More

    ಸರಿಗಮಪದಲ್ಲಿ ಮಹಾಸಂಚಿಕೆ: ದಶಕದ ಸೂಪರ್ ಹಿಟ್ ಹಾಡುಗಳ ಮೂಲಕ ಮನರಂಜನೆ

    ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದ ಲಾಕ್​ಡೌನ್ ನಂತರದ ಸೀಸನ್ ಪ್ರಾರಂಭವಾಗಿ ನಾಲ್ಕು ವಾರಗಳಾಗಿವೆ. ಈ ನಾಲ್ಕು ವಾರಗಳಲ್ಲಿ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ಸಿಕ್ಕಿದ್ದು, ಈ ಭಾನುವಾರ ಅದು ದುಪ್ಪಟ್ಟಾಗಲಿದೆ.

    ಈ ಭಾನುವಾರ (ಆಗಸ್ಟ್ 30) ಸರಿಗಮಪದ ಮಹಾಸಂಚಿಕೆ ಪ್ರಸಾರವಾಗಲಿದೆ. ಈ ನಾಲ್ಕು ತಾಸುಗಳ ಕಾರ್ಯಕ್ರಮದ ವಿಶೇಷತೆ ಎಂದರೆ, ಕಳೆದ ದಶಕದ ಸೂಪರ್ ಹಿಟ್ ಗೀತೆಗಳು. 2010ರಿಂದ 2020ರವರೆಗೆ ಕನ್ನಡದಲ್ಲಿ ಬಂದ ಸೂಪರ್ ಹಿಟ್ ಗೀತೆಗಳನ್ನು ಸರಿಗಮಪ ಸ್ಪರ್ಧಿಗಳು ಹಾಡಿ ರಂಜಿಸಲಿದ್ದಾರೆ. ಈ ಸಂಚಿಕೆಯಲ್ಲಿ ವಿಭಿನ್ನ ವೇಷಭೂಷಣ, ಹೊಸರೀತಿಯ ಗಾಯನವನ್ನು ಪ್ರೇಕ್ಷಕರು ಸವಿಯಬಹುದು.

    ಇದನ್ನೂ ಓದಿ: ತಂದೆಯನ್ನು ಕೊಂದ ಮಗನ ಬಂಧನ, 2 ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ದ ಆರೋಪಿ

    ರತ್ನಮಂಜರಿ ಮೊಬೈಲ್ ಆರ್ಕೆಸ್ಟ್ರಾ: ಇನ್ನು ಕಾರ್ಯಕ್ರಮದ ಮೂಲಕ ದೊಡ್ಡ ಹೆಸರು ಮಾಡಿರುವ ಅಂಧ ಗಾಯಕಿಯರಾದ ರತ್ನಮ್ಮ ಹಾಗೂ ಮಂಜಮ್ಮ ಅವರಿಗೆ ನೆರವಾಗುವ ಉದ್ದೇಶದಿಂದ ಕಾರ್ಯಕ್ರಮದ ಮಹಾಗುರುಗಳಾದ ಡಾ. ಹಂಸಲೇಖ ಅವರು ‘ರತ್ನಮಂಜರಿ’ ಎಂಬ ಮೊಬೈಲ್ ಆರ್ಕೆಸ್ಟ್ರಾ ಆಯೋಜಿಸಲು ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ ಜೀ ಕನ್ನಡ ವಾಹಿನಿಯು ಆಟೋಮೊಬೈಲ್ ಪ್ರಾಯೋಜಕ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ತೆರೆದ ಜೀಪ್ ಕೊಡಿಸಲು ಪ್ರಯತ್ನಿಸುತ್ತಿದೆ. ಇದರಿಂದ ಅವರು ರಾಜ್ಯಾದ್ಯಂತ ಕಾರ್ಯಕ್ರಮ ನೀಡಬಹುದಾಗಿದೆ.

    ಇದನ್ನೂ ಓದಿ: ಕ್ಲಿನಿಕ್​ ಆಗಿ ಬದಲಾಯ್ತು ಮಸೀದಿ; ಮಹಿಳೆಯರಿಗಾಗಿ, ಮಹಿಳೆಯರಿಂದಲೇ ನಡೆಯಲಿದೆ…

    ಈ ಕುರಿತು ಮಾತನಾಡಿರುವ ಹಂಸಲೇಖ, ‘ರತ್ನಮ್ಮ ಹಾಗೂ ಮಂಜಮ್ಮ ಕನ್ನಡದ ಸೂಪರ್​ಸ್ಟಾರ್ ಗಾಯಕಿಯರು. ಅವರು ಹಿಂದೆ ದೇವಸ್ಥಾನದಲ್ಲಿ ಹಾಡಿ ತಮ್ಮ ಜೀವನೋಪಾಯ ಕಂಡುಕೊಂಡಿದ್ದರು. ಆದರೆ, ಅವರಿಗೆ ಈಗ ಸರಿಗಮಪದಂತಹ ಬೃಹತ್ ವೇದಿಕೆ ದೊರೆತಿದೆ. ಅವರಿಗೆ ನೆರವಾಗುವ ದೃಷ್ಟಿಯಿಂದ ನಾನು ಮೊಬೈಲ್ ಆರ್ಕೆಸ್ಟ್ರಾ ಆಯೋಜಿಸುವ ಉದ್ದೇಶದಲ್ಲಿದ್ದೇನೆ. ಈ ಆರ್ಕೆಸ್ಟ್ರಾವನ್ನು ಕನ್ನಡಿಗರು ತಮ್ಮ ಊರಿನಲ್ಲಿ ದೊಡ್ಡ ಮಟ್ಟದಲ್ಲಿ ಸ್ವಾಗತಿಸುತ್ತಾರೆ ಎಂಬ ನಿರೀಕ್ಷೆ ನನದು’ ಎಂದು ಹೇಳಿದ್ದಾರೆ.

    ಅವಾಕ್ಸ್​ ಖರೀದಿಗೆ 147.81 ಶತಕೋಟಿ ಡಿಫೆನ್ಸ್ ಡೀಲ್?| 200 ಟ್ಯಾಕ್ಟಿಕಲ್​ ಡ್ರೋನ್​ಗಳು ಸೇರಲಿವೆ ಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts