More

    ದುಬಾರಿ ಬೆಲೆಯ ಸ್ವಂತ ಮರ್ಸಿಡೀಸ್​ ಕಾರಿಗೆ ಬೆಂಕಿ ಇಟ್ಟ ಬ್ಲಾಗರ್​: ಕಾರಣ ಕೇಳಿದ್ರೆ ಅಚ್ಚರಿ ಖಂಡಿತ!

    ಮಾಸ್ಕೋ: ದುಬಾರಿ ಬೆಲೆಯ ಸ್ವಂತ ಮರ್ಸಿಡೀಸ್​ ಕಾರನ್ನು ಸುಟ್ಟು ಹಾಕುವ ಮೂಲಕ ರಷ್ಯಾದ ಯೂಟ್ಯೂಬರ್​ ಓರ್ವ ಲಕ್ಷಾಂತರ ಮಂದಿಯ ಹುಬ್ಬೇರಿಸಿದ್ದಾರೆ. ಬ್ಲಾಗರ್​ ಮಿಖೈಲ್​ ಲಿಟ್ವಿನ್ ವಿಸ್ತಾರವಾದ ಮೈದಾನದ ನಡುವೆ ತನ್ನ ಕಾರನ್ನು ನಿಲ್ಲಿಸಿ ಬೆಂಕಿ ಹಚ್ಚಿದ ವಿಡಿಯೋ ಇದೀಗ ಭಾರಿ ವೈರಲ್​ ಆಗಿದೆ.

    ಆಗಾಗ ಕಾರಿನಲ್ಲಿ ಸಮಸ್ಯೆಗಳು ಎದರಾಗುತ್ತಿದ್ದರಿಂದ ಅದನ್ನು ಸುಟ್ಟು ಹಾಕಿದ್ದಾರೆಂದು ಮೋಟರ್​ 1 ಡಾಟ್​ ಕಾಮ್​ (Motor1.com) ವರದಿ ಮಾಡಿದೆ. ಮರ್ಸಿಡೀಸ್​ ಎಎಂಜಿ ಜಿಟಿ 63 ಎಸ್​ ಕಾರಿನ ಬೆಲೆ ಬರೋಬ್ಬರಿ 2.4 ಕೋಟಿ ರೂ. ಅದನ್ನು ಖರೀದಿಸಿದಾಗಿನಿಂದ ಒಂದಲ್ಲ ಒಂದು ಸಮಸ್ಯೆ ಕಾರಿನಲ್ಲಿ ಕಾಣಿಸಿಕೊಳ್ಳುತ್ತಿತ್ತಂತೆ. ಸುಮಾರು ಐದು ಬಾರಿ ರಿಪೇರಿ ಮಾಡಿಸಿದ್ದಾರೆ. ಅಲ್ಲದೆ, ಇಂಜಿನ್​ ಸಹ ಬದಲಾಯಿಸಲಾಗಿದೆ. ಆದರೂ ಏನು ಪ್ರಯೋಜನವಾಗಿಲ್ಲ.

    ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸುಟ್ಟು ಕರಕಲಾಗಿದ್ದ ಕಾರಿನ ಡಿಕ್ಕಿ ನೋಡಿದ ಹಾಸನ ಗ್ರಾಮಸ್ಥರಿಗೆ ಕಾದಿತ್ತು ಶಾಕ್​!

    ಇದರಿಂದ ಬೇಸರಗೊಂಡ ಮಿಖೈಲ್​ ಲಿಟ್ವಿನ್ ಪ್ರತಿಭಟನೆಯ ಮಾದರಿಯಾಗಿ ಕಾರು ಸುಡುವ ತೀರ್ಮಾನಕ್ಕೆ ಬಂದು ಕೊನೆಗೂ ಅದನ್ನು ಮಾಡಿಯೇ ಬಿಟ್ಟಿದ್ದಾರೆ. ನಾಲ್ಕು ದಿನಗಳ ಹಿಂದೆ ಮಿಖೈಲ್​ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ. ಖಾಲಿ ಪ್ರದೇಶದ ನಡುವೆ ಕಾರನ್ನು ನಿಲ್ಲಿಸಿ ಕಾರಿಗೆ ಬೆಂಕಿ ಹಚ್ಚಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

    ಇದೀಗ ವಿಡಿಯೋ ವೈರಲ್​ ಆಗಿದ್ದು ಯೂಟ್ಯೂಬ್​ನಲ್ಲಿ 11 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಮಿಖೈಲ್​ ಅವರಿಗೆ 5 ಲಕ್ಷ ಚಂದಾದಾರರಿದ್ದಾರೆ. ವಿಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts