More

    ಅಡಕೆಗೆ ಮಂಗನ ಜತೆ ಕ್ಯಾಸ್ವಾಳ ಕಾಟ!

    ತಾಳಗುಪ್ಪ: ತೋಟಗಾರಿಕಾ ಬೆಳೆಯಾದ ಅಡಕೆ ಇತ್ತೀಚಿನ ವರ್ಷಗಳಲ್ಲಿ ಬೆಲೆಯ ಕಾರಣದಿಂದ ಲಾಭದಾಯಕವಾಗಿದೆ. ಆದರೆ ಬೆಲೆ ಉತ್ತಮವಾಗಿದ್ದರೂ ಬೆಳೆ ಉಳಿಸಿಕೊಳ್ಳಲಾಗದೆ ರೈತರು ಹೈರಾಣಾಗುತ್ತಿದ್ದಾರೆ. ಚಿಗುರು ಅಡಕೆಯನ್ನು ಬಿಳಿ ಮಂಗಗಳು ಚೀಪಿ ಎಸೆಯುವುದು ಒಂದು ಕಾಟವಾದರೆ ಅಡಕೆ ಕೊಳೆರೋಗ ಮತ್ತೊಂದು ಕಾಟ. ಇತ್ತೀಚೆಗೆ ವ್ಯಾಪಕವಾಗಿ ಹರಡುತ್ತಿರುವ ಎಲೆಚುಕ್ಕೆ ರೋಗ ಮರಗಳನ್ನೇ ಬಲಿ ತೆಗೆದುಕೊಳ್ಳುತ್ತಿದೆ. ಇವೆಲ್ಲದರ ಜತೆಗೆ ಈ ವರ್ಷದಿಂದ ಬೆಳೆದ ಹಸಿ ಅಡಕೆಗೆ ಕ್ಯಾಸ್ವಾಳ (ಕೆಂದಳಿಲು) ಎಂಬ ಜೀವಿ ವ್ಯಾಪಕ ಹಾನಿ ಮಾಡುತ್ತಿದೆ.
    ತಾಳಗುಪ್ಪದ ಸಮೀಪ ಹಿರೇಮನೆಯ ಮಧುಕರ ಮರಿ ಅವರ ತೋಟದಲ್ಲಿ ಎರಡು ಕ್ವಿಂಟಾಲ್ ಗೂ ಹೆಚ್ಚು ಅಡಕೆಯನ್ನು ಕಚ್ಚಿ ಕ್ಯಾಸ್ವಾಳ ಎಸೆದಿದೆ. ಈ ಅಡಕೆಯಲ್ಲಿರುವ ಸಿಹಿ ಅಂಶವನ್ನು ಗುರುತಿಸಿ ಕ್ಯಾಸ್ವಾಳ ಅಡಕೆಗೆ ಲಗ್ಗೆಯಿಟ್ಟಿದೆ. ಒಂದು ಕ್ಯಾಸ್ವಾಳ ಕನಿಷ್ಠ ಐದು ಅಡಕೆ ಗೊನೆಗಳನ್ನು ಪ್ರತಿದಿನ ನಾಶ ಮಾಡಬಲ್ಲದು. ಇದನ್ನು ಕಾಯುವುದೂ ಕಷ್ಟಕರ, ಮಂಗಗಳಂತೆ ಇವು ಗುಂಪಾಗಿ ಬರುವುದಿಲ್ಲ, ಒಂಟಿಯಾಗಿ ಸುತ್ತುವ ಇವು ಮರದಲ್ಲಿ ಅಡಗಿ ಕುಳಿತಿರುವುದು ಪತ್ತೆ ಮಾಡುವುದು ತುಂಬ ಕಷ್ಟ ಎನ್ನುತ್ತಾರೆ ರೈತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts