More

    VIDEO: ಯುವರಾಜ್ ಸಿಂಗ್ ಸಿಕ್ಸ್ ಸಿಕ್ಸರ್ಸ್‌ಗೆ 13 ವರ್ಷ..!

    ಬೆಂಗಳೂರು: ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಚುಟುಕು ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆವೊಂದನ್ನು ನಿರ್ಮಿಸಿ ಇಂದಿಗೆ 13 ವರ್ಷ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು 6 ಎಸೆತಗಳಿಗೆ 6 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು ಯುವರಾಜ್ ಸಿಂಗ್. ವೇಗಿ ಸ್ಟುವರ್ಟ್ ಬ್ರಾಡ್ ಎಸೆದ ಓವರ್‌ನಲ್ಲಿ 6 ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ್ದರು ಯುವರಾಜ್ ಸಿಂಗ್. ಇದರಿಂದ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಚುಟುಕು ಕ್ರಿಕೆಟ್‌ನಲ್ಲಿ ಈಗಲೂ ಅದು ಅತಿವೇಗದ ಅರ್ಧಶತಕ ಎನಿಸಿದೆ. 6 ಎಸೆತಗಳಿಗೆ 6 ಸಿಡಿಸಿರುವ ವಿಡಿಯೋವನ್ನು ಯುವರಾಜ್ ಸಿಂಗ್ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಈ ಮೂಲಕ ತಮ್ಮ ಫೌಂಡೇಷನ್ ಮೂಲಕ ಕ್ಯಾನ್ಸರ್ ವಿರುದ್ಧ ಹೋರಾಡುವಂತೆ ಕರೆ ನೀಡಿದ್ದಾರೆ.

    ಇದನ್ನೂ ಓದಿ: ಡಿವಿಲಿಯರ್ಸ್​ ಸೂಪರ್​ ಮ್ಯಾನ್​ ಕ್ಯಾಚ್​ ಮರುಸೃಷ್ಟಿಸಿ ಸಾಮರ್ಥ್ಯ ಪ್ರದರ್ಶಿಸಿದ ವಿರಾಟ್​!

    ದರ್ಬಾನ್‌ನ ಕಿಂಗ್ಸ್‌ಮೈಂಡ್ ಸ್ಟೇಡಿಯಂನಲ್ಲಿ 2007ರ ಸೆಪ್ಟೆಂಬರ್ 19 ರಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 18 ಓವರ್‌ವರೆಗೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಉತ್ತಮ ಮೊತ್ತದತ್ತ ದಾಪುಗಾಲಿಟ್ಟಿತ್ತು. ಈ ವೇಳೆ ಯುವರಾಜ್ ಸಿಂಗ್ ಹಾಗೂ ಇಂಗ್ಲೆಂಡ್ ಆಲ್ರೌಂಡ್ ಆ್ಯಂಡ್ರ್ಯೂ ಫ್ಲಿಂಟಾಫ್ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಸ್ಟುವರ್ಟ್ ಬ್ರಾಡ್‌ ಎಸೆದ 19ನೇ ಓವರ್‌ನಲ್ಲಿ ಯುವರಾಜ್ ಸಿಂಗ್ 6 ಎಸೆತಗಳನ್ನು ಬೌಂಡರಿಯಿಂದಾಚೆಗೆ ಅಟ್ಟಿದರು. ಇದರ ಫಲವಾಗಿ ಭಾರತ 218ರನ್‌ಗಳಿಸಿತು. ಬಳಿಕ ಇಂಗ್ಲೆಂಡ್‌ ತಂಡವನ್ನು ನಿಯಂತ್ರಿಸಿ 18 ರನ್‌ಗಳಿಂದ ಜಯ ದಾಖಲಿಸಿತು. ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಆಟಗಾರನಾಗಿಯೂ ಹೊರಹೊಮ್ಮಿದರು.

    ಇದನ್ನೂ ಓದಿ: PHOTO | ಟ್ವಿಟರ್‌ನಲ್ಲಿ ‘ವೆಲ್‌ಕಂ ಬ್ಯಾಕ್ ಧೋನಿ’ ಭರ್ಜರಿ ಟ್ರೆಂಡಿಂಗ್‌

    2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ 15 ವಿಕೆಟ್ ಕಬಳಿಸಿ 300 ರನ್ ಸಿಡಿಸಿದ ಯುವರಾಜ್ ಸಿಂಗ್ ಸರಣಿ ಶ್ರೇಷ್ಠರಾಗಿದ್ದರು. 38 ವರ್ಷದ ಯುವರಾಜ್ ಸಿಂಗ್ ಕಳೆದ ವರ್ಷ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಬಳಿಕ ತವರು ಪಂಜಾಬ್ ತಂಡದ ಪರ ಆಡುವ ಸಲುವಾಗಿ ನಿವೃತ್ತಿ ವಾಪಸ್ ಪಡೆಯಲು ನಿರ್ಧರಿಸಿದ್ದರು. ಈ ಕುರಿತು ಯುವರಾಜ್ ಸಿಂಗ್ ಬಿಸಿಸಿಐಗೆ ಮನವಿ ಮಾಡಿದ್ದರೂ ಇದುವರೆಗೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಯುವರಾಜ್ ಸಿಂಗ್ ರಾಷ್ಟ್ರೀಯ ತಂಡದ ಪರ 304 ಏಕದಿನ, 58 ಟಿ20, 40 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts