More

    ಯಾರಾದರೂ ತಂಡಕ್ಕೆ ಪ್ರಾಯೋಜಕತ್ವ ನೀಡಿ ಎಂದು ಅಳಲು ತೋಡಿಕೊಂಡ ಜಿಂಬಾಬ್ವೆ ಆಲ್ರೌಂಡರ್​

    ಹರಾರೆ: ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್​ನ ಶ್ರೇಷ್ಠ ತಂಡಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದ ಜಿಂಬಾಬ್ವೆ ತಂಡ ಇಂದು ಹೀನಾಯ ಸ್ಥಿತಿ ತಲುಪಿದೆ. ಸ್ಥಳೀಯ ಕ್ರಿಕೆಟ್​ ಆಡಳಿತ ಹಾಗೂ ದೇಶದ ರಾಜತಾಂತ್ರಿಕ ಬಿಕ್ಕಟ್ಟೇ ಜಿಂಬಾಬ್ವೆ ತಂಡದ ಇಂದಿನ ಹೀನಾಯ ಸ್ಥಿತಿಗೆ ಕಾರಣ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಂಬಾಬ್ವೆ ತಂಡ ಸಕ್ರಿಯವಾಗಿದ್ದರೂ ಸೂಕ್ತ ಪ್ರಾಯೋಜಕತ್ವ ಕೊರತೆಯಿಂದ ತತ್ತರಿಸಿದೆ. ಎಷ್ಟೊ ವರ್ಷಗಳಿಂದಲೂ ಪ್ರಾಯೋಜಕರಿಲ್ಲದೇ ಜಿಂಬಾಬ್ವೆ ಕ್ರಿಕೆಟ್​ ಮಂಡಳಿಯೇ ಸ್ವತಃ ಖರ್ಚಿನಿಂದ ತಂಡವನ್ನು ನಿಭಾಯಿಸುತ್ತಿದೆ. ತಂಡದ ಇಂಥ ದುಸ್ಥಿತಿಯನ್ನು ಕಂಡು ಕಣ್ಣೀರು ಹಾಕಿರುವ ಆಲ್ರೌಂಡರ್​ ರ್ಯಾನ್​ ಬರ್ಲ್​​, ಆಟಗಾರರು ಉತ್ತಮ ಶೂಗೂ ಪರಿತಪಿಸುವಂತಾಗಿದೆ ಎಂದಿದ್ದಾರೆ. ಪ್ರತಿ ಸರಣಿಗೆ ಬಳಿಕ ಹಳೇ ಶೂಗಳನ್ನೇ ಅಂಟಿಸಿಕೊಂಡು ಉಪಯೋಗಿಸಲಾಗುತ್ತಿದೆ ಎಂದಿದ್ದಾರೆ.

    ಇದನ್ನೂ ಓದಿ: ನೆಚ್ಚಿನ ತಂಡ ಗೆದ್ದ ಸಂಭ್ರಮಾಚರಣೆ ವೇಳೆ ಪ್ರಾಣತೆತ್ತ ಫುಟ್​ಬಾಲ್​ ಅಭಿಮಾನಿ, 

    ಟೆಸ್ಟ್​ ಮಾನ್ಯತೆ ಹೊಂದಿದ್ದ ಜಿಂಬಾಬ್ವೆ ತಂಡದೊಂದಿಗೆ 2010ರಲ್ಲಿ ರೀಬಾಕ್​ ಕಂಪನಿ 2013ರವರೆಗೂ ಒಪ್ಪಂದ ಮಾಡಿಕೊಂಡಿತು. ಆದರೆ, ಕಾಲಕ್ರಮೇಣ ತಂಡದಲ್ಲಿ ಉಂಟಾದ ಗೊಂದಲದಿಂದಾಗಿ ಒಪ್ಪಂದ ಮುಕ್ತಾಯಗೊಂಡ ಬಳಿಕ ರೀಬಾಕ್​ ಕಂಪನಿಯೂ ಕಿಟ್​ ಪ್ರಾಯೋಜಕತ್ವದಿಂದ ಹಿಂದೆ ಸರಿಯಿತು. ತಂಡದ ಸಂಕಷ್ಟವನ್ನು ನೋಡಿ ಯಾರಾದರೂ ಪ್ರಾಯೋಜಕತ್ವ ನೀಡುವಂತೆ ಟ್ವಿಟರ್​ನಲ್ಲಿ ಆಲ್ರೌಂಡರ್​ ರ್ಯಾನ್​ ಬರ್ಲ್​ ಅಳಲು ತೋಡಿಕೊಂಡಿದ್ದಾರೆ.

    ಇದನ್ನೂ ಓದಿ: ಶ್ರೀಲಂಕಾ – ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನವೇ ಕಾಡಿದ ಕೋವಿಡ್​-19

    1990, 2000 ಅವಧಿಯಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ತಂಡಗಳಲ್ಲಿ ಒಂದು ಎನಿಸಿತ್ತು. ಆ್ಯಂಡಿ ಪ್ಲವರ್​, ಗ್ರ್ಯಾಂಟ್ ಫ್ಲವರ್​, ಹೀತ್​ ಸ್ಟ್ರೀಕ್​, ಹೆನ್ರಿ ಒಲಂಗಾ, ಅಲಿಸ್ಟರ್​ ಕ್ಯಾಂಬ್​ಬೆಲ್​, ಬಳಿಕ ತತೆಂಡ ತೈಬುರಂಥ ಪ್ರತಿಭಾನ್ವಿತ ಆಟಗಾರರಿದ್ದರು. 2003ರ ಬಳಿಕ ಜಿಂಬಾಬ್ವೆ ಸರ್ವಾಧಿಕಾರಿ ರಾರ್ಬಟ್​ ಮುಗಾಬೆ ಮಾಡಿದ ಕೆಲವೊಂದು ನಿಯಮಗಳಿಂದಾಗಿ ಹಲವು ಸ್ಟಾರ್​ ಕ್ರಿಕೆಟಿಗರು ಜಿಂಬಾಬ್ವೆಯನ್ನೇ ತೊರೆದರು. ಅಲ್ಲಿಂದ ಜಿಂಬಾಬ್ವೆ ತಂಡದ ಅವನತಿ ಕೂಡ ಆರಂಭಗೊಂಡಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts