More

    ಬಿಗ್ ಬಾಷ್ ಲೀಗ್ ನಲ್ಲಿ ಆಡಲು ಯುವರಾಜ್ ಸಿಂಗ್ ಕಾತರ..!

    ಮೆಲ್ಬೋರ್ನ್: ಕಳೆದ ವರ್ಷ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಆಸ್ಟ್ರೇಲಿಯಾದ ಬಿಗ್ ಬಾಷ್ ಲೀಗ್‌ನತ್ತ (ಬಿಬಿಎಲ್) ಗಮನಹರಿಸಿದ್ದಾರೆ. ಯುವರಾಜ್ ಸಿಂಗ್‌ಗೆ ಸೂಕ್ತ ತಂಡ ಹುಡುಕಿಕೊಡಲು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಯತ್ನ ಮುಂದುವರಿಸಿದೆ. ಇದುವರೆಗೂ ಭಾರತದ ಆಟಗಾರರು ಬಿಬಿಎಲ್‌ನಲ್ಲಿ ಕಾಣಿಸಿಕೊಂಡಿಲ್ಲ. ಭಾರತೀಯ ಆಟಗಾರರು ನಿವೃತ್ತಿಗೂ ಮುಂಚೆ ವಿದೇಶಿ ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡುವುದಿಲ್ಲ. 38 ವರ್ಷದ ಯುವರಾಜ್ ಸಿಂಗ್, ಕಳೆದ ವರ್ಷ ವಿದೇಶಿ ಲೀಗ್‌ಗಳಲ್ಲಿ ಆಡುವ ಸಲುವಾಗಿ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ನಿವೃತ್ತಿ ಬಳಿಕ ಕೆನಡ ಟಿ10 ಲೀಗ್‌ನಲ್ಲಿ ಆಡಿದ್ದರು.

    ಇದನ್ನೂ ಓದಿ: VIDEO: ಸಿಕ್ಸರ್ ಸಿಡಿಸುವುದರಲ್ಲಿ ಸೌರವ್ ಗಂಗೂಲಿ ನೆನಪಿಸಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್..?

    ವಿದೇಶಿ ಲೀಗ್‌ಗಳಲ್ಲಿ ಆಡಲು ಆಸಕ್ತಿ ತೋರಿರುವ ಯುವರಾಜ್ ಸಿಂಗ್, ಇದೀಗ ಬಿಬಿಎಲ್‌ನತ್ತ ಚಿತ್ತ ಹರಿಸಿದ್ದಾರೆ. ಸ್ಥಳೀಯ ದಿನ ಪತ್ರಿಕೆ ಪ್ರಕಾರ, ಕ್ರಿಕೆಟ್ ಆಸ್ಟ್ರೇಲಿಯಾವೇ ಭಾರತದ ಮಾಜಿ ಆಲ್ರೌಂಡರ್‌ಗೆ ಸೂಕ್ತ ತಂಡ ಹುಡುಕುತ್ತಿದೆ ಎಂದು ಯುವರಾಜ್ ಸಿಂಗ್ ಮ್ಯಾನೇಜರ್ ಜೇಸನ್ ವಾರ್ನೆ ಹೇಳಿಕೊಂಡಿದ್ದಾರೆ. ತಂಡದ ಕುರಿತಾಗಿ ಸಿಎ ಜತೆ ಮಾತುಕತೆ ನಡೆಸುತ್ತಿರುವುದಾಗಿ ವಾರ್ನೆ ಹೇಳಿದ್ದಾರೆ. ಯುವರಾಜ್ ಸಿಂಗ್ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

    ಇದನ್ನೂ ಓದಿ: ಉಬೇರ್ ಕಪ್‌ನಲ್ಲಿ ಆಡಲು ಒಪ್ಪಿದ ಪಿವಿ ಸಿಂಧು..!

    ಎಡಗೈ ಆಲ್ರೌಂಡರ್ ಯುವರಾಜ್ ಸಿಂಗ್, 304 ಏಕದಿನ ಪಂದ್ಯಗಳಿಂದ 8701 ರನ್ ಪೇರಿಸಿ, 111 ವಿಕೆಟ್ ಕಬಳಿಸಿದ್ದರು. 40 ಟೆಸ್ಟ್ ಹಾಗೂ 58 ಟಿ20 ಪಂದ್ಯಗಳನ್ನಾಡಿದ್ದಾರೆ. ಯುವರಾಜ್ ಸಿಂಗ್ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಸನ್‌ರೈಸರ್ಸ್‌ ಹೈದರಾಬಾದ್, ಮುಂಬೈ ಇಂಡಿಯನ್ಸ್, ಆರ್‌ಸಿಬಿ, ಪುಣೆ ವಾರಿಯರ್ಸ್‌ ತಂಡ ಪ್ರತಿನಿಧಿಸಿದ್ದರು.

    ಈ ಬಾರಿ ಐಪಿಎಲ್ V/s ಬಿಗ್ ಬಾಸ್ ಮುಖಾಮುಖಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts