More

    ಅಂತರ್ ಜಿಲ್ಲಾ ಕಳ್ಳರು ಅಂದರ್

    ಯಲ್ಲಾಪುರ: ತಾಲೂಕಿನ ಗುಳ್ಳಾಪುರ ಹಾಗೂ ಮಂಚಿಕೇರಿಗಳಲ್ಲಿ ದೇವಸ್ಥಾನ ಹುಂಡಿ ಹಾಗೂ ಪೂಜಾ ಸಾಮಗ್ರಿಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಯಲ್ಲಾಪುರ ಪೊಲೀಸರು ಹಾವೇರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹಾವೇರಿಯ ರಟ್ಟಿಹಳ್ಳಿಯ ಕೆಂಚೂರಿನ ಲಿಂಗದೇವರಕೊಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕ ವಸಂತಕುಮಾರ ಶಿವಪ್ಪ ತಂಬಾಕದ ಹಾಗೂ ರಾಣೆಬೆನ್ನೂರಿನ ಸಲೀಂ ಜಮಾಲಸಾಬ್ ಕಮ್ಮಾರ ಬಂಧಿತರು. ಇವರು ನವೆಂಬರ್ 18ರಂದು ಮಂಚಿಕೇರಿಯ ಮಹಾಗಜಲಕ್ಷ್ಮೀ ದೇವಸ್ಥಾನ ಹಾಗೂ ಗುಳ್ಳಾಪುರದ ಶಿವ ವ್ಯಾಘ್ರೕಶ್ವರ ದೇವಾಲಯದ ಬಾಗಿಲು ಮುರಿದು ಪೂಜಾ ಸಾಮಗ್ರಿಗಳನ್ನು ಕಳವು ಮಾಡಿದ್ದರು.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 18 ದೇವಸ್ಥಾನಗಳಲ್ಲಿ ಕಳವು: ವಿಚಾರಣೆ ವೇಳೆ ಆರೋಪಿತರು ಜಿಲ್ಲೆಯ ಯಲ್ಲಾಪುರ, ಅಂಕೋಲ, ಶಿರಸಿ, ಬನವಾಸಿ, ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ, ಹೊಸನಗರ, ಹಾವೇರಿ ಜಿಲ್ಲೆಯ ಹಂಸಭಾವಿ, ಹಿರೆಕೇರೂರು ಸೇರಿದಂತೆ ಮೂರು ಜಿಲ್ಲೆಗಳ 18 ದೇವಸ್ಥಾನಗಳಲ್ಲಿ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ಒಂದು ಕಾರು, ಒಂದು ಬೈಕ್, 2.29 ಲಕ್ಷ ರೂ. ನಗದು, 9 ಗ್ರಾಂ ತೂಕದ ಬಂಗಾರದ ಆಭರಣ, ಮೂರೂವರೆ ಕೆ.ಜಿ. ಬೆಳ್ಳಿ ಆಭರಣ, ಹಿತ್ತಾಳೆಯ 140 ಘಂಟೆಗಳು, 22 ತೂಗುದೀಪಗಳು, 27 ದೀಪದ ಶಮೆಗಳು, 7 ತಾಮ್ರದ ಕೊಡಗಳು, ಹಿತ್ತಾಳೆ ಹಾಗೂ ತಾಮ್ರದ 35 ಪೂಜಾ ಸಾಮಗ್ರಿಗಳು, 1 ಡಿವಿಆರ್ ಸೇರಿಂದತೆ 19.20 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಇವರು 3-4 ವರ್ಷಗಳಿಂದ ವಿವಿಧೆಡೆ ಕಳವಿನಲ್ಲಿ ಭಾಗಿಯಾಗಿದ್ದು, ಎಲ್ಲೂ ಸಿಕ್ಕಿಹಾಕಿಕೊಂಡಿರಲಿಲ್ಲ. ವೈಭವದ ಶೋಕೀ ಜೀವನಕ್ಕಾಗಿ ಉತ್ತರಕನ್ನಡ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ದೇವಸ್ಥಾನಗಳ ಕಳವು ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ಎಸ್.ಪಿ. ವಿಷ್ಣುವರ್ಧನ, ಹೆಚ್ಚುವರಿ ಎಸ್ಪಿ ಸಿ.ಟಿ. ಜಯಕುಮಾರ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವಿ ನಾಯ್ಕ, ಸಿಪಿಐ ಸುರೇಶ ಯಳ್ಳೂರ, ಪಿಎಸ್​ಐಗಳಾದ ಮಂಜುನಾಥ ಗೌಡರ, ಅಮೀನ್ ಸಾಬ್ ಅತ್ತಾರ, ಶ್ಯಾಮ ಪಾವಸ್ಕರ್, ಪೊ›ಬೆಷನರಿ ಪಿಎಸ್​ಐ ಉದಯ, ದೀಪಕ ನಾಯ್ಕ, ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ಪರಶುರಾಮ ಕಾಳೆ, ಪ್ರವೀಣ ಪೂಜಾರ, ಗಿರೀಶ, ನಂದೀಶ, ಶೋಭಾ ನಾಯ್ಕ, ಸಿಡಿಆರ್ ಸೆಲ್ ನ ಉದಯ, ರಮೇಶ, ಹಾವೇರಿಯ ಅಪರಾಧ ವಿಭಾಗ ಮನೋಹರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts