More

    ಅಂಬೇಡ್ಕರ್‌ರವರಿಗೆ ಅಪಮಾನ ಅಗೌರವ ತೋರುವ ಶಕ್ತಿಗಳಿಗೆ ದೇವರು ಶಿಕ್ಷೆ ನೀಡುವಂತಾಗಲಿ/ ಕೊತ್ತೂರು ಮಂಜುನಾಥ್

    ವಿಜಯವಾಣಿ ಸುದ್ದಿಜಾಲ ಕೋಲಾರ
    ಸಂವಿಧಾನ ಕೇವಲ ಒಂದು ಜಾತಿಗೆ ಸೀಮಿತವಲ್ಲ ಅದು ದೇಶಕ್ಕೆ ಸೀಮಿತವಾಗಿದೆ. ಅನ್ಯರಾಷ್ಟ್ರದ ಜನರು ನಮ್ಮ ದೇಶದ ಸಂವಿಧಾನದ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಹೊಂದಿದರೆ ನಾವು ಮಾತ್ರ ಪ್ರತಿ ವಿಷಯದಲ್ಲೂ ವಿರೋಧ ಮಾಡಿಕೊಂಡು ಅಭಿವೃದ್ಧಿ ಕುಂಠಿತವಾಗುವAತೆ ಮಾಡುತ್ತಿದೆವೆ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ತಿಳಿಸಿದರು.

    ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಬುಧವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೩ ನೇ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿ ಅಂಬೇಡ್ಕರ್ ಇಡೀ ವಿಶ್ವದಲ್ಲೇ ಮರೆಯಲಾಗದ ಮಾನವ ಸ್ವರೂಪದ ಮಹಾನ್ ಚೇತನವಾಗಿದ್ದು. ಸಂವಿಧಾನದ ಮೂಲಕ ಪ್ರತಿಯೊಬ್ಬರು ರಕ್ಷಣೆ ಪಡೆಯಲು ಅಂಬೇಡ್ಕರ್ ಕಾರಣವಾಗಿದ್ದಾರೆ. ಅವರ ಜೀವನ, ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕಾಗಿದೆ. ದೇಶದಲ್ಲಿ ಬಡವ, ಶ್ರೀಮಂತ ಎನ್ನದೆ ಎಲ್ಲರಿಗೂ ಒಂದೇ ಎನ್ನುವ ರೀತಿಯಲ್ಲಿ ಬದುಕುವ ಅವಕಾಶವನ್ನು ಸಂವಿಧಾನದಿAದ ನೀಡಿದ್ದಾರೆ ಎಂದರು.

    ಅAಬೇಡ್ಕರ್ ಅವರು ತಮ್ಮ ಕುಟುಂಬವನ್ನು ತ್ಯಾಗ ಮಾಡಿ ದೇಶದ ಬಡಜನರ ಬದುಕಿಗೆ ಆಸರೆಯಾಗಿದ್ದಾರೆ. ಅಂತಹ ಮಹಾನ್ ಚೇತನಕ್ಕೆ ಇವತ್ತು ಅಪಮಾನ ಅಗೌರವ ತೋರುವ ಶಕ್ತಿಗಳಿಗೆ ತನ್ನಷ್ಟಕ್ಕೆ ತಾನೇ ಶಿಕ್ಷೆಯನ್ನು ದೇವರು ನೀಡುವಂತಾಗಲಿ. ಪ್ರಾಚೀನ ಕಾಲದಿಂದ ದಲಿತರ ಮೇಲೆ ಶೋಷಣೆ ನಡೆಯುತ್ತಲೇ ಬಂದಿದೆ. ಅದು ಇಂದಿಗೂ ನಿಂತಿಲ್ಲ. ಸಂವಿಧಾನ ಇದ್ದರೂ ಹೆಸರಿಗಷ್ಟೆ ಎಲ್ಲರೂ ಒಂದೇ ಎನ್ನುವ ನೀತಿ ಇದೆ. ಆದರೆ, ನಿಜವಾಗಲೂ ಜಾತೀಯತೆ ಅತಿಯಾಗಿದೆ ಇದನ್ನು ಹೊಗಲಾಡಿಸಿ ನೆಮ್ಮದಿ ಬದುಕು ಕಾಣಬೇಕಾಗಿದೆ ಎಂದರು.

    ಎAಎಲ್ಸಿ ನಸೀರ್ ಅಹಮದ್ ಮಾತನಾಡಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನದ ರಕ್ಷಣೆ ಮಾಡಿದರೆ ಬಿಜೆಪಿ ಸಂವಿಧಾನ ಬದಲಾವಣೆಗೆ ಮುಂದಾಗಿದೆ ದೇಶದಲ್ಲಿ ಯಾವುದೇ ಚುನಾವಣೆ ಬಂದರೂ ಅಂಬೇಡ್ಕರ್ ಅವರ ಹೆಸರು ಹೇಳದೇ ಇರುವ ಪಕ್ಷಗಳು ಇಲ್ಲ. ದಲಿತರ ಬಗ್ಗೆ ಗೌರವದಿಂದ ಕಾಣುವ ಕಾಂಗ್ರೆಸ್ ಪಕ್ಷದಿಂದ ಮುಂದೆ ಇಂಡಿಯಾ ಒಕ್ಕೂಟದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿಯಾಗಿ ಮಾಡುವ ಅವಕಾಶಗಳು ಇದ್ದು ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಸಾಧ್ಯವಾಗುತ್ತದೆ ಎಂದರು.

    ಎAಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಅಂಬೇಡ್ಕರ್ ಜಯಂತಿ ಕೇವಲ ಚುನಾವಣೆ ಬಂದಾಗ ಮಾತ್ರವೇ ಸೀಮಿತಗೊಳಿಸದೇ ವರ್ಷದ ೩೬೫ ದಿನವು ನೆನೆಯುವಂತಾಗಬೇಕು. ಜಯಂತಿಗೆ ಜಾತಿಯ ಬಣ್ಣ ಕಟ್ಟಬಾರದು. ಸಮಾಜದಲ್ಲಿ ಮೀಸಲಾತಿ ದಲಿತರಿಗೆ ಅಷ್ಟೇ ಸೀಮಿತವಲ್ಲ. ಸಮಾಜದಲ್ಲಿನ ಎಲ್ಲಾ ಬಡವರಿಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ದಲಿತರು ಮತ್ತು ಮುಸ್ಲಿಮರು ಒಗ್ಗಟ್ಟಿನಿಂದ ಹೋಗಬೇಕು. ಆಗಮಾತ್ರವೇ ಸಮಸ್ಯೆಗೆ ಶೀಘ್ರದಲ್ಲಿ ಪರಿಹರಿಸಬಹುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಗ್ರಾಪಂ ಮಾಜಿ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ವಕ್ಕಲೇರಿ ರಾಜಪ್ಪ, ಲೋಕೇಶ್, ದಸಂಸ ರಾಜ್ಯ ಸಂಚಾಲಕ ಮೋಹನ್ ರಾಜ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಮುಖಂಡರಾದ ಮಲೇಷಿಯಾ ರಾಜಕುಮಾರ್, ವೈ ಶಿವಕುಮಾರ್, ಛತ್ರಕೋಡಿಹಳ್ಳಿ ಮಂಜುನಾಥ್, ಇನಾಯಿತ್ ಪಾಷ, ಪೀಸ್ ಮಂಜು, ನಾಗೇಂದ್ರ, ಖಯ್ತೂಂ, ಪ್ರವೀಣ್ ಮುಂತಾದವರು ಇದ್ದರು

    ಚಿತ್ರ ೨೨ ಕೆ.ಎಲ್.ಆರ್. ೦೧ ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಬುಧವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೩ ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೊತ್ತೂರು ಜಿ ಮಂಜುನಾಥ್, ಎಂಎಲ್ಸಿ ನಸೀರ್ ಅಹಮದ್, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮುಂತಾದವರಿದ್ದರು.

    ಅಂಬೇಡ್ಕರ್‌ರವರಿಗೆ ಅಪಮಾನ ಅಗೌರವ ತೋರುವ ಶಕ್ತಿಗಳಿಗೆ ದೇವರು ಶಿಕ್ಷೆ ನೀಡುವಂತಾಗಲಿ/ ಕೊತ್ತೂರು ಮಂಜುನಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts