More

  ಭಾಷೆ ಅಳಿದರೆ ಸಂಸ್ಕೃತಿಯ ಅವನತಿ

  ಬಾಳೆಹೊನ್ನೂರು: ಅಮ್ಮ ಎಂಬುದು ಮಾತೃಭಾಷೆಯ ಸೊಗಡು. ಭಾಷೆ ಅಳಿದರೆ ಸಂಸ್ಕೃತಿ ಅವನತಿ ಕಾಣುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
  ಸರ್ಕಾರಿ ಸುವರ್ಣ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್.ಆರ್.ಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು.
  ಮಕ್ಕಳು ಭವಿಷ್ಯದ ಪ್ರಜೆಗಳು, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇವೆ ಎಂಬ ಕೀಳರಿಮೆ ಬೇಡ. ಸರ್ಕಾರಿ ಶಾಲೆಯಲ್ಲಿ ಓದಿದವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅನೇಕ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಭಾಷೆಗೆ ಉನ್ನತ ಸ್ಥಾನ ನೀಡಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಲರಾಗಿದ್ದಾರೆ ಎಂದರು.
  ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಮಕ್ಕಳು ದೇವರ ಸ್ವರೂಪ. ಅವರಲ್ಲಿ ನಾಡು ನುಡಿಯ ಬಗ್ಗೆ ಅಭಿಮಾನ ಮೂಡಿಸಬೇಕಿದೆ. ನೆಲ, ಜಲ, ಭಾಷೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕಿದೆ ಎಂದರು.
  ಕಸಾಪ ಪೂರ್ವಾಧ್ಯಕ್ಷ ಕೆ.ಟಿ.ವೆಂಕಟೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತಿಹಾಸವನ್ನು ಅರಿಯದವರು ಇತಿಹಾಸ ಸೃಷ್ಟಿಸಲಾರ ಎಂದರು. ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷಭಟ್ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳನ್ನು ಜಾಗೃತಿಗೊಳಿಸುವ ಸಾಹಿತ್ಯ ಅಗತ್ಯವಿದೆ ಎಂದು ತಿಳಿಸಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಚುಟುಕುಗಳ ವಾಚನ ಮಾಡಿದರು.
  ಮುಖ್ಯಶಿಕ್ಷಕ ಸೋಮಶೇಖರ್, ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ, ಕಸಾಪ ಹೋಬಳಿ ಅಧ್ಯಕ್ಷ ರತ್ನಾಕರ್, ಜೇಸಿ ಪೂರ್ವಾಧ್ಯಕ್ಷ ಎಚ್.ಗೋಪಾಲ್, ತಾಲೂಕು ಕಸಾಪ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ವರ್ತಕ ಲ್ಯಾನ್ಸಿ ಮಚಾಡೋ, ಹಾಸ್ಯ ಕಲಾವಿದ ಕೃಷ್ಣಭಟ್, ಹನುಮಂತಪ್ಪ, ಶೇಖರ್ ಇಟ್ಟಿಗೆ, ಶಿಕ್ಷಕರಾದ ದೀಪಾ, ಮಹೇಶ್, ರತ್ನಾ, ವಾಣಿ, ಸೌಖ್ಯ, ಸುಪ್ರೀತಾ, ಪಾವನ, ಪುಷ್ಪಾ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts