More

    ಉಬೇರ್ ಕಪ್‌ನಲ್ಲಿ ಆಡಲು ಒಪ್ಪಿದ ಪಿವಿ ಸಿಂಧು..!

    ಹೈದರಾಬಾದ್: ಮನೆಯಲ್ಲಿ ಪೂಜಾ ಕಾರ್ಯಗಳು ಇರುವುದರಿಂದ ಮುಂದಿನ ತಿಂಗಳು ಡೆನ್ಮಾರ್ಕ್‌ನಲ್ಲಿ ನಡೆಯಲಿರುವ ಉಬೇರ್ ಕಪ್‌ನಿಂದ ಹಿಂದೆ ಹೊರಗುಳಿದಿದ್ದ ವಿಶ್ವ ಚಾಂಪಿಯನ್ ಪಿವಿ ಸಿಂಧು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಹಿಮಂತ್ ಬಿಸ್ವಾ ಶರ್ಮ ಸಿಂಧು ಜತೆ ಸೋಮವಾರ ಮಾತನಾಡಿ, ಮನವೊಲಿಸಲು ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ನಡೆಯಲಿರುವ ಪೂಜಾ ಕಾರ್ಯ ಮುಗಿಸಿಕೊಂಡೆ ಸಿಂಧು ಡೆನ್ಮಾರ್ಕ್‌ಗೆ ಹೊರಡಲಿದ್ದಾರೆ.

    ಇದನ್ನೂ ಓದಿ: VIDEO: ಆಸೀಸ್ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್ ತಂಡದ ಸಂಭ್ರಮ ಹೇಗಿತ್ತು ಗೊತ್ತಾ.?

    ಸೆ.27, 28 ರಂದು ಸಿಂಧು ಮನೆಯಲ್ಲಿ ಪೂಜಾ ಕಾರ್ಯಕ್ರಮವಿದ್ದು, ಸೆ.17ರ ವೇಳೆಗೆ ಭಾರತ ತಂಡ ಅಂತಿಮವಾಗಲಿದೆ. ಸೆ.29 ರಂದು ಸಿಂಧು ಡೆನ್ಮಾರ್ಕ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಇದರಿಂದಾಗಿ ಸಿಂಧು ಉಬೇರ್ ಕಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು. ಆದರೆ, ಈ ಬಾರಿ ಪದಕ ಗೆಲ್ಲಲು ಹೆಚ್ಚಿನ ಅವಕಾಶವಿದ್ದು, ಆಡಬೇಕೆಂದು ಹಿಮಂತ್ ಮನವಿ ಮಾಡಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಸಿಂಧು, ಹಿಮಂತ್ ಸರ್ ಜತೆ ಮಾತನಾಡಿದ್ದೇನೆ. ನಾವು ನಮ್ಮ ಕಾರ್ಯಕ್ರಮವನ್ನು ಸರಿದೂಗಿಸಿಕೊಳ್ಳಲಿದ್ದೇವೆ. ಭಾರತಕ್ಕೆ ಈ ಬಾರಿ ಪ್ರಶಸ್ತಿ ಜಯಿಸಲು ಉತ್ತಮ ಅವಕಾಶವಿದೆ ಎಂದು ಭರವಸೆ ಹೊಂದಿದ್ದಾರೆ. ‘ಎರಡು ದಿನಗಳ ಕಾಲ ಸಿಂಧು ಉಪಸ್ಥಿತಿ ತಂಡಕ್ಕೆ ಅನಿವಾರ್ಯವಾಗಿದೆ. ಟೂರ್ನಿಯಿಂದ ಹಿಂದೆ ಸರಿಯಲು ಸಿಂಧು ನಿರ್ಧರಿಸಿದ್ದಳು. ಆಡಲು ಹಿಮಂತ್ ಸಿಂಧುಗೆ ಮನವಿ ಮಾಡಿದ್ದಾರೆ’ ಎಂದು ಸಿಂಧು ತಂದೆ ಪಿವಿ ರಮಣ ತಿಳಿಸಿದ್ದಾರೆ.

    ಇದನ್ನೂ ಓದಿ: PHOTOS: ತಮಿಳು ನಟ ವಿಷ್ಣು ವಿಶಾಲ್ ಜತೆ ಷಟ್ಲರ್ ಜ್ವಾಲಾ ಗುಟ್ಟಾ ನಿಶ್ಚಿತಾರ್ಥ…!

    ಅಕ್ಟೋಬರ್ 3 ರಿಂದ 11ರವರೆಗೆ ಡೆನ್ಮಾರ್ಕ್‌ನ ಅರಾಹಸ್‌ನಲ್ಲಿ ಥಾಮಸ್ ಹಾಗೂ ಉಬೇರ್ ಕಪ್ ನಡೆಯಲಿದೆ. ಚೈನೀಸ್ ತೈಪೆ, ಥಾಯ್ಲೆಂಡ್, ಆಸ್ಟ್ರೇಲಿಯಾ ತಂಡಗಳು ಟೂರ್ನಿಯಿಂದ ಹಿಂದೆ ಸರಿದಿರುವುದರಿಂದ ಭಾರತಕ್ಕೆ ಪದಕ ಜಯಿಸಲು ಉತ್ತಮ ಅವಕಾಶವಿದೆ. ಚೀನಾ ತಂಡ ಟೂರ್ನಿಯಲ್ಲಿ ಭಾಗವಹಿಸುವ ಕುರಿತು ಇನ್ನು ಸ್ಪಷ್ಟಪಡಿಸಿಲ್ಲ. ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಟೂರ್ನಿಯಲ್ಲಿ 5ನೇ ಶ್ರೇಯಾಂಕ ಹೊಂದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts