್ಯನಿರ್ವಹಿಸಿದರು. ಸಂಘದ ಪದಾಧಿಕಾರಿಗಳಾದ ತಮ್ಮೇಗೌಡ, ಶ್ರೀನಿವಾಸ್, ಮುಖಂಡರಾದ ಸಿಪಾಯಿ ಶ್ರೀನಿವಾಸ್, ನರೇಂದ್ರ, ಗೋವಿಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts