More

    ಬಾಂಗ್ಲಾ ಎದುರು ಭರ್ಜರಿ ಜಯ, ಆಸೀಸ್‌ಗೆ ಹೆಚ್ಚಿದ ಸೆಮೀಸ್ ಆಸೆ

    ದುಬೈ: ಲೆಗ್ ಸ್ಪಿನ್ನರ್ ಆಡಂ ಜಂಪಾ (19ಕ್ಕೆ 5) ಮಾರಕ ದಾಳಿ ಮತ್ತು ನಾಯಕ ಆರನ್ ಫಿಂಚ್ (40 ರನ್, 20 ಎಸೆತ, 2 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ 8 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಆಸೆ ವೃದ್ಧಿಸಿಕೊಂಡಿದೆ. ಈ ಭರ್ಜರಿ ಗೆಲುವಿನಿಂದ ಆಸೀಸ್ ರನ್‌ರೇಟ್ ಸುಧಾರಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಗ್ರೂಪ್-1ರಲ್ಲಿ 2ನೇ ಸ್ಥಾನಕ್ಕೇರಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾ 15 ಓವರ್‌ಗಳಲ್ಲಿ ಕೇವಲ 73 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಆಸೀಸ್ 6.2 ಓವರ್‌ಗಳಲ್ಲೇ 2 ವಿಕೆಟ್‌ಗೆ 78 ರನ್ ಗಳಿಸಿ ಜಯಿಸಿತು. ರನ್‌ರೇಟ್ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಲು ಆಸೀಸ್ 8.1 ಓವರ್‌ಗಿಂತ ಮುನ್ನ ಚೇಸಿಂಗ್ ಮಾಡಬೇಕಾಗಿತ್ತು. ಬಾಂಗ್ಲಾದೇಶ ಸೂಪರ್-12ರ ಎಲ್ಲ 5 ಪಂದ್ಯ ಸೋತು ಟೂರ್ನಿಗೆ ವಿದಾಯ ಹೇಳಿತು.

    ಬಾಂಗ್ಲಾದೇಶ: 15 ಓವರ್‌ಗಳಲ್ಲಿ 73 (ನಯೀಂ 17, ರಹೀಂ 1, ಮಹಮದುಲ್ಲಾ 16, ಶಮಿಮ್ 19, ಜಂಪಾ 19ಕ್ಕೆ 5, ಸ್ಟಾರ್ಕ್ 21ಕ್ಕೆ 2, ಹ್ಯಾಸಲ್‌ವುಡ್ 8ಕ್ಕೆ 2). ಆಸ್ಟ್ರೇಲಿಯಾ: 6.2 ಓವರ್‌ಗಳಲ್ಲಿ 2 ವಿಕೆಟ್‌ಗೆ 78 (ವಾರ್ನರ್ 18, ಫಿಂಚ್ 40, ಮಾರ್ಷ್ 16*, ಇಸ್ಲಾಂ 9ಕ್ಕೆ 1, ಟಸ್ಕಿನ್ ಅಹ್ಮದ್ 36ಕ್ಕೆ 1). ಪಂದ್ಯಶ್ರೇಷ್ಠ: ಆಡಂ ಜಂಪಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts